ಮಲಪ್ಪುರಂ: ವಂದೇಭಾರತ್ ರೈಲಿಗೆ ತಿರೂರ್ ತಲುಪುವ ಮುನ್ನವೇ ಕಲ್ಲು ತೂರಾಟ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತಿರೂರು ಮತ್ತು ತಾನೂರ್ ನಡುವಿನ ಕಂಪನಿಪಾಡಿ ಎಂಬ ಸ್ಥಳದಲ್ಲಿ ಕಲ್ಲು ತೂರಾಟ ನಡೆದಿದೆ ಎಂದು ಪೋಲೀಸರು ತೀರ್ಮಾನಿಸಿದ್ದಾರೆ.
ಸೋಮವಾರ ಕಾಸರಗೋಡಿನಿಂದ ತಿರುವನಂತಪುರಕ್ಕೆ ಪ್ರಯಾಣಿಸುತ್ತಿದ್ದ ವಂದೇ ಭಾರತ್ ರೈಲಿಗೆ ಕಲ್ಲು ತೂರಾಟ ನಡೆದಿದೆ. ಘಟನೆಯ ಕುರಿತು ತಿರೂರ್ ಪೆÇಲೀಸರು ಮತ್ತು ರೈಲ್ವೆ ಪೆÇಲೀಸರು ತನಿಖೆ ಆರಂಭಿಸಿದ್ದಾರೆ. ಆದರೆ ಸಿಸಿಟಿವಿ ಇಲ್ಲದ ಜಾಗದಲ್ಲಿ ಕಲ್ಲು ತೂರಾಟ ನಡೆದಿದೆ. ಇದು ತನಿಖೆಗೆ ಹೊಡೆತ ನೀಡಿದೆ.
ವಂದೇಭಾರತ್ ಸೇವೆ ಆರಂಭವಾದ ದಿನ ಶೋರ್ನೂರ್ ತಲುಪಿದಾಗ ಪಾಲಕ್ಕಾಡ್ ಸಂಸದ ವಿ.ಕೆ. ಶ್ರೀಕಂಠನ್ ಅವರ ಚಿತ್ರವನ್ನು ಕಾಂಗ್ರೆಸ್ ಕಾರ್ಯಕರ್ತರು ಪೋಸ್ಟ್ ಮಾಡಿದ್ದರು. ಬಳಿಕ ಇದೀಗ ರೈಲಿನ ಮೇಲೆ ದಾಳಿ ನಡೆದಿದೆ. ಆದರೆ ರೈಲಿನ ಭದ್ರತೆಯನ್ನು ಹೆಚ್ಚಿಸಲಾಗುವುದು ಎಂದು ರೈಲ್ವೆ ಹೇಳಿದೆ.