ಕಾಸರಗೋಡು: ಪ್ರತಿಭಾ ಪ್ರದರ್ಶನ ಮತ್ತು ವ್ಯಕ್ತಿತ್ವ ವಿಕಾಸ ಕಲಾಶಿಬಿರಗಳಿಂದ ಸಾಧ್ಯ. ರಂಗಭೂಮಿ ನಮ್ಮ ಸಂಸ್ಕಾರ, ಸಂಸ್ಕøತಿಯನ್ನು ಕಲಿಸುತ್ತದೆ. ಮಾನವೀಯ ಮೌಲ್ಯಗಳನ್ನು ತಿಳಿಸುತ್ತದೆ. ಕಾಸರಗೋಡಿನಂತಹ ಸಂಸ್ಕøತಿ ಸಂಪನ್ನವಾದ ನೆಲದಲ್ಲಿ ಕಲಾ ಶಿಬಿರಗಳು ಮತ್ತೆ ಮತ್ತೆ ನಡೆಯಬೇಕಾದ ಅನಿವಾರ್ಯತೆಯಿದೆ ಎಂದು ಹಿರಿಯ ರಂಗಕರ್ಮಿ ಕಾಸರಗೋಡು ಚಿನ್ನಾ ಹೇಳಿದರು.
ಕೋಟೆಕಣಿ ಶ್ರೀ ರಾಮನಾಥ ಸಾಂಸ್ಕøತಿಕ ಭವನ ಸಮಿತಿ ಆಶ್ರಯದಲ್ಲಿ ಶ್ರೀ ರಾಮನಾಥ ಸಾಂಸ್ಕøತಿಕ ಭವನದಲ್ಲಿ ಪ್ರಾರಂಭಗೊಂಡ ಮಕ್ಕಳ ಕಲಾ ಶಿಬಿರದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಬಾಲಗೋಕುಲ ಕಾಸರಗೋಡು ತಾಲೂಕು ಶಿಕ್ಷಣ ಪ್ರಮುಖ್ ದೇವದಾಸ ನುಳ್ಳಿಪ್ಪಾಡಿ ಅವರ ಅಧ್ಯಕ್ಷತೆಯಲ್ಲಿ ಖ್ಯಾತ ಅರಿವಳಿಕೆ ತಜ್ಞ ಡಾ.ವೆಂಕಟಗಿರಿ ಶಿಬಿರವನ್ನು ಉದ್ಘಾಟಿಸಿದರು. ಕಾಸರಗೋಡು ಶ್ರೀ ಲಕ್ಷ್ಮೀವೆಂಕಟೇಶ ವಿದ್ಯಾಲಯದ ನಿರ್ದೇಶಕಿ ಸಾಯಿರತ್ನ ಶುಭಹಾರೈಸಿದರು. ರಾಮನಾಥ ಸಾಂಸ್ಕøತಿಕ ಭವನ ಸಮಿತಿ ಪ್ರಧಾನ ಸಂಚಾಲಕ ಗುರುಪ್ರಸಾದ್ ಕೋಟೆಕಣಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ತ್ರಿವೇದ್ ಕೆ.ವಿ. ಸ್ವಾಗತಿಸಿ, ಪ್ರೇಕ್ಷಾ ಯೋಗೀಶ್ ವಂದಿಸಿದರು. ತ್ರಿಷಾ ಜಿ.ಕೆ. ಕಾರ್ಯಕ್ರಮ ನಿರೂಪಿಸಿದರು. ಬಳಿಕ ಸಂಸ್ಕಾರದ ಕುರಿತು ದೇವದಾಸ್ ನುಳ್ಳಿಪ್ಪಾಡಿ ತರಬೇತಿ ನೀಡಿದರು. ಕಿರಣ್ ಕಲಾಂಜಲಿ ಶಿಬಿರಕ್ಕೆ ನೇತೃತ್ವ ನೀಡಿದರು.