ತಿರುವನಂತಪುರಂ: ಮೀನುಗಾರಿಕಾ ಕ್ಷೇತ್ರದ ಸಮಗ್ರ ಅಭಿವೃದ್ಧಿ ಉದ್ದೇಶದಿಂದ ರೂಪಿಸಿರುವ ಅತ್ಯಾಧುನಿಕ ಆಳಸಮುದ್ರ ಮೀನುಗಾರಿಕೆ ನೌಕೆಗಳು ಕೇರಳಕ್ಕೆ ಹೆಚ್ಚಿನ ಅಗತ್ಯವಿದ್ದಲ್ಲಿ ಒದಗಿಸಲಾಗುವುದು ಎಂದು ಕೇಂದ್ರ ಸಚಿವ ಪರಶೋತ್ತಮ್ ರೂಪಾಲಾ ಅವರು ಹೇಳಿದರು.
ಕೊಲ್ಲಂ ನೀಂಡÀಕರ ವಾರ್ಫ್‍ನಲ್ಲಿ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಸಾಂಪ್ರದಾಯಿಕ ಮೀನುಗಾರರಿಗೆ ಆಳಸಮುದ್ರ ಮೀನುಗಾರಿಕಾ ದೋಣಿಗಳನ್ನು ವಿತರಿಸಿದ ಸಮಾರಂಭದಲ್ಲಿ ಅವರು ಮಾತನಾಡಿದರು.
ಕೇಂದ್ರ ಸರ್ಕಾರವು ಈ ಕ್ಷೇತ್ರವನ್ನು ಕಿಸಾನ್ ಕ್ರೆಡಿಟ್ ಕಾರ್ಡ್‍ನಲ್ಲಿ ಸೇರಿಸಿದ್ದು, ಮೀನುಗಾರರೂ ಸಂಸ್ಥೆಗಳಿಂದ ಸಾಲ ಪಡೆಯಬಹುದು. ಇದರ ಲಾಭವನ್ನು ಕೇರಳದ ಮೀನುಗಾರಿಕಾ ಕ್ಷೇತ್ರಕ್ಕೆ ಪಡೆಯಲು ರಾಜ್ಯ ಸರ್ಕಾರ ಕ್ರಮಕೈಗೊಳ್ಳುವಂತೆ ಪರ್ಶೋತ್ತಮ್ ರೂಪಾಲಾ ಕೋರಿದರು. ಈ ಮೂಲಕ ದೇಶದ ಆರ್ಥಿಕತೆಯನ್ನು ಬಲಪಡಿಸಲು ಮೀನುಗಾರಿಕೆ ಕ್ಷೇತ್ರಕ್ಕೆ ಕೊಡುಗೆಗಳನ್ನು ನೀಡಲು ಸಾಧ್ಯ ಎಂದರು.
ಶೀತಲೀಕರಣ ಸೌಲಭ್ಯ ಸೇರಿದಂತೆ ಅತ್ಯಾಧುನಿಕ ಸೌಲಭ್ಯಗಳಿರುವ ಹಡಗು ನಿರ್ಮಿಸಲು 1.57 ಲಕ್ಷ ರೂ. ಕೇರಳದ ಮೀನುಗಾರರಿಗೆ ಹೆಚ್ಚುವರಿಯಾಗಿ 30 ಲಕ್ಷ ರೂ.ಗಳನ್ನು ನೀಡುತ್ತಿರುವ ರಾಜ್ಯ ಸರ್ಕಾರಕ್ಕೆ ಕೇಂದ್ರ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು. ಕೊಚ್ಚಿನ್ ಶಿಪ್‍ಯಾರ್ಡ್ ಸಮಯಕ್ಕೆ ಸರಿಯಾಗಿ ಹಡಗುಗಳ ನಿರ್ಮಾಣವನ್ನು ಪೂರ್ಣಗೊಳಿಸಿದೆ. ಮೊದಲ ಹಂತದಲ್ಲಿ, ಮೀನುಗಾರರ ಪ್ರಾಥಮಿಕ ಸಹಕಾರ ಸಂಘಗಳ ಸದಸ್ಯರಾಗಿರುವ 10 ಸಾಂಪ್ರದಾಯಿಕ ಮೀನುಗಾರರನ್ನು ಒಳಗೊಂಡ ಐದು ಗುಂಪುಗಳಿಗೆ ಆಳ ಸಮುದ್ರದ ಹಡಗುಗಳನ್ನು ಒದಗಿಸಲಾಗಿದೆ. ಅದರ ದಾಖಲೆಗಳನ್ನು ಪರಶೋತ್ತಮ್ ರೂಪಾಲಾ ಅವರು ವಿತರಿಸಿದರು.