ದೆಹಲಿ: ಆಯಂಡ್ರಾಯ್ಡ್ ಫೋನ್‌ಗಳಲ್ಲಿ ವೈಯುಕ್ತಿಕ ಕರೆ ದಾಖಲೆಗಳು, ಸಂಪರ್ಕಗಳು, ಇತಿಹಾಸ ಮತ್ತು ಕ್ಯಾಮರಾವನ್ನು ಹ್ಯಾಕ್ ಮಾಡುವ ಮಾಲ್‌ವೇರ್ ಹರಡುತ್ತಿರುವುದು ಕಂಡು ಬಂದಿದೆ ಎಂದು ಹೇಳಲಾಗಿದೆ.
ದೆಹಲಿ: ಆಯಂಡ್ರಾಯ್ಡ್ ಫೋನ್‌ಗಳಲ್ಲಿ ವೈಯುಕ್ತಿಕ ಕರೆ ದಾಖಲೆಗಳು, ಸಂಪರ್ಕಗಳು, ಇತಿಹಾಸ ಮತ್ತು ಕ್ಯಾಮರಾವನ್ನು ಹ್ಯಾಕ್ ಮಾಡುವ ಮಾಲ್‌ವೇರ್ ಹರಡುತ್ತಿರುವುದು ಕಂಡು ಬಂದಿದೆ ಎಂದು ಹೇಳಲಾಗಿದೆ.
ಡಾಮ್ ಎಂಬ ಈ ವೈರಸ್ ಆಂಟಿ-ವೈರಸ್ ಪ್ರೋಗ್ರಾಂಗಳನ್ನು ಬೈಪಾಸ್ ಮಾಡುವ ಸಾಮರ್ಥ್ಯವನ್ನು ಹೊಂದಿದ್ದು, ಮೂರನೇ ವ್ಯಕ್ತಿಯ ವೆಬ್‌ಸೈಟ್‌ಗಳು(Third party apps and websites) ಅಥವಾ ವಿಶ್ವಾಸಾರ್ಹವಲ್ಲದ ವೆಬ್ಸೈಟ್ ಮೂಲಗಳಿಂದ ಡೌನ್‌ಲೋಡ್ ಮಾಡಲಾದ ಅಪ್ಲಿಕೇಶನ್‌ಗಳ ಮೂಲಕ ಆಂಡ್ರಾಯ್ಡ್ ಪೋನ್ನ್ನು ಪ್ರವೇಶಿಸುತ್ತದೆ.
ಇದರಿಂದ ತಪ್ಪಿಸಿಕೊಳ್ಳಬೇಕಾದರೆ ಅವಿಶ್ವಾಸಾರ್ಹ ವೆಬ್‌ಸೈಟ್‌ಗಳನ್ನು ಬ್ರೌಸ್ ಮಾಡದಿರುವುದು, ಇಮೇಲ್‌ಗಳು ಮತ್ತು ಎಸ್‌ಎಂಎಸ್‌ಗಳಲ್ಲಿ ಒದಗಿಸಲಾದ ಯಾವುದೇ ಲಿಂಕ್ ಅನ್ನು ಕ್ಲಿಕ್ ಮಾಡುವಾಗ ಎಚ್ಚರಿಕೆ ವಹಿಸಬೇಕಾಗಿರುವುದು ಅಗತ್ಯ.