ತಿರುವನಂತಪುರಂ: ಸಿನಿಮಾ ಒಂದು ಕಲೆಯಾಗಿದ್ದು, ಅದನ್ನು ದ್ವೇಷ, ಪ್ರತೀಕಾರದ ಮಾತುಗಳಿಗೆ ಹೋಲಿಸಲು ಸಾಧ್ಯವಿಲ್ಲ ಎಂದು ಕೇರಳ ಹೈಕೋರ್ಟ್ ಹೇಳಿದೆ.
ಕೇರಳ ಸ್ಟೋರಿ ಟೀಸರ್ ನೋಡಿ ಮಾತ್ರ ಸಿನಿಮಾದ ಬಗ್ಗೆ ತೀರ್ಪು ನೀಡಬಾರದು ಎಂದು ಕೋರ್ಟ್ ಉಲ್ಲೇಖಿಸಿದೆ. ನ್ಯಾಯಾಲಯದ ಈ ರೀತಿಯ ಉಲ್ಲೇಖ ಚಿತ್ರಕ್ಕೆ ತಕ್ಷಣ ತಡೆ ನೀಡಬೇಕೆಂಬ ಬೇಡಿಕೆಯನ್ನು ತಿರಸ್ಕರಿಸಿದೆ.
ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ನಿನ್ನೆ ಮಧ್ಯಂತರ ಆದೇಶ ನೀಡಿತ್ತು. ಚಿತ್ರ ಪ್ರದರ್ಶನಕ್ಕೆ ತಡೆ ನೀಡುವಂತೆ ಕೋರಿ ರಾಜೀವ್ ಗಾಂಧಿ ಸ್ಟಡಿ ಸರ್ಕಲ್ ಎನ್‍ಜಿಒ ಪದಾಧಿಕಾರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ ಚಿತ್ರದಲ್ಲಿನ ಟೀಸರ್‍ನ ಉಲ್ಲೇಖಗಳನ್ನು ಚಿತ್ರದ ಪೂರ್ಣ ಉದ್ದೇಶವೆಂದು ಪರಿಗಣಿಸಬಹುದೇ ಎಂದು ನ್ಯಾಯಾಲಯವು ಅರ್ಜಿದಾರರನ್ನು ಕೇಳಿದೆ. ಅಲ್ಲದೇ ನೀವು ಟೀಸರ್ ಮಾತ್ರವಲ್ಲದೇ ಚಿತ್ರವನ್ನೂ ನೋಡಿದ್ದೀರಾ ಎಂದು ಕೋರ್ಟ್ ಕೇಳಿದೆ. ಮತ್ತು ಕೇವಲ ಟೀಸರ್ ನೋಡಿ ಚಿತ್ರದ ಬಗ್ಗೆ ಹೇಗೆ ತೀರ್ಪು ನೀಡಬಹುದು ಎಂಬ ಪ್ರಶ್ನೆಯನ್ನೂ ಅರ್ಜಿದಾರರು ಎತ್ತಿದ್ದಾರೆ.
ಅರ್ಜಿಯಲ್ಲಿ ಸೆನ್ಸಾರ್ ಮಂಡಳಿ ಸ್ಪಷ್ಟನೆಯನ್ನೂ ಕೇಳಲಾಗಿತ್ತು. ಹೈಕೋರ್ಟ್ ಶುಕ್ರವಾರ ಮತ್ತೆ ಅರ್ಜಿಯ ವಿಚಾರಣೆ ನಡೆಸಲಿದೆ. ‘ದಿ ಕೇರಳ ಸ್ಟೋರಿ’ಯ ಹಲವು ಭಾಗಗಳು ಕೇರಳದ ಮಾನಹಾನಿ ಮಾಡುವ ಉದ್ದೇಶ ಹೊಂದಿದ್ದು, ಸೆನ್ಸಾರ್ ಮಂಡಳಿಯು ಕೇವಲ 10 ದೃಶ್ಯಗಳನ್ನು ಮಾತ್ರ ತೆಗೆದುಹಾಕಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ. ಈ ನಿಟ್ಟಿನಲ್ಲಿ ನ್ಯಾಯಾಲಯ ವಿವರಣೆ ಕೇಳಿತ್ತು. ಚಿತ್ರದಲ್ಲಿನ ದ್ವೇಷದ ಭಾಷಣವನ್ನು ತೆಗೆದುಹಾಕಬೇಕು ಮತ್ತು ಎ ಪ್ರಮಾಣಪತ್ರ ನೀಡುವ ಪ್ರಕ್ರಿಯೆಯನ್ನು ರದ್ದುಗೊಳಿಸಬೇಕು ಎಂದು ಅರ್ಜಿದಾರರು ಒತ್ತಾಯಿಸಿದ್ದಾರೆ.
ನ್ಯಾಯಮೂರ್ತಿ ಎನ್.ನಗರೇಶ್ ಮತ್ತು ನ್ಯಾಯಮೂರ್ತಿ ಮೊಹಮ್ಮದ್ ನಿಯಾಜ್ ಅವರಿದ್ದ ವಿಭಾಗೀಯ ಪೀಠವು ನಿನ್ನೆ ಅರ್ಜಿಯ ವಿಚಾರಣೆ ನಡೆಸಿತು. ಕೋರ್ಟ್ ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್‍ನಿಂದ ಸೂಚನೆಗಳನ್ನು ಕೇಳಿದೆ ಮತ್ತು ಚಿತ್ರಕ್ಕೆ ಎ ಪ್ರಮಾಣಪತ್ರವನ್ನು ನೀಡಿದೆ.