HEALTH TIPS

ನಾಗರಿಕ ಕೇಂದ್ರಿತ ಸಂವಹನ ಬಲವರ್ಧನೆ: ಅಧಿಕಾರಿಗಳಿಗೆ ಚಿಂತನ ಶಿಬಿರ

                  ವದೆಹಲಿ: ಮುಂದಿನ ವರ್ಷ ನಡೆಯುವ ಲೋಕಸಭೆ ಚುನಾವಣೆಗೂ ಮುನ್ನ ನಾಗರಿಕ ಕೇಂದ್ರಿತ ಸಂವಹನ ಬಲಪಡಿಸಲು ಮುಂದಾಗಿರುವ ಕೇಂದ್ರ ಸರ್ಕಾರವು ವಾರ್ತಾ ಮತ್ತು ಪ್ರಸಾರ ಸಚಿವಾಲಯ ಹಾಗೂ ಭಾರತೀಯ ಮಾಹಿತಿ ಸೇವೆಯ (ಐಐಎಸ್‌) ಅಧಿಕಾರಿಗಳಿಗಾಗಿ ಬುಧವಾರ ಚಿಂತನ ಶಿಬಿರ ಹಮ್ಮಿಕೊಂಡಿತ್ತು.

                ಶಿಬಿರವನ್ನು ಉದ್ದೇಶಿಸಿ ಮಾತನಾಡಿದ ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್‌ ಠಾಕೂರ್‌, 'ದೇಶದ ಬಹುಪಾಲು ಜನರಿಗೆ ಮಾಧ್ಯಮಗಳ ಪರಿಚಯವಿಲ್ಲ. ಟಿ.ವಿ, ದಿನಪತ್ರಿಕೆ ಸೇರಿದಂತೆ ಇತರೆ ಸೌಲಭ್ಯಗಳಿಂದ ಇವರು ವಂಚಿತರಾಗಿದ್ದಾರೆ. ಸಮಾಜದಲ್ಲಿನ ಇಂತಹ ವರ್ಗದ ಜನರಿಗೆ ಮಾಹಿತಿ ತಲುಪಿಸುವ ಮಹತ್ತರವಾದ ಜವಾಬ್ದಾರಿ ಐಐಎಸ್‌ ಅಧಿಕಾರಿಗಳ ಮೇಲಿದೆ' ಎಂದರು.

                   'ಮಾಧ್ಯಮಗಳ ವಿಸ್ತಾರ ಹಾಗೂ ಜನರು ಮಾಹಿತಿ ಪಡೆಯುವ ವಿಧಾನಗಳು ಬದಲಾಗುತ್ತಿವೆ. 21ನೇ ಶತಮಾನದ ಜನರ ಆಶೋತ್ತರಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಮಾಹಿತಿ ಪ್ರಸರಣದ ವಿಧಾನಗಳನ್ನು ಅಳವಡಿಸಿಕೊಳ್ಳುವ ಅಗತ್ಯವಿದೆ' ಎಂದು ಹೇಳಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries