ನವದೆಹಲಿ: ಕಂಪನಿ ದಿವಾಳಿಯಾಗಿ, ಆಸ್ತಿ ಮಾರಾಟದ ಸ್ಥಿತಿ ಬಂದಾಗ ನೌಕರರ ಬಾಕಿ ವೇತನ ಪಾವತಿಗೆ ಆದ್ಯತೆ ನೀಡಬೇಕು ಎಂದು ನಿರ್ದೇಶನ ನೀಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಈ ಸಂಬಂಧ ಜಾರಿಯಲ್ಲಿರುವ ಕಾನೂನುಗಳ ಪ್ರಕಾರವೇ ಬಾಕಿ ಪಾವತಿ ನಡೆಯಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ.

'ಮೋಸರ್ ಬೇರ್ ಕರ್ಮಚಾರಿ ಸಂಘಟನೆ'ಯು ಈ ಸಂಬಂಧ ಅರ್ಜಿ ಸಲ್ಲಿಸಿತ್ತು. ಕಂಪನಿಯ ಆಸ್ತಿ ಮಾರಾಟದ ನಂತರ ಸಾಲ ಮರುಪಾವತಿಗೆ ಆದ್ಯತೆ ಇದೆ. ಆ ಆದ್ಯತೆಯನ್ನು ವಜಾಗೊಳಿಸಿ, ನೌಕರರ 24 ತಿಂಗಳ ವೇತನ ಬಾಕಿ ಪಾವತಿಗೆ ನಿರ್ದೇಶನ ನೀಡಿ ಎಂದು ಸಂಘಟನೆಯು ಕೋರಿತ್ತು.
ನ್ಯಾಯಮೂರ್ತಿಗಳಾದ ಎಂ.ಆರ್.ಶಾ ಮತ್ತು ಸಂಜೀವ್ ಖನ್ನಾ ಅವರಿದ್ದ ಪೀಠವು ಅರ್ಜಿಯ ವಿಚಾರಣೆ ನಡೆಸಿತ್ತು.
ಪೀಠವು, ದಿವಾಳಿ ಮತ್ತು ಆಸ್ತಿ ನಗದೀಕರಣದ ವೇಳೆ ಯಾವ ಬಾಕಿಗಳನ್ನು ಮೊದಲು ಪಾವತಿಸಬೇಕು ಹಾಗೂ ನೌಕರರ ಬಾಕಿ ವೇತನವನ್ನು ಯಾವಾಗ ಪಾವತಿಸಬೇಕು ಎಂಬುದನ್ನು ಸಂಬಂಧಿತ ಕಾಯ್ದೆಗಳಲ್ಲಿ ಸ್ಪಷ್ಟಪಡಿಸಲಾಗಿದೆ. ಕಂಪನಿಗೆ ಸಾಲ ನೀಡಿದ್ದವರಿಗೇ ಮರುಪಾವತಿಯಲ್ಲಿ ಆದ್ಯತೆ ಇದೆ. ಈ ಆದ್ಯತಾ ಶ್ರೇಣಿ ವ್ಯವಸ್ಥೆಯನ್ನು ಬದಲಿಸಿದರೆ, ಸಾಲ ನೀಡಿದವರ ಹಕ್ಕುಗಳಿಗೆ ಚ್ಯುತಿಯಾಗುತ್ತದೆ. ಹೀಗಾಗಿ ಆದ್ಯತೆಯನ್ನು ಬದಲಿಸಲು ಸಾಧ್ಯವಿಲ್ಲ' ಎಂದು ಹೇಳಿದೆ. ಅರ್ಜಿಯನ್ನು ವಜಾ ಮಾಡಿದೆ.