ಪಾಲಕ್ಕಾಡ್: ಎಲತ್ತೂರ್ ರೈಲು ದಾಳಿ ಪ್ರಕರಣದ ಆರೋಪಿ ಶಾರುಖ್ ಸೈಫಿಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ಬಿಡುಗಡೆ ಮಾಡಿದೆ.
ಮೇ 27ರವರೆಗೆ ರಿಮಾಂಡ್ ನೀಡಲಾಗಿದೆ. ಬಂಧನದಲ್ಲಿದ್ದ ಆರೋಪಿಯನ್ನು ನಿನ್ನೆ ಮಧ್ಯಾಹ್ನ ಕೊಚ್ಚಿ ಎನ್ ಐಎ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಕಸ್ಟಡಿಯಿಂದ ಬಿಡುಗಡೆ ಮಾಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ಎನ್‍ಐಎ ದಿಲ್ಲಿಯ 10 ಸ್ಥಳಗಳಲ್ಲಿ ತಪಾಸಣೆ ನಡೆಸಿತ್ತು. ಆರೋಪಿ ಶಾರುಖ್ ಸೈಫಿಯ ಶಾಹೀನ್ ಬಾಗ್ ಮನೆ ಮತ್ತು ಶಂಕಿತನ ಹತ್ತಿರದ ಪ್ರದೇಶಗಳಲ್ಲಿ ಶೋಧ ನಡೆಸಲಾಯಿತು. ಈ ಸ್ಥಳಗಳಿಂದ ಡಿಜಿಟಲ್ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯ ಮನೆಯಿಂದ ವಶಪಡಿಸಿಕೊಂಡ ದಾಖಲೆಗಳನ್ನು ಎನ್‍ಐಎ ಪರಿಶೀಲನೆಗೆ ಕಳುಹಿಸಿದೆ.
ಇದೇ ವೇಳೆ, ಶಾರುಖ್ ಸೈಫೀ ಮೂಲಭೂತವಾದಿ ಮುಸ್ಲಿಂ ಪ್ರಚಾರಕರನ್ನು ಅನುಸರಿಸಿದ್ದನ್ನು ಎನ್ಐಎ ಪತ್ತೆಮಾಡಿದೆ. ಜಾಕಿರ್ ನಾಯ್ಕ್, ಪಾಕಿಸ್ತಾನಿಗಳಾದ ತಾರಿಕ್ ಜಮೀಲ್, ಇಸ್ರಾರ್ ಅಹ್ಮದ್ ಮತ್ತು ತೈಮು ಅಹ್ಮದ್ ಅವರನ್ನು ಸಾಮಾಜಿಕ ಜಾಲತಾಣಗಳ ಮೂಲಕ ಹಿಂಬಾಲಿಸಿದ್ದನ್ನು ಎನ್‍ಐಎ ಪತ್ತೆ ಮಾಡಿದೆ. ಆರೋಪಿಯ ವಿಚಾರಣೆಯಿಂದ ದೊರೆತ ಮಾಹಿತಿ ಹಾಗೂ ಫೆÇೀನ್ ದಾಖಲೆಗಳ ಆಧಾರದ ಮೇಲೆ ಎನ್ ಐಎ ತಂಡ ದೆಹಲಿಯ ಹತ್ತು ಕಡೆಗಳಲ್ಲಿ ತಪಾಸಣೆ ನಡೆಸಿತು.
ಮೊದಲ ಹಂತದ ತನಿಖೆಯಲ್ಲಿ ಎನ್‍ಐಎ ಶಾರುಖ್ ನ ಆಪ್ತರನ್ನು ವಿಚಾರಣೆ ನಡೆಸಿ ಬಿಡುಗಡೆಗೊಳಿಸಿತ್ತು. ತನಿಖೆಯ ಭಾಗವಾಗಿ ಎನ್‍ಐಎ ಅವರಿಂದ ಮಾಹಿತಿ ಸಂಗ್ರಹಿಸಿದೆ. ಈ ಹಿಂದೆ ಕೋಝಿಕ್ಕೋಡ್ ಮತ್ತು ಕಣ್ಣೂರಿನಲ್ಲಿ ಎನ್‍ಐಎ ಶೋಧ ನಡೆಸಿತ್ತು. ಆಲಪ್ಪುಳ-ಕಣ್ಣೂರು ಎಕ್ಸ್ ಪ್ರೆಸ್ ರೈಲಿಗೆ ಸ್ಪಷ್ಟ ಯೋಜನೆಗಳೊಂದಿಗೆ ಬಂದು ಪ್ರಯಾಣಿಕರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾಗಿ ಪ್ರಾಥಮಿಕ ವಿಚಾರಣೆಯಲ್ಲಿ ಆರೋಪಿ ಒಪ್ಪಿಕೊಂಡಿದ್ದಾನೆ. ಶಾರುಖ್‍ನ ಭಯೋತ್ಪಾದನೆ ಸಂಬಂಧದ ಬಗ್ಗೆ ಎನ್‍ಐಎ ತನ್ನ ತನಿಖೆಯನ್ನು ತೀವ್ರಗೊಳಿಸಿದೆ.