ಪೆರ್ಲ : ಎಣ್ಮಕಜೆ ಗ್ರಾಮ ಪಂಚಾಯತಿ ಆರೋಗ್ಯ ಇಲಾಖೆಯ ನೇತೃತ್ವದಲ್ಲಿ ಮಳೆಗಾಲ ಪೂರ್ವ ಶುಚಿತ್ವ ಮಾಹಿತಿ ಕಾರ್ಯಗಾರ ಮಂಗಳವಾರ ಪಂಚಾಯತಿ ಸಭಾಂಗಣದಲ್ಲಿ ಜರಗಿತು.
ಎಣ್ಮಕಜೆ ಗ್ರಾ.ಪಂ.ವ್ಯಾಪ್ತಿಯ ಶಾಲೆ ಹಾಗೂ ಸಭಾಂಗಣಗಳ ಮುಖ್ಯಸ್ಥರನ್ನು ಒಟ್ಟುಗೂಡಿಸಿ ಮಾಹಿತಿ ನೀಡಿದ ಕಾರ್ಯಕ್ರಮವನ್ನು ಎಣ್ಮಕಜೆ ಗ್ರಾ.ಪಂ. ಅಧ್ಯಕ್ಷ ಸೋಮಶೇಖರ್ ಜೆ.ಎಸ್.ಉದ್ಘಾಟಿಸಿ ಮಾತನಾಡಿ, 'ಈಗಾಗಲೇ ಪಂಚಾಯತಿಯಲ್ಲಿ ಕ್ಲೀನ್ ಎಣ್ಮಕಜೆ, ºಸಿರು ಕ್ರಿಯಾಸೇನೆಯ ಮೂಲಕ ಶುಚಿತ್ವಕ್ಕೆ ಆದ್ಯತೆ ನೀಡಲಾಗುತ್ತಿದ್ದು ಮಳೆಗಾಲ ಪೂರ್ವ ಯೋಜಿತವಾಗಿ ಸಾಂಕ್ರಮಿಕ ರೋಗಗಳನ್ನು ದೂರೀಕರಿಸುವ ನಿಟ್ಟಿನಲ್ಲಿ ಮಾಲಿನ್ಯದ ಬಗ್ಗೆ ಮುಂಜಾಗ್ರತೆ ಅತೀ ಅಗತ್ಯ'" ಎಂದರು.
ಗ್ರಾ.ಪಂ.ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎಸ್.ಗಾಂಭೀರ್, ಕ್ಷೇಮಾಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ಸೌಧಾಭಿ ಹನೀಫ್, ಪಂ.ಸದಸ್ಯರಾದ ರಮ್ಲ, ಮಹೇಶ್ ಭಟ್, ಇಂದಿರಾ, ಉಷಾ, ಆಶಾಲತಾ, ಝರೀನಾ ಮುಸ್ತಾಫ ಮೊದಲಾದವರು ಉಪಸ್ಥಿತರಿದ್ದರು. ಕೆಯ್ಯೂರ್ ಎಫ್ ಎಚ್ ಸಿ ಹೆಲ್ತ್ ಇನ್ಸ್ ಪೇಕ್ಟರ್ ಕೆ.ರಾಜೀವನ್ ಹಾಗೂ ಜೈವ ಮಾಲಿನ್ಯ ಸಂಸ್ಕರಣಾ ಏಜೆನ್ಸಿಯಾದ ಐಆರ್ ಟಿಸಿ ಯ ಪ್ರತಿನಿಧಿ ಸುಧೀಕ್ ಚೇಗಾವರ್ ತರಬೇತಿ ನೀಡಿದರು. ಪಂ.ಕಾರ್ಯದರ್ಶಿ ಸುನಿಲ್ ಆರ್ ಸ್ವಾಗತಿಸಿ, ಹೆಡ್ ಕ್ಲಾರ್ಕ್ ಪ್ರೇಮ್ ಚಂದ್ ವಂದಿಸಿದರು.