ಬದಿಯಡ್ಕ: ಕುಂಬ್ಡಾಜೆ ಪಂಚಾಯಿತಿ ನೇರಪ್ಪಾಡಿ ನಿವಾಸಿ, ಶಿಕ್ಷಣ ಇಲಾಖೆ ನಿವೃತ್ತ ಉದ್ಯೋಗಿ ಅರವಿಂದ ಕುಮಾರ್ ಅಲೆವೂರಾಯ(64)ಶುಕ್ರವಾರ ನಿಧನರಾದರು. ಕಾಸರಗೋಡು ಡಿಡಿಇ ಕಚೇರಿಯಲ್ಲಿ ಅಕೌಂಟ್ ಅಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಇವರು ಧಾರ್ಮಿಕ, ಸಾಮಾಜಿಕ ರಂಗದ ಮುಖಂಡರಾಗಿದ್ದರು.
ಶಿವಳ್ಳಿ ಬ್ರಾಹ್ಮಣ ಸಭಾ ಕಾಸರಗೋಡು ಜಿಲ್ಲಾಧ್ಯಕ್ಷ, ಪಿಂಚಣಿದಾರರ ಸಂಘದ ಮಾಜಿ ಕಾರ್ಯದರ್ಶಿಯಾಗಿದ್ದರು. ಅವರು ತಾಯಿ, ಪತ್ನಿ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ.