ಬೇಸಿಗೆಯಲ್ಲಿ ತುಂಬಾ ಜನರಿಗೆ ಹೀಟ್ ರ‍್ಯಾಶಶ್ ಸಮಸ್ಯೆ ತುಂಬಾ ಜನರನ್ನು ಕಾಡುತ್ತದೆ. ಬೆನ್ನು ಮೇಲೆ, ಎದೆಯಲ್ಲಿ, ಕೈ ಬೆರಳುಗಳಲ್ಲಿ ಬೆವರು ಕಜ್ಜಿ ಸಮಸ್ಯೆ ಉಂಟಾಗುತ್ತಿದೆ. ಈ ಬೆವರು ಕಜ್ಜಿ ತಡೆಗಟ್ಟುವುದು ಹೇಗೆ ಎಂದು ನೋಡುವುದಾದರೆ ತೆಂಗಿನೆಣ್ಣೆ ತುಂಬಾನೇ ಪರಿಣಾಮಕಾರಿ ಎಂಬುವುದು ಗೊತ್ತೇ? ತೆಂಗಿನೆಣ್ಣೆ ಹಲವು ಬಗೆಯ ತ್ವಚೆ ಸಮಸ್ಯೆಗೆ ತುಂಬಾನೇ ಒಳ್ಳೆಯದು. ತ್ವಚೆ ಸಮಸ್ಯೆ ಗುಣ ಪಡಿಸಲು ತೆಂಗಿನೆಣ್ಣೆ ಹೇಗೆ ಸಹಕರಿ ಎಂಬುವುದನ್ನು ನೋಡೋಣ ಬನ್ನಿ:
ಹೀಟ್ ರ‍್ಯಾಶಶ್‌ಗೆ ತೆಂಗಿನೆಣ್ಣೆಬೇಸಿಗೆಯಲ್ಲಿ ಮೈಗೆ ತೆಂಗಿನೆಣ್ಣೆ ಹಚ್ಚಿದರೆ ತುಂಬಾನೇ ಒಳ್ಳೆಯದು. ಇದರಿಂದ ತ್ವಚೆಯಲ್ಲಿ ಉರಿಯೂತ ತಡೆಗಟ್ಟಲು ತುಂಬಾನೇ ಸಹಕಾರಿಯಾಗಿದೆ. ಆದ್ದರಿಂದ ಬೇಸಿಗೆಯಲ್ಲಿ ತ್ವಚೆಗೆ ಸ್ವಲ್ಪ ತೆಂಗಿನೆಣ್ಣೆ ಹಚ್ಚುವುದರಿಂದ ಹೀಟ್ ರ‍್ಯಾಶಶ್ ತಡೆಗಟ್ಟಲು ಸಹಕಾರಿಯಾಗಿದೆ.
ಮೊಡವೆ ತ್ವಚೆ ಇರುವವರಿಗೆ ಅಪಾಯಕಾರಿ: ನಿಮಗೆ ಮೊಡವೆ ಸಮಸ್ಯೆಯಿದ್ದರೆ ತೆಂಗಿನೆಣ್ಣೆ ಹಚ್ಚುವುದು ಉತ್ತಮ ಆಯ್ಕೆಯಲ್ಲ, ಜಿಡ್ಡಿನಂಶ ತ್ವಚೆ ಸಮಸ್ಯೆಯನ್ನು ಮತ್ತಷ್ಟು ಹೆಚ್ಚು ಮಾಡುತ್ತದೆ. ಇನ್ನು ಬೇಸಿಗೆಯಲ್ಲಿ ಬೆವರಿದಾಗ ನಿಮ್ಮ ಮೊಡವೆ ಸಮಸ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಮೊಡವೆ ಸಮಸ್ಯೆ ಇರುವವರು ಮುಖವನ್ನು ಆಗಾಗ ತಣ್ಣೀರಿನಿಂದ ತೊಳೆಯಿರಿ.
ಶೆಖೆ ಗುಳ್ಳೆಗಳಿಗೆ ತೆಂಗಿನೆಣ್ಣೆ ಹೇಗೆ ಬಳಸಬೇಕು?
ತೆಂಗಿನೆಣ್ಣೆಯನ್ನು ಮೈಗೆ ಹಚ್ಚಿ ಅರ್ಧ ಗಂಟೆ ಬಿಟ್ಟು ತಣ್ಣೀರಿನಲ್ಲಿ ಸೋಪು ಹಚ್ಚದೆ ಮೈ ತೊಳೆಯಿರಿ. ನಂತರ ಸ್ನಾನದ ಬಳಿಕ ತೆಂಗಿನೆಣ್ಣೆ ಹಚ್ಚಿ. ಇದರಿಂದ ತುರಿಕೆ ಕಡಿಮೆಯಾಗುವುದು. ತೆಂಗಿನೆಣ್ಣೆ ಹಚ್ಚಿ ತುಂಬಾ ಹೊತ್ತು ಇದ್ದಾಗ ಕೆಲವೊಮ್ಮೆ ಕಿರಿಕಿರಿ ಅನಿಸಿದರೆ ತಣ್ಣೀರ ಸ್ನಾನ ಮಾಡಿ.
ತೆಂಗಿನೆಣ್ಣೆ ಸನ್‌ಬರ್ನ್‌ನಿಂದ ರಕ್ಷಣೆ ನೀಡುತ್ತದೆ
ಉರಿ ಬಿಸಿಲಿನಲ್ಲಿ ಸ್ವಲ್ಪ ಹೊತ್ತು ಬಿಸಿಲಿನಲ್ಲಿ ಓಡಾಡಿದರೆ ಸನ್‌ಬರ್ನ್‌ನಿಂದ ಚರ್ಮ ಸುಟ್ಟಂತಾಗುವುದು. ತೆಂಗಿನೆಣ್ಣೆ ನೇರಳಾತೀತ ಕಿರಣಗಳಿಂದ ತ್ವಚೆಯನ್ನು ರಕ್ಷಣೆ ಮಾಡುತ್ತದೆ.
ಡ್ರೈ ತ್ವಚೆ ತಡೆಗಟ್ಟುತ್ತದೆ
ಸನ್‌ಬರ್ನ್‌ನಿಂದ ಡ್ರೈ ಸ್ಕಿನ್ ( ಒಣ ತ್ವಚೆಯ) ಸಮಸ್ಯೆ ಉಂಟಾಗುವುದು. ಕೆಲವರಿಗೆ ತ್ವಚೆಯ ಸಿಪ್ಪೆ ಎದ್ದು ಹೋಗುವುದು, ತುರಿಕೆ ಈ ಬಗೆಯ ಸಮಸ್ಯೆ ಹೋಗಲಾಡಿಸುವಲ್ಲಿ ತೆಂಗಿನೆಣ್ಣೆ ಪರಿಣಾಮಕಾರಿಯಾಗಿದೆ. ತೆಂಗಿನೆಣ್ಣೆ ಊತ, ತ್ವಚೆ ಕೆಂಪಾಗುವುದು ಈ ಬಗೆಯ ಸಮಸ್ಯೆ ತಡೆಗಟ್ಟುವಲ್ಲಿ ತುಂಬಾನೇ ಸಹಕಾರಿಯಾಗಿದೆ.
ನೀವು ಸನ್‌ಸ್ಕ್ರೀನ್ ಹಚ್ಚುವ ಬದಲಿಗೆ ತೆಂಗಿನೆಣ್ಣೆ ಹಚ್ಚಿದರೂ ಒಳ್ಳೆಯದು.
ತ್ವಚೆ ಸೋಂಕು ತಡೆಗಟ್ಟಲು ಸಹಕಾರಿಯಾಗಿದೆ
ಬೇಸಿಗೆಯಲ್ಲಿ ಅಥ್ಲೇಟ್ ಫೂಟ್‌ನಂಥ ಸಮಸ್ಯೆ ತಡೆಗಟ್ಟಲು ತುಂಬಾನೇ ಸಹಕಾರಿಯಾಗಿದೆ. ಸೆಕೆ ಹೆಚ್ಚಾದಂತೆ ಬೆವರು ಗ್ರಂಥಿಗಳು ಒವರ್ ಆ್ಯಕ್ಟಿವ್ ಆಗುವುದರಿಂದ ತ್ವಚೆ ಸಮಸ್ಯೆ ಉಂಟಾಗುವುದು. ಇದರಿಂದ ಮೈಯಲ್ಲಿ ಕಜ್ಜಿ , ಗುಳ್ಳೆಗಳು ಉಂಟಾಗುವುದು. ತೆಂಗಿನೆಣ್ಣೆ ಹಚ್ಚುವುದರಿಂದ pH ಬ್ಯಾಲೆನ್ಸ್ ಉಂಟಾಗುವುದು.
ತ್ವಚೆ ಸಮಸ್ಯೆಗೆ ತೆಂಗಿನೆಣ್ಣೆ ಹೇಗೆ ಬಳಸಬಹುದು
* ತೆಂಗಿನೆಣ್ಣೆಯನ್ನು ರಾತ್ರಿ ಮಲಗುವಾಗ ಮೈಗೆ ಹಚ್ಚಿ ನಂತರ ಬೆಳಗ್ಗೆ ಮೈ ತೊಳೆಯಿರಿ.
* ಅರಿಶಿಣ ಪುಡಿ ಅಥವಾ ಕಹಿ ಬೇವಿನ ಪುಡಿಗೆ ತೆಂಗಿನೆಣ್ಣೆ ಹಾಕಿ ಮಿಕ್ಸ್ ಮಾಡಿ ಅದನ್ನು ಮೈಗೆ ಹಚ್ಚಿ 15 ನಿಮಿಷ ಬಿಟ್ಟು ಮೈ ತೊಳೆಯಿರಿ.
* ಫಂಗಲ್ ಸೋಂಕು ಇದ್ದರೆ ಟೀ ಟ್ರೀ ಆಯಿಲ್ ಹಾಗೂ ತೆಂಗಿನೆಣ್ಣೆ ಮಿಶ್ರ ಮಾಡಿ ಹಚ್ಚಿದರೆ ಫಂಗಲ್ ಸೋಂಕು ಕಡಿಮೆಯಾಗುವುದು.
ಕ್ಷರೋಟಿಕ್ ತ್ವಚೆ
ಬೇಸಿಗೆಯಲ್ಲಿ ತ್ವಚೆ ತುಂಬಾ ಡ್ರೈಯಾಗುವುದು. ಇದರಿಂದ ತ್ವಚೆಯಲ್ಲಿ ತುರಿಕೆ ಕಂಡು ಬರುವುದು. ಅತ್ಯಧಿಕ ಸೆಕೆಯಿಂದಾಗಿ ದೇಹದಲ್ಲಿ ನೀರಿನಂಶ ಕಡಿಮೆಯಾಗುವುದು. ಇದರಿಂದಾಗಿ ಮೈಯಲ್ಲಿ ತುರಿಕೆ ಉಂಟಾಗುವುದು.
ತೆಂಗಿನೆಣ್ಣೆಯಲ್ಲಿರುವ ಕೊಬ್ಬಿನಂಶ ಈ ಬಗೆಯ ಸಮಸ್ಯೆ ತಡೆಗಟ್ಟಲು ತುಂಬಾನೇ ಸಹಕಾರಿಯಾಗಿದೆ. ತೆಂಗಿನೆಣ್ಣೆಯನ್ನು ತ್ವಚೆಯಲ್ಲಿ ಮಾಯಿಶ್ಚರೈಸರ್ ಕಾಪಾಡಲು ತುಂಬಾನೇ ಸಹಕಾರಿಯಾಗಿದೆ.
ಬಳಸುವುದು ಹೇಗೆ?
* ನೀವು ತೆಂಗಿನೆಣ್ಣೆ ಮೈಗೆ ಹಚ್ಚಿ, ನಂತರ ಮೆಲ್ಲನೆ ತಟ್ಟಿ.
* ತ್ವಚೆಗೆ ಬಳಸುವ ಮಾಯಿಶ್ಚರೈಸರ್ ಜೊತೆ ತೆಂಗಿನೆಣ್ಣೆ ಮಿಶ್ರ ಮಾಡಿ ಹಚ್ಚಿದರೆ ತುಂಬಾ ಒಳ್ಳೆಯದು.
ಬೇಸಿಗೆಯಲ್ಲಿ ಔಟ್‌ಡೋರ್ ಚಟುವಟಿಕೆ ಮಾಡುವಾಗ ತೆಂಗಿನೆಣ್ಣೆ ಹಚ್ಚಿ
ಹೊರಗಡೆ ಸುತ್ತಾಡುವಾಗ, ಬೀಚ್‌ಗೆ ಹೋಗುವಾಗ ಅಥವಾ ಹೊರಗಡೆ ಬಿಸಿಲಿನಲ್ಲಿ ಆಟ ಆಡುವಾಗ ತೆಂಗಿನೆಣ್ಣೆ ಹಚ್ಚಿದರೆ ಸೂರ್ಯನ ಕಿರಣಗಳಿಂದ ತ್ವಚೆ ರಕ್ಷಣೆ ಮಾಡುತ್ತದೆ. ಬಿಸಿಲಿನಲ್ಲಿ ಆಟ ಆಡುವಾಗ ತೆಂಗಿನೆಣ್ಣೆಯನ್ನು ಮೈಗೆ ಆಗಾಗ ಹಚ್ಚಿ.
ಹೈವ್ಸ್ ತಡೆಗಟ್ಟಲು ಸಹಕಾರಿ
ಹೈವ್ಸ್ ಎಂಬುವುದು ಕೂಡ ಒಂದು ಬಗೆಯ ತ್ವಚೆ ಸಮಸ್ಯೆಯಾಗಿದೆ. ತ್ವಚೆಯಲ್ಲಿ ತುರಿಜೆ, ತ್ವಚೆ ಕೆಂಪಾಗುವುದು ಇದರ ಪ್ರಮುಖ ಲಕ್ಷಣವಾಗಿದೆ. ಕೆಲವೊಂದು ಆಹಾರ ಸೇವಿಸಿದಾಗ, ಅಥವಾ ಪ್ರಾಣಿಗಳ ಮೇಲಿರುವ ಕೀಟ ಕಚ್ಚಿದಾಗ ಈ ರೀತಿ ಹೈವ್ಸ್ ಉಂಟಾಗುವುದು. ಈ ಬಗೆಯ ಹೈವ್ಸ್ ದೇಹದ ಯಾವುದೇ ಭಾಗದಲ್ಲಿ ಬೇಕಾದರೆ ಕಂಡು ಬರಬಹುದು.
* ಫೂಟ್ ಸ್ಪಾ ಮಾಡಿಸುವಾಗ ಬಳಸಬಹುದು
ನೀವು ಫೂಟ್ ಸ್ಪಾ ಮಾಡುವಾಗ ತೆಂಗಿನೆಣ್ಣೆ ಬಳಸಿದರೆ ಪಾದಗಳಲ್ಲಿ ಕಂಡು ಬರುವ ಫಂಗಲ್ ಸೋಂಕು ತಡೆಗಟ್ಟಬಹುದು.
* ಈಜುಗಾರರಿಗೂ ಸಹಕಾರಿ
ಶುದ್ಧವಿಲ್ಲದ ನೀರಿನಲ್ಲಿ ಈಜಾಡಿದರೆ ಕೆಲವರಿಗೆ ಕಿವಿಯಲ್ಲಿ ತುರಿಕೆ ಕಂಡು ಬರುವುದು, ಸ್ನಾನದ ಬಳಿಕ ತೆಂಗಿನೆಣ್ಣೆ ಹಚ್ಚಿದರೆ ಈ ಬಗೆಯ ತುರಿಕೆ ತಡೆಗಟ್ಟಬಹುದು.
ಈ ರೀತಿ ತೆಂಗಿನೆಣ್ಣೆ ಬೇಸಿಗೆಯಲ್ಲಿ ಕಾಡುವ ತ್ವಚೆ ಸಮಸ್ಯೆ ತಡೆಗಟ್ಟಲು ತುಂಬಾನೇ ಸಹಕಾರಿಯಾಗಿದೆ.