ಕೊಚ್ಚಿ: ಶಾಲೆ ಪುನರಾರಂಭಕ್ಕೆ ದಿನಗಳು ಮಾತ್ರ ಬಾಕಿಯಿದ್ದು, ಮಾರುಕಟ್ಟೆಯಲ್ಲಿ ತೀವ್ರ ಬೆಲೆ ಏರಿಕೆಯಿಂದ ಜನ ಪರದಾಡುವಂತಾಗಿದೆ. ಬ್ಯಾಗ್, ಪುಸ್ತಕ, ಪೆನ್ಸಿಲ್ ಬಾಕ್ಸ್ ಗಳಿಗೂ ಈ ಬಾರಿ ಭಾರಿ ಬೆಲೆ ಏರಿಕೆಯಾಗಿದೆ. 20 ರಿಂದ 30 ಶೇ. ದÀಷ್ಟು ಬೆಲೆ ಏರಿಕೆಯಾಗಿದೆ.
ಈ ಬಾರಿ ಶಾಲಾ ಮಾರುಕಟ್ಟೆ ಕಳೆದ ವರ್ಷದಷ್ಟು ಕ್ರಿಯಾಶೀಲವಾಗಿಲ್ಲ. ಸದ್ಯ ಬೆಲೆಯೇರಿಕೆಯೇ ವಿಲನ್. 20 ರಿಂದ 30 ರಷ್ಟು ಬೆಲೆಗಳು ಹೆಚ್ಚಿದ್ದು, ಪೋಷಕರು ತಮ್ಮ ಮಕ್ಕಳಿಗೆ ಕಳೆದ ವರ್ಷದ ವಸ್ತುಗಳನ್ನು ಧೂಳುಕೊಡವಿ ಕೈದಾಟಿಸುವ ಯತ್ನದಲ್ಲಿದ್ದಾರೆ.
ಮಕ್ಕಳನ್ನು ಆಕರ್ಷಿಸುವ ವಸ್ತುಗಳು ಅಂಗಡಿಗಳನ್ನು ತಲುಪಿವೆ. ಆದರೆ ಬೆಲೆ ಏರಿಕೆ ಸಂಕಷ್ಟಕ್ಕೆ ದೂಡಿದೆ. ಈ ನಡುವೆ ಕೆಲ ಶಾಲೆಗಳು ಒತ್ತಾಯಪೂರ್ವಕವಾಗಿ ಸರಕುಗಳ ಮೇಲೆ ಹೆಚ್ಚಿನ ಬೆಲೆ ಹೇರುತ್ತಿವೆ ಎಂದು ವರ್ತಕರು ದೂರುತ್ತಿದ್ದಾರೆ. ಪಾಲಕರು ಅಗತ್ಯ ವಸ್ತುಗಳನ್ನು ಮಾತ್ರ ಖರೀದಿಸಿ ತಮ್ಮ ಮಕ್ಕಳಿಗೆ ಹಿಂದಿನ ವರ್ಷದ ಶಾಲಾ ಪರಿಕರಗಳನ್ನು ನೀಡುತ್ತಿದ್ದಾರೆ.