HEALTH TIPS

ನಾಳೆ ಚೇವಾರು ಮಿತ್ತಡ್ಕ ಶ್ರೀ ವನಶಾಸ್ತ ನಾಗ ರಕ್ತೇಶ್ವರಿ ಸಾನಿಧ್ಯ ಪುನರ್ ಪ್ರತಿಷ್ಠಾ ಬ್ರಹ್ಮಕಲಶ

           ಕುಂಬಳೆ: ಚೇವಾರು ಸಮೀಪದ ಮಿತ್ತಡ್ಕ  ಶ್ರೀ ವನಶಾಸ್ತ, ನಾಗ, ರಕ್ತೇಶ್ವರಿ ಸಾನಿಧ್ಯ ಪುನರ್ ಪ್ರತಿಷ್ಠಾ ಬ್ರಹ್ಮಕಲಶ ಕಾರ್ಯಕ್ರಮ ಇಂದು ಹಾಗೂ ನಾಳೆ (ಮೇ.4)  ಜರಗಲಿದೆ. ಸುಮಾರು 350 ವರ್ಷಕ್ಕಿಂತಲೂ ಅಧಿಕ ಕಾಲ ಅಜೀರ್ಣಾವಸ್ಥೆಯಲ್ಲಿದ್ದ ಈ ಸಾನಿಧ್ಯವನ್ನು ಕೊಳತ್ತೂರು ದಾನೋದರ ಜ್ಯೋತಿಷ್ಯರ ಪ್ರಶ್ನೆ ಚಿಂತನೆಯ ಬಳಿಕ ಊರ ಭಕ್ತಾಧಿಗಳ ಸಹಕಾರದಲ್ಲಿ ಜೀರ್ಣೋದ್ಧಾರಗೊಳಿಸಲಾಗಿದೆ. ಕೊಂಡೆವೂರು ಶ್ರೀಯೋಗಾನಂದ ಸರಸ್ವತಿ ಸ್ವಾಮೀಜಿಗಳ ಮಾರ್ಗದರ್ಶನದಂತೆ ತಂತ್ರಿ ಉರ್ಮಿ ರಾಮ್ ಪ್ರಸಾದ್ ನಲ್ಲೂರಾಯರ ನೇತೃತ್ವದಲ್ಲಿ ವಾಸ್ತು ಶಿಲ್ಪಿ ರಮೇಶ್ ಕಾರಂತ ಬೆದ್ರಡ್ಕ ಅವರ ವಾಸ್ತು ಶಿಲ್ಪದ ಮಾರ್ಗದರ್ಶನದಂತೆ ಶಿಲಾನ್ಯಾಸ ನಡೆಸಲಾಗಿತ್ತು. ಇದೀಗ  ನಾಗ, ವನಶಾಸ್ತ, ವನದುರ್ಗ, ರಕ್ತೇಶ್ವರಿ ಸಾನ್ನಿಧ್ಯ ಗುಳಿಗ ದೈವ ಗಳಿಗೆ ಪ್ರತ್ಯೆಕ ಕಟ್ಟೆ ರಚಿಸಿ ಪ್ರತಿಷ್ಠೆ ನಡೆಯಲಿದೆ. 

          ಇಂದು (ಮೇ.3) ಸಂಜೆ 4 ಕ್ಕೆ ಚೇವಾರು ಪಟ್ಲ ಅಯ್ಯಪ್ಪ ಮಂದಿರದಿಂದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ, ತಂತ್ರಿಗಳ ಆಗಮನ, ವಿವಿಧ ತಾಂತ್ರಿಕ ಕಾರ್ಯಕ್ರಮಗಳು ಜರಗಲಿದೆ. ನಾಳೆ(ಮೇ 4) ಬೆಳಗ್ಗೆ 7.45 ಕ್ಕೆ ಶ್ರೀಸಾನಿಧ್ಯ ಶಕ್ತಿಗಳ ಪ್ರತಿಷ್ಠೆ ಹಾಗೂ ಬ್ರಹ್ಮಕಲಶಾಭಿಷೇಕ ಜರಗಲಿದೆ. ಸಂಜೆ 4 ಕ್ಕೆ ಕಯ್ಯಾರ್ ದುರ್ಗಾ ಶಕ್ತಿ ಕುಣಿತ ಭಜನಾ ತಂಡದಿಂದ ಕುಣಿತ ಭಜನೆ, 5 ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮ, ಸಂಜೆ 6.30 ರಿಂದ ಮಕ್ಕಳ ಸಾಂಸ್ಕøತಿಕ ಕಾರ್ಯಕ್ರಮ, ಗಾನವೈಭವ ಹಾಗೂ ರಾತ್ರಿ 9.30 ರಿಂದ ಮಾಣಿಲ ಶ್ರೀಮಹಾಲಕ್ಷ್ಮಿ ಮೇಳದವರಿಂದ  ಶಾಂಭವಿ ವಿಜಯ ಎಂಬ ಯಕ್ಷಗಾನ ಪ್ರದರ್ಶನ ಜರಗಲಿದೆ ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ.

          ಇದರ ಯಶಸ್ವಿಗಾಗಿ ವಿವಿಧ ಸಹ ಸಮಿತಿಗಳ ರಚನೆಯು ಸಾನಿಧ್ಯದಲ್ಲಿ ಸೇರಿದ ಸಭೆಯಲ್ಲಿ ರಚಿಸಲಾಯಿತು. ವೈ. ಚೆನ್ನಪ್ಪ ಕುಲಾಲ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಮಿತಿಯ ಗೌರವಾಧ್ಯಕ್ಷ ಕುಮಾರ ಸುಬ್ರಹ್ಮಣ್ಯ ಕೊಂದೆಲಕ್ಕಾಡು,ಮೋಹನ ಪೆರಿಯಪ್ಪಾಡಿ, ಸತೀಶ್ ಕಾಪು,ಮೊದಲಾದವರು ಭಾಗವಹಿಸಿದ್ದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries