ಕಾಸರಗೋಡು: ಎಂಡೋಸಂತ್ರಸ್ತರಿಗೆ ಸಂತ್ರಸ್ತರಿಗೆ ಉಚಿತ ಔಷಧ ವಿತರಣೆಯನ್ನು ಪುನರಾರಂಭಿಸುವಂತೆ ಒತ್ತಾಯಿಸಿ ಎಂಡೋಸಲ್ಫಾನ್ ಸಂತ್ರಸ್ತರ ಒಕ್ಕೂಟ ವತಿಯಿಂದ ಜಿಲ್ಲಾ ವೈದ್ಯಾಧಿಕಾ( ಡಿಎಂಒ)ಕಚೇರಿಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.
ಸಂತ್ರಸ್ತರ ತಾಯಂದಿರು ಮೇಣದಬತ್ತಿಗಳನ್ನು ಬೆಳಗಿಸುವ ಮೂಲಕ ಮೆರವಣಿಗೆ ಉದ್ಘಾಟಿಸಿದರು. ಎಂಡೋದುಷ್ಪರಿಣಾಮದಿಂದ ಬಳಲುತ್ತಿರುವ ಸಂತ್ರಸ್ತರಿಗೆ ಸರ್ಕಾರ ಸವಲತ್ತುಗಳನ್ನು ನಿಷೇಧಿಸಿದ್ದರೂ, ತಮ್ಮ ಮಕ್ಕಳ ಜೀವ ಉಳಿಸುವ ನಿಟ್ಟಿನಲ್ಲಿ ಔಷಧ ಹಾಗೂ ಚಿಕಿತ್ಸೆ ತಡೆ ಹಿಡಿಯಬಾರದು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಸಂತ್ರಸ್ತರ ತಾಯಂದಿರು ತಮ್ಮ ಮಕ್ಕಳು ಅನುಭವಿಸುತ್ತಿರುವ ಯಾತನೆಯನ್ನು ಪ್ರತಿನಿತ್ಯ ಸಹಿಸಿಕೊಂಡು ತಮ್ಮ ಜೀವನ ಸಾಗಿಸಬೇಕಾದ ದುಸ್ಥಿತಿಯಿದೆ. ಕನಿಷ್ಠ ಔಷಧ ಹಾಗೂ ಚಿಕಿತ್ಸಾ ಸೌಲಭ್ಯ ಒದಗಿಸಿಕೊಡುವ ಮೂಲಕ ಸಂತ್ರಸ್ತರನ್ನು ಪಾರುಮಾಡಬೇಕಾಗಿದೆ. ಸರ್ಕಾರ ತಮ್ಮ ಬೇಡಿಕೆ ಈಡೇರಿಸದಿದ್ದಲ್ಲಿ ತೀವ್ರ ಆಂದೋಲನಕ್ಕೆ ಮುಂದಾಗಬೇಕಾಗುವುದಾಗಿ ಪ್ರತಿಭಟನಾಕಾರರು ತಿಳಿಸಿದ್ದಾರೆ.
ಮುನಿಸಾ ಅಂಬಲತ್ತರ, ಕೆ.ಕೋಟಾನ್, ಪ್ರೇಮಚಂದ್ರನ್ ಚೆಂಬೋಲ, ಅಂಬಲತ್ತರ ಕುಞÂಕೃಷ್ಣನ್, ಅಬ್ದುಲ್ ಖಾದರ್ ಚಟ್ಟಂಚಾಲ್ ಉಪಸ್ಥಿತರಿದ್ದರು. ಗೋವಿಂದನ್ ಕಯ್ಯೂರ್, ಫರೀನಾ ಕೊಟ್ಟಪುರಂ, ಕೆ ಚಂದ್ರಾವತಿ, ಪವಿತ್ರನ್ ತೋಯಮಾಲ್, ಬಾಲಕೃಷ್ಣನ್ ಕಲ್ಲಾರ್, ರೂಪಾ ಪೆರ್ಲ, ನಬೀಸಾ ಕುಂದರ್, ರಾಜನ್ ಕಯ್ಯೂರ್, ಪಿ.ಜೆ.ಆಂಟನಿ ನೇತೃತ್ವ ವಹಿಸಿದ್ದರು.