ತಿರುವನಂತಪುರಂ: ಟ್ರ್ಯಾಕರ್ ನಾಯಿ ಜೆರ್ರಿ ಇನ್ನು ವಿಶ್ರಾಂತಿಯ ಜೀವನ ನಡೆಸಲಿದೆ. ಕೊಲೆ ಶಂಕಿತರು ಸೇರಿದಂತೆ ಅನೇಕ ಅಪರಾಧಿಗಳನ್ನು ನ್ಯಾಯಕ್ಕೆ ತಂದ ಪೋಲೀಸ್ ನಾಯಿ ಜೆರ್ರಿ, ಪಡೆಯಿಂದ ನಿವೃತ್ತಿಯಾಗಿದೆ.
ಎಂಟು ವರ್ಷಗಳ ಸೇವೆಯ ನಂತರ ಜೆರ್ರಿ ಸೇನೆಯಿಂದ ನಿನ್ನೆ ನಿವೃತ್ತಿಗೊಂಡಿತು. ಸದ್ಯಕ್ಕೆ ಕೋಚ್ ವಿಷ್ಣು ಶಂಕರ್ ಜೊತೆ ಜೆರ್ರಿ ಇರಲಿದೆ.
ಜೆರ್ರಿ ತಿರುವನಂತಪುರಂ ಗ್ರಾಮಾಂತರ ಪೊಲೀಸ್ ಪಡೆಯ ಲ್ಯಾಬ್ರಡಾರ್ ವಿಭಾಗದ ನಾಯಿ. ಜೆರ್ರಿಯ ಜೀವನ ಜನಿಸಿದ ಮೂರನೇ ತಿಂಗಳಿನಿಂದ ತರಬೇತುದಾರ ವಿಷ್ಣು ಶಂಕರ್ ಜೊತೆಯಲ್ಲಿತ್ತು. ಜೆರ್ರಿ ಮೂರು ಪೊಲೀಸ್ ಶ್ರೇಷ್ಠ ಪ್ರಶಸ್ತಿಗಳನ್ನು ಒಳಗೊಂಡಂತೆ ಅನೇಕ ಗೌರವಗಳನ್ನು ಪಡೆದಿದೆ.
ಪೊಲೀಸ್ ಪಡೆಯಿಂದ ನಿವೃತ್ತಗೊಂಡ ನಾಯಿಗಳನ್ನು ತ್ರಿಶೂರ್‍ನಲ್ಲಿರುವ ಪೊಲೀಸ್ ವಿಶ್ರಾಂತಿ ಕೇಂದ್ರಕ್ಕೆ ಸ್ಥಳಾಂತರಿಸಲಾಗುತ್ತದೆ. ಆದರೆ ತನ್ನ ವಿರಾಮ ಜೀವನದಲ್ಲಿ ಜೆರ್ರಿ ವಿಷ್ಣು ಶಂಕರ್ ಜೊತೆ ಇರಲಿದೆ. ಇಷ್ಟು ದಿನ ಜೊತೆಗಿದ್ದ ಜೆರ್ರಿಯನ್ನು ಅಗಲುವುದು ಕಷ್ಟ ಎಂದ ವಿಷ್ಣು ಶಂಕರ್ ಅಭಿಪ್ರಾಯಪಟ್ಟಿದ್ದರಿಂದ ಈ ವಿಶೇಷ ಅನುಮತಿ ನೀಡಲಾಗಿದೆ. ನಾಯಿಗೂ ಭಾವನಾತ್ಮಕ ಸಮಸ್ಯೆಗಳು ಎದುರಾಗುತ್ತವೆ ಎಂಬುದು ಅವರ ಅಭಿಮತವಾಗಿತ್ತು. ಕ್ರಿಮಿನಲ್‍ಗಳನ್ನು ಹುಡುಕಲು ತನ್ನೊಂದಿಗೆ ಇರುವ ಪೊಲೀಸರ ಮನಸ್ಸಿನೊಂದಿಗೆ ಕೆಲಸ ಮಾಡುವ ಸಾಮಥ್ರ್ಯ ಜೆರ್ರಿಗೆ ವಿಶೇಷವಾಗಿದೆ ಎಂದು ಅವರು ಹೇಳಿದರು.