ಕಾಸರಗೊಡು: ನೂತನ ಸಂಸತ್‍ಭವನ ಉದ್ಘಾಟನೆಯನ್ನು ಆರೆಸ್ಸೆಸ್ ನೇತಾರ ಸಾವರ್ಕರ್ ಜನ್ಮ ದಿನದಂದು ನಡೆಸುತ್ತಿರುವುದು ಸ್ವಾತಂತ್ರ್ಯ ಹೋರಾಟಗಾರರಿಗೆ ಎಸಗುವ ಅಪಮಾನವಾಗಿದೆ ಎಂದು ರಾಜ್ಯ ಲೋಕೊಪಯೋಗಿ, ಪ್ರವಾಸೋದ್ಯಮ ಖಾತೆ ಸಚಿವ ಪಿ.ಎ ಮಹಮ್ಮದ್ ರಿಯಾಸ್ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ವಿವಿಧ ಕಾರ್ಯಕ್ರಮದಲ್ಲಿ ಭಾಗವಹಿಸಲು ಕಾಸರಗೋಡಿಗೆ ಆಗಮಿಸಿದ್ದ ಅವರು ಸುದ್ದಿಗಾರರ ಜತೆ ಮಾತನಾಡಿದರು. ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡು ಸೆರೆಮನೆ ವಾಸ ಅನುಭವಿಸಿದ್ದ ಸಂದರ್ಭ ತಾನು ಮಾಡಿರುವುದು ತಪ್ಪಾಗಿದೆ ಎಂದು ಬ್ರಿಟಿಷ್ ಸೇನೆಯ ಕ್ಷಮೆ ಯಾಚಿಸಿರುವ ಸಾವರ್ಕರ್ ಜನ್ಮ ದಿನದಂದು ಪವಿತ್ರ ಸಂಸತ್ ಭವನದ ಉದ್ಘಾಟನೆ ಹಮ್ಮಿಕೊಂಡಿರುವುದು ಸ್ವಾತಂತ್ರ್ಯ ಹೋರಾಟಗಾರರಿಗೆ ಮಾತ್ರವಲ್ಲಿ ಸಂವಿಧಾನಕ್ಕೆ ಎಸಗುವ ಅಪಚಾರವಾಗಲಿದೆ ಎಂದು ತಿಳಿಸಿದರು.