ಕಾಸರಗೋಡು: ರಾಷ್ಟ್ರೀಯ ಡೆಂಘೆ ಪ್ರತಿರೋಧ ದಿನದಂದು ಜಿಲ್ಲಾ ವೈದ್ಯಾಧಿಕಾರಿ ಕಚೇರಿ (ಆರೋಗ್ಯ), ರಾಷ್ಟ್ರೀಯ ಆರೋಗ್ಯ ಮಿಷನ್ ಮತ್ತು ಜಿಲ್ಲಾ ರೋಗವಾಹಕ ನಿಯಂತ್ರಣ ಘಟಕ ಜಂಟಿಯಾಗಿ ರಾಷ್ಟ್ರೀಯ ಡೆಂಘೆ ದಿನವನ್ನು ಆಚರಿಸಲಾಯಿತು.
ಮುಳಿಯಾರು ಸಾಮಾಜಿಕ ಆರೋಗ್ಯ ಕೇಂದ್ರದಲ್ಲಿ ನಡೆದ ಜಿಲ್ಲಾ ಮಟ್ಟದ ಸಮಾರಂಭದಲ್ಲಿ ಕಾರಡ್ಕ ಬ್ಲಾಕ್ ಪಂಚಾಯಿತಿ ಅಧ್ಯಕ್ಷ ಸಿ.ಜಿ.ಮ್ಯಾಥ್ಯೂ ಉದ್ಘಾಟಿಸಿದರು.
ಮುಳಿಯಾರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಿ.ವಿ.ಮಿನಿ ಅಧ್ಯಕ್ಷತೆ ವಹಿಸಿದ್ದರು. ಆದ್ರ್ರಂ ಸಹಾಯಕ ನೋಡಲ್ ಅಧಿಕಾರಿ ಡಾ. ಡಾಲ್ಮಿಟಾ ನಿಯಾ ಜೇಮ್ಸ್ ಡೆಂಘೆ ದಿನದ ಸಂದೇಶನೀಡಿದರು. ಬ್ಲಾಕ್ ಪಂಚಾಯಿತಿ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಪಿ. ಸವಿತಾ, ಬ್ಲಾಕ್ ಪಂಚಾಯಿತಿ ಸದಸ್ಯ ಕುಂಞಂಬು ನಂಬಿಯಾರ್, ಮುಳಿಯಾರ್ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಎ. ಜನಾರ್ದನನ್, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಇ. ಮೋಹನನ್, ಸದಸ್ಯರಾದ ಅಬ್ಬಾಸ್ ಕೊಳಚಪ್ಪು, ರವೀಂದ್ರನ್, ಡಿ.ವಿ.ಆರ್. ವಿಭಾಗೀಯ ಜೀವಶಾಸ್ತಜ್ಞ್ರ ಇ. ರಾಧಾಕೃಷ್ಣನ್ ನಾಯರ್, ಅಪರ ಜಿಲ್ಲಾ ಶಿಕ್ಷಣ ಮಾಧ್ಯಮ ಅಧಿಕಾರಿ ಎಸ್. ಸಯನಾ, ಸಿಡಿಎಸ್ ಅಧ್ಯಕ್ಷೆ ಖೈರುನ್ನೀಸಾ ಉಪಸ್ಥಿತರಿದ್ದರು.
ಮುಳಿಯಾರು ಸಾಮಾಜಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಶಮೀಮಾ ತನ್ವೀರ್ ಸ್ವಾಗತಿಸಿದರು. ತಾಂತ್ರಿಕ ಸಹಾಯಕ ಕುಞÂಕೃಷ್ಣನ್ ನಾಯರ್ ವಂದಿಸಿದರು. ಆಗ ಡಿ.ವಿ. ಬಿ.ಡಿ. ಸಿ.ಅಧಿಕಾರಿ ವೇಣುಗೋಪಾಲನ್ ಅವರಿಂದ ಜಾಗೃತಿ ತರಗತಿ ನಡೆಸಿದರು.
ದಿನಾಚರಣೆ ನಿಮಿತ್ತ ಜಿಲ್ಲಾ ರೋಗವಾಹಕ ನಿಯಂತ್ರಣ ಘಟಕದಿಂದ ಮಾಹಿತಿ ಅಭಿಯಾನ, ಸೊಳ್ಳೆಗಳಿಂದ ಹರಡುವ ರೋಗಗಳ ಕುರಿತು ಮಾಹಿತಿ ಪ್ರದರ್ಶನ ಹಾಗೂ ಫ್ಲಾಶ್ ಮಾಬ್ ಆಯೋಜಿಸಲಾಗಿತ್ತು. ಡೆಂಘೆ ಹಿಮ್ಮೆಟ್ಟಿಸಲು ಒಟ್ಟಾಗಿ ಹೋರಾಡೋಣ ಎಂಬುದು ಈ ವರ್ಷದ ದಿನದ ಸಂದೇಶವಾಗಿದೆ.