ಪೆರ್ಲ: ಕೇರಳ ಸರ್ಕಾರದ 100 ದಿನಗಳ ಕಾರ್ಯಕ್ರಮದಡಿ ಜಾರಿಗೆ ತಂದಿರುವ ಸಿಟಿಜನ್ ಫೆಸಿಲಿಟೇಶನ್ ಸೆಂಟರ್ ನ್ನು ‘‘ಜೊತೆಗಿದ್ದೇವೆ ಖಂಡಿತವಾಗಿಯೂ’’ ಎಂಬ ಟ್ಯಾಗ್ ಲೈನ್ ನೊಂದಿಗೆ ಎಣ್ಮಕಜೆ ಗ್ರಾಮ ಪಂಚಾಯತಿನ ಲ್ಲಿ ಆರಂಭಿಸಲಾಯಿತು. ಗ್ರಾಮ ಪಂಚಾಯತ್ ಅಧ್ಯಕ್ಷ ಸೋಮಶೇಖರ ಜೆ.ಎಸ್. ಅವರು ಉದ್ಘಾಟಿಸಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು, ವಿವಿಧ ಇಲಾಖೆಗಳು, ಸಂಸ್ಥೆಗಳು, ವಿಶ್ವವಿದ್ಯಾಲಯಗಳು ಮತ್ತು ಸಾಂವಿಧಾನಿಕ ಸಂಸ್ಥೆಗಳು ಒದಗಿಸುವ ಎಲ್ಲಾ ಸೇವೆಗಳ ಮಾಹಿತಿಯು ಈ ಕೇಂದ್ರದಲ್ಲಿ ಸಾರ್ವಜನಿಕರಿಗೆ ಲಭ್ಯವಾಗಲಿದೆ. ಸಿಟಿಜನ್ ಫೆಸಿಲಿಟೇಶನ್ ಸೆಂಟರ್ ನಡೆಸಲು ಗ್ರಾಮ ಪಂಚಾಯತ್ ತಾಂತ್ರಿಕ ಸಹಾಯಕರನ್ನು ನಿಯೋಜಿಸಲಾಗಿದೆ.