ಕಾಸರಗೋಡು: ಪುನರ್ನವ ಟ್ರಸ್ಟ್ (ರಿ.) ಕಾಸರಗೋಡು ಹಾಗೂ ಭಗವಾನ್ ಶ್ರೀ ಸತ್ಯಸಾಯಿ ಅಭಯನಿಕೇತನ, ಕಾಸರಗೋಡು ಸಂಸ್ಥೆಗಳ ನೇತೃತ್ವದಲ್ಲಿ 'ಮಾನಸಿಕ ಆರೋಗ್ಯ ಮತ್ತು ಸಕಾರಾತ್ಮಕ ಮನೋವಿಜ್ಞಾನ' ಎಂಬ ವಿಷಯದಲ್ಲಿ ವಿಶೇಷ ಉಪನ್ಯಾಸ ಮತ್ತು ಕಾರ್ಯಾಗಾರ ಮೇ 14ರಂದು(ಇಂದು) ಕಾಸರಗೋಡಿನ ಭಗವಾನ್ ಶ್ರೀ ಸತ್ಯಸಾಯಿ ಅಭಯನಿಕೇತನದಲ್ಲಿ ನಡೆಯಲಿದೆ. ಮಾನಸಿಕ ಆರೋಗ್ಯವು ದೇಹದ ಆರೋಗ್ಯದಷ್ಟೇ ಮುಖ್ಯವಾದುದರಿಂದ ಆಧುನಿಕ ಕಾಲದಲ್ಲಿ ಮಾನಸಿಕ ಆರೋಗ್ಯವನ್ನು ಕಾಪಾಡುವ ಮೂಲಕ ಬದುಕಿನ ಸಂತೋಷವನ್ನು ಹೇಗೆ ಪಡೆಯಬಹುದು ಎಂಬುದನ್ನು ಕಾರ್ಯಾಗಾರದಲ್ಲಿ ಚರ್ಚಿಸಲಾಗುತ್ತದೆ.
ಬೆಳಗ್ಗೆ ಹತ್ತರಿಂದ ಮಧ್ಯಾಹ್ನ ಒಂದು ಗಂಟೆಯ ತನಕ ಕಾರ್ಯಕ್ರಮವು ನಡೆಯಲಿದೆ. ಬಿ.ಆರ್.ಡಿ.ಸಿ ಮೇನೇಜರ್ ಯು.ಎಸ್ ಪ್ರಸಾದ್ ಸಮಾರಂಭ ಉದ್ಘಾಟಿಸಲಿರುವರು. ಬಿ.ಎಸ್ .ಎಸ್ ಎ ಅಧ್ಯಕ್ಷ ಡಾ. ಎಸ್ ಬಿ ಖಂಡಿಗೆ ಅಧ್ಯಕ್ಷತೆ ವಹಿಸುವರು. ಬಿ.ಜೆ.ಪಿ ಜಿಲ್ಲಾಧ್ಯಕ್ಷ ರವೀಶ್ ತಂತ್ರಿ ಕುಂಟಾರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಮನೋವಿಜ್ಞಾನಿ ನವೀನ್ ಎಲ್ಲಂಗಳ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸುವರು. ಕು. ಲತಾ, ಡಾ. ರತ್ನಾಕರ ಮಲ್ಲಮೂಲೆ, ಬಿ ಪ್ರೇಂ ಪ್ರಕಾಶ್ ಉಪಸ್ಥಿತರಿರುವರು. ಆಸಕ್ತರು ಈ ಕಾರ್ಯಾಗಾರದಲ್ಲಿ ಭಾಗವಹಿಸಬಹುದು ಎಂದು ಪರಕಟಣೆ ತಿಳಿಸಿದೆ.