HEALTH TIPS

ಅದಾಲತ್ ಮೂಲಕ ಜನಸಾಮಾನ್ಯರ ಸಮಸ್ಯೆಗಳಿಗೆ ಸಕಾಲದಲ್ಲಿ ಪರಿಹಾರ-ಸಚಿವ ಮಹಮ್ಮದ್ ರಿಯಾಸ್

                 ಕಾಸರಗೋಡು: ಜನಸಮಾನ್ಯರ ದೂರುಗಳಿಗೆ ಸಕಾಲದಲ್ಲಿ ಪರಿಹಾರ ಕಂಡುಕೊಂಡಾಗ ಮಾತ್ರ ದೂರು ಪರಿಹಾರ ಅದಾಲತ್ ಯಶಸ್ವಿಯಾಗಲು ಸಾಧ್ಯ ಎಂದು ಲೋಕೋಪಯೋಗಿ, ಪ್ರವಾಸೋದ್ಯಮ ಖಾತೆ ಸಚಿವ ಸಿ.ಎ.ಮಹಮ್ಮದ್ ರಿಯಾಸ್ ತಿಳಿಸಿದ್ದಾರೆ.

        ಅವರು ಶನಿವಾರ ಕಾಸರಗೋಡು ನಗರಸಭಾ ಟೌನ್‍ಹಾಲ್ ಸಭಾಂಗಣದಲ್ಲಿ ನಡೆದ ತಾಲೂಕು ಮಟ್ಟದ ದೂರು ಪರಿಹಾರ ಅದಾಲತ್ ಉದ್ಘಾಟಿಸಿ ಮಾತನಾಡಿದರು. ಎಡರಂಗ ಸರ್ಕಾರದ ಎರಡನೇ ವರ್ಷಾಚರಣೆ ಅಂಗವಾಗಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಎಲ್ಲಾ ವಿಭಾಗದ ಜನತೆಯ ಸಮಸ್ಯೆಗಳನ್ನು ಆಲಿಸಿ ಇವುಗಳ ಪರಿಹಾರಕ್ಕೆ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ. ಸ್ಥಳದಲ್ಲೆ ದುರುಗಲಿಗೆ ಪರಿಹಾರ ಕಲ್ಪಿಸಲಾಗುವುದು, ಇನ್ನು ಜಟಿಲ ಸಮಸ್ಯೆಗಳಿದ್ದಲ್ಲಿ, ಜಿಲ್ಲಾಧಿಕಾರಿ ನೆತೃತ್ವದಲ್ಲಿ ಇತರ ಅಧಿಕಾರಿಗಳ ಸಮ್ಮುಖ ಪರಿಹಾರ ಕಲ್ಪಿಸಲಾಗುವುದು. ರಾಜ್ಯದಲ್ಲಿ ಜೂ. 4ರ ವೇಳೆಗೆ  ಎಲ್ಲ ಜಿಲ್ಲೆಗಳಲ್ಲೂ ದೂರು ಪರಿಹಾರ ಅದಾಲತ್ ಪೂರ್ತಿಗೊಳ್ಳಲಿರುವುದಾಗಿ ತಿಳಿಸಿದರು.

              ಶಾಸಕ ಎನ್.ಎ ನೆಲ್ಲಿಕುನ್ನು ಅಧ್ಯಕ್ಷತೆ ವಹಿಸಿ ಮಾತನಾಡಿ, ನೊಂದವರು ಸಲ್ಲಿಸುವ ದೂರುಗಳಿಗೆ ಅಗತ್ಯ ಪರಿಹಾರ ಲಭಿಸಿದಾಗ ಮಾತ್ರ ಇಮತಹ ಅದಾಲತ್  ಯಶಸ್ವಿಯಾಗಲು ಸಾದ್ಯ. ಜಿಲ್ಲೆಯ ಹಿಂದುಳಿದಿರುವಿಕೆಗೆ ಉದ್ಯೋಗಿಗಳ ಕೊರತೆಯು ಒಂದಗಿದ್ದು, ಎಲ್ಲ ಇಲಾಖೆಗಳಿಗೆ ಅಗತ್ಯ ಸಿಬ್ಬಂದಿ ನೇಮಕಕ್ಕೆ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು. ಜಿಲ್ಲೆಗೆ ಮಂಜೂರಾಗಿರುವ ವೈದ್ಯಕೀಯ ಕಾಲೇಜು ಆಸ್ಪತ್ರೆ ಕಮಗಾರಿ ಶೀಘ್ರ ಪೂರ್ತಿಗೊಳಿಸುವುದರ ಜತೆಗೆ ಜನರಲ್ ಆಸ್ಪತ್ರೆಯಲ್ಲಿ ಸವಲತ್ತು ಒದಗಿಸುವುದು, ಬಜೆಟ್‍ನಲ್ಲಿ ಕಾಸರಗೊಡಿಗೆ ಮೀಸಲಿರಿಸಿರುವ ಮೊತ್ತ ಕಡಿತ ಮಾಡದೆ ಒದಗಿಸುವುದು, ಜನರ ಜಿವನಾಡಿಯಾಗಿರುವ ಕಡತಗಳನ್ನು ಶೀಘ್ರ ವಿಲೇವಾರಿ ನಡೆಸುವ ಮೂಲಕ ನ್ಯಾಯ ಒದಗಿಸಿಕೊಡುವಲ್ಲೂ ಸರ್ಕಾರ ಗಮನ ಹರಿಸಬೇಕು ಎಂದು ತಿಳಿಸಿದರು. ಎಡಿಎಂ ನವೀನ್‍ಬಾಬು ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಶಾಸಕ ಸಿ.ಎಚ್.ಕುಞಂಬು, ಜಿಲ್ಲಾಧಿಕಾರಿ ಇಭಾಶೇಖರ್ ಐ.ಎ.ಎಸ್, ಕಾಸರಗೋಡು ನಗರಸಭಾ ಪ್ರಭಾರ ಅಧ್ಯಕ್ಷೆ ಶಂಸೀನಾ ಫಿರೋಸ್, ಬ್ಲಾಕ್ ಪಂಚಾಯಿತಿ, ಗ್ರಾ. ಪಂ ಅಧ್ಯಕ್ಷರು, ಇತರ ಜನಪ್ರತಿನಿಧಿಗಳು, ಅದಿಕಾರಿಗಳು ಉಪಸ್ಥಿತರಿದ್ದರು.

                        ಮಹತ್ವದ ಮೈಲಿಗಲ್ಲು:

            ಎಡರಂಗ ಸರ್ಕಾರದ ಎರಡನೇ ವರ್ಷಾಚರಣೆ ಹಿನ್ನೆಲೆಯಲ್ಲಿ ನಡೆಸಲಾಗುತ್ತಿರುವ ದೂರುಪರಿಹಾರ ಅದಾಲತ್ ಜನಸಾಮಾನ್ಯರ ಪಾಲಿಗೆ ಮಹತ್ವದ ಮೈಲಿಗಲ್ಲಾಗಲಿದೆ ಎಂದು ಬಂದರು, ಪ್ರಾಚ್ಯವಸ್ತು ಖಾತೆ ಸಚಿವ ಅಹಮ್ಮದ್ ದೇವರ್‍ಕೋವಿಲ್ ತಿಳಿಸಿದ್ದಾರೆ. ಜನಸಾಮಾನ್ಯರು ಎದುರಿಸುತ್ತಿರುವ ಸಮಸ್ಯೆಗಳಿಗೆ ಸುಲಭದಲ್ಲಿ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಅದಾಲತ್ ಆಯೋಜಿಸಲಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಪರಿಣಾಮಕಾರಿಯಾಗಿ ಅದಾಲತ್ ನಡೆಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

                           ಎಂಡೋ ಸಂತ್ರಸ್ತರಿಗೆ ವೈದ್ಯಕೀಯ ಶಿಬಿರ:

              ಎಂಡೋಸಲ್ಫಾನ್ ದುಷ್ಪರಿಣಾಮಪಿಡಿತರಿಗೆ ವೈದ್ಯಕೀಯ ಶಿಬಿರ ನಡೆಸಲು ಹಾಗೂ ಎಂಡೋಸಲ್ಫಾನ್ ಸಂತ್ರಸ್ತರ ಏಕೀಕರಣ, ಪುನರ್ವಸತಿ ಕಲ್ಪಿಸುವ ಎಂಡೋ ಸೆಲ್ ತೀರ್ಮಾನಗಳನ್ನು ಶೀಘ್ರ ಕಾರ್ಯಪ್ರವೃತ್ತಗೊಳಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸೆಲ್ ಅದ್ಯಕ್ಷ, ಸಚಿವ ಪಿ.ಎ ಮಹಮ್ಮದ್ ರಿಯಾಸ್ ಅವರು ಜಿಲ್ಲಾಧಿಕಾರಿ ಇಭಾಶೇಖರ್ ಅವರಿಗೆ ನಿರ್ದೇಶ ನೀಡಿದರು. ಕಾಸರಗೋಡು ತಾಲೂಕು ಮಟ್ಟದ ದೂರುಪರಿಹಾರ ಅದಾಲತ್‍ನಲ್ಲಿ ಎಂಡೋಸಲ್ಫಾನ್ ಸಂತ್ರಸ್ತರು ಸಲ್ಲಿಸಿದ ದೂರುಗಳ ಬಗ್ಗೆ ವಲೋಕನ ನಡೆಸಿ ಇ ಮಾಹಿತಿ ನೀಡಿದರು. ವೈದ್ಯಕಿಯ ಶಿಬಿರ ನಡೆಸಲು ಸ್ಥಳ ಹಾಗೂ ದಿನಾಂಕ ನಿಗದಿಪಡಿಸುವುದರ ಜತೆಗೆ ತಜ್ಞ ವೈದ್ಯರ ಲಭ್ಯತೆ ಬಗ್ಗೆ ಆರೋಗ್ಯ ಇಲಾಖೆಗೆ ನಿರ್ದೇಶ ನೀಡಿದರು. ಈ ಬಗ್ಗೆ ಅರೋಗ್ಯ ಖಾತೆ ಸಚಿವೆ ವಿಣಾ ಜಾರ್ಜ್ ಅವರ ಜತೆ ಮೊಬೈಲ್ ಮೂಲಕ ಮಾತುಕತೆಯನ್ನೂ ನಡೆಸಿದರು. ಜಿಲ್ಲಾ ವೈದ್ಯಾಧಿಕಾರಿ ಡಾ. ಎ.ವಿ ರಾಮದಾಸ್, ಎನ್.ಎಚ್.ಎಂ ಪ್ರೋಜೆಕ್ಟ್ ಅಧಿಕಾರಿ ಡಾ. ರಿಜಿತ್ ಉಪಸ್ಥಿತರಿದ್ದರು.

                  ಸಮಾರಂಭಕ್ಕೆ ಮೊದಲು ಕನ್ನಡದಲ್ಲಿ ನಡೆಸಿದ ಪ್ರಾರ್ಥನೆ ಬಗ್ಗೆ ಕನ್ನಡಿಗರಲ್ಲಿ ಹೆಮ್ಮೆ ಮೂಡಿಸಿದರೆ, ಮಲಯಾಳಿಗಳಲ್ಲಿ ಕೆಲವರು ಮೂಗು ಮುರಿಯುವುದೂ ಕಂಡುಬಂತು. ಕಾಸರಗೊಡು ತಾಲೂಕು ಮಟ್ಟದ ಅದಾಲತ್‍ನಲ್ಲಿ ಬಹುತೇಕ ಮಂದಿ ಕನ್ನಡ ಪ್ರದೇಶದಿಂದ ಆಗಮಿಸಿದವರಿದ್ದರೂ, ನಿರ್ದೇಶಗಳು, ಸೂಚನಾ ಫಲಕಗಳಲ್ಲಿ ಕನ್ನಡದ ಬರೆಹಗಳು ನಾಪತ್ತೆಯಾಗಿತ್ತು!

             ಈ ಸಂದರ್ಭ ಬಿಪಿಎಲ್ ಪಡಿತರ ಚೀಟಿ, ವಿವಿಧ ಸರ್ಕಾರಿ ಸವಲತ್ತುಗಳನ್ನು ಫಲಾನುಭವಿಗಳಿಗೆ ವಿತರಿಸಲಾಯಿತು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries