HEALTH TIPS

ಭಾರತದ ಕೀರ್ತಿ ಪತಾಕೆ ಬಾನೆತ್ತರಕ್ಕೆ ಹಾರಿಸಿದ ನೀರಜ್​ ಚೋಪ್ರಾ

                ತಾರ್​: ಭಾರತದ ಭರವಸೆಯ ಜಾವೆಲಿನ್​​ ಥ್ರೋ ಆಟಗಾರ ನೀರಜ್​ ಚೋಪ್ರಾ ಮತ್ತೊಮ್ಮೆ ಚಿನ್ನವನ್ನು ಗೆಲ್ಲುವ ಮೂಲಕ ಡೈಮಂಡ್​ ಲೀಗ್​ನಲ್ಲಿ ಸಾಧನೆಗೈದಿದ್ದಾರೆ. ದೋಹಾದಲ್ಲಿ ನಡೆದ​ ಲೀಗ್​ನಲ್ಲಿ ಜಾವೆಲಿನ್​ ಅನ್ನು 88.67 ಮೀಟರ್ ದೂರ ಎಸೆಯುವ ಮೂಲಕ ಚಾಂಪಿಯನ್​ ಆಗಿ ಹೊರಹೊಮ್ಮಿದ್ದಾರೆ.

                   ತಮ್ಮ ಮೊದಲನೇ ಎಸೆತದಲ್ಲೆ ಅತ್ಯುತ್ತಮವಾಗಿ ಜಾವೆಲಿನ್​ ಅನ್ನು 88.67 ಮೀಟರ್​ ದೂರ ಎಸೆಯುವ ಮೂಲಕ ನೀರಜ್​ ಚಿನ್ನದ ಪದಕವನ್ನು ಖಚಿತಪಡಿಸಿಕೊಂಡಿದ್ದರು. ಇನ್ನು, ನೀರಜ್​ಗೆ ಉತ್ತಮ ಪ್ರತಿಸ್ಪರ್ಧೆ ನೀಡಿದ ಜೇಕಬ್​​ ವಾಡ್ಲೆಜ್​ 88.63 ಮೀಟರ್​ ಜಾವೆಲಿನ್​ ಎಸೆದು ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟರೆ, 85.88m ದೂರ ಎಸೆದ ಆಂಡರ್​ಸನ್​ ಪೀಟರ್ಸ್​ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟರು.

                  ಈ ಹಿಂದೆ ಟೋಕಿಯೊದಲ್ಲಿ ನಡೆದ ಒಲಿಂಪಿಕ್​ನಲ್ಲಿ ಕೂಡ ನೀರಜ್​ಗೆ ಟಕ್ಕರ್​ ನೀಡಿದ್ದ ಜೇಕಬ್​​ ವಾಡ್ಲೆಜ್ ಅಲ್ಲಿಯೂ ಬೆಳ್ಳಿಯನ್ನು ಗೆದ್ದಿದ್ದರು. ಇನ್ನೂ, ವಿಶ್ವ ಚಾಂಪಿಯನ್​ಶಿಪ್​ನಲ್ಲಿ ನೀರಜ್​ರನ್ನು ಸೊಲಿಸಿ, ಆಂಡರ್​ಸನ್​ ಪೀಟರ್ಸ್ ಸೊಲಿಸಿ ಬಂಗಾರದ ಪದಕವನ್ನು ಗೆದ್ದಿದ್ದರು ಎಂಬುದು ಗಮನಾರ್ಹ.

                 ಪಂದ್ಯ ಮುಗಿದ ಬಳಿಕ ಮಾತನಾಡಿದ ನೀರಜ್​, 'ಈ ಪಂದ್ಯ ಅತ್ಯಂತ ರೋಚಕವಾಗಿತ್ತು. ಗೆಲುವು ದೊರೆತಿದ್ದು ನನಗೆ ಖುಷಿ ನೀಡಿದೆ. ಈ ಗೆಲುವಿನಿಂದ ನನ್ನ ಆತ್ಮವಿಶ್ವಾಸ ಇನ್ನಷ್ಟು ಹೆಚ್ಚಿದೆ' ಎಂದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries