ಲಾಹೋರ್ (PTI): ಭಾರಿ ಮಳೆಯಿಂದಾಗಿ ವಿಮಾನನಿಲ್ದಾಣದಲ್ಲಿ ಇಳಿಸಲಾಗದೆ ಪಾಕಿಸ್ತಾನದ ಅಂತರರಾಷ್ಟ್ರೀಯ ಏರ್‌ಲೈನ್ಸ್ (ಪಿಐಎ) ವಿಮಾನವೊಂದು ಭಾರತದ ವಾಯುಪ್ರದೇಶದಲ್ಲಿ ಭಾನುವಾರ ಸುಮಾರು 10 ನಿಮಿಷ ಹಾರಾಟ ನಡೆಸಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಮಸ್ಕಟ್‌ನಿಂದ ಬಂದ ಪಿಐಎನ ಪಿಕೆ248 ವಿಮಾನ ಇಲ್ಲಿನ ವಿಮಾನ ನಿಲ್ದಾಣದಲ್ಲಿ ಇಳಿಯಬೇಕಿತ್ತು. ಅತಿಯಾದ ಮಳೆಯಿಂದ ಆಗಲಿಲ್ಲ. ನಿಲ್ದಾಣದ ಸಿಬ್ಬಂದಿ ಕೆಲವೊತ್ತು ಸುತ್ತಾಟ ನಡೆಸಲು ಸೂಚಿಸಿದ್ದರು. ಅದರಂತೆ ಹಾರಾಟ ನಡೆಸುವಾಗ ಮಾರ್ಗ ತಿಳಿಯದೆ ಭಾರತದ ವಾಯುಪ್ರದೇಶ ಪ್ರವೇಶಿಸಿತ್ತು ಎಂದು ವರದಿ ವಿವರಿಸಿದೆ.
ಭಾರತದ ಒಳಗೆ ಪ್ರವೇಶಿಸುವಾಗ 13,500 ಅಡಿ ಎತ್ತರದಲ್ಲಿ, ಬಳಿಕ 20,000 ಅಡಿ ಎತ್ತರದಲ್ಲಿ ಹಾರಾಟ ನಡೆಸಿತು. ಭಾರತ ವಾಯುಗಡಿ ವ್ಯಾಪ್ತಿಯಲ್ಲಿ 10 ನಿಮಿಷದಲ್ಲಿ 120 ಕಿ.ಮೀ. ಕ್ರಮಿಸಿತು ಎನ್ನಲಾಗಿದೆ.