ಬದಿಯಡ್ಕ: ಸಿರಿಬಾಗಿಲು ನೀರಾಳ ಶ್ರೀ ಪಿಲಡ್ಕತ್ತಾಯ ದೈವಸ್ಥಾನ ಬ್ರಹ್ಮಕಲಶೋತ್ಸವ ಮೇ 23ರಿಂದ 26ರ ತನಕ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದ್ದು ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ದೈವಸ್ಥಾನದಲ್ಲಿ ಜರಗಿತು. ಕ್ಷೇತ್ರದ ತಂತ್ರಿ ಬ್ರಹ್ಮಶ್ರೀ ಉಳಿತ್ತಾಯ ವಿಷ್ಣು ಅಸ್ರರು ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು. ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ,ಧಾರ್ಮಿಕ ಮುಂದಾಳು ಕೆ.ಎನ್.ವೆಂಕಟ್ರಮಣ ಹೊಳ್ಳ ಅಧ್ಯಕ್ಷತೆವಹಿಸಿದ್ದರು. ಉಪಾಧ್ಯಕ್ಷ ರವೀಂದ್ರ ರೈ ಸಿರಿಬಾಗಿಲು,ಸುಬ್ರಾಯ ಹೊಳ್ಳ, ರಾಮಕೃಷ್ಣ ಮಯ್ಯ ಸಿರಿಬಾಗಿಲು, ಪ್ರ.ಕಾರ್ಯದರ್ಶಿ ಕೃಷ್ಣ ಹೊಳ್ಳ ನೀರಾಳ, ಕಾರ್ಯದರ್ಶಿ ಮೋಹನ ಕುಮಾರ ಶೆಟ್ಟಿ ಸಿರಿಬಾಗಿಲು, ಅವಿನಾಶ್ ಹೊಳ್ಳ, ವೆಂಕಟ್ರಮಣ ಹೊಳ್ಳ, ಶಂಕರ ಶೆಟ್ಟಿ, ಉಮೇಶ ಶೆಟ್ಟಿ, ಸಜೇಶ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ದೈವಸ್ಥಾನದ ಆಡಳಿತ ಸಮಿತಿ,ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವ ಸಮಿತಿ ಹಾಗೂ ಉಪ ಸಮಿತಿಗಳ ಪದಾಧಿಕಾರಿಗಳು, ಸದಸ್ಯರು ಪಾಲ್ಗೊಂಡಿದ್ದರು.
ಮೇ 23ರಂದು ಸಂಜೆ 3.30 ರಿಂದ ಪುಳ್ಕೂರು ಕ್ಷೇತ್ರದಿಂದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ಬಳಿಕ ವಿವಿಧ ತಾಂತ್ರಿಕ ಕಾರ್ಯಕ್ರಮಗಳು ಜರಗಲಿದೆ. ಮೇ 24 ರಂದು ಬೆಳಿಗ್ಗೆ 8.05ರಿಂದ ಉಳಿಯತ್ತಾಯ ವಿಷ್ಣು ಅಸ್ರ ಅವರ ನೇತೃತ್ವದಲ್ಲಿ ಬ್ರಹ್ಮಕಲಶ ಪ್ರತಿಷ್ಠಾ ಕಾರ್ಯಕ್ರಮಗಳು ಜರಗಲಿದೆ. ಮೇ 25ಕ್ಕೆ ಬೆಳಿಗ್ಗೆ 8.2 ರಿಂದ ಶ್ರೀಪಿಲಡ್ಕತ್ತಾಯ ದೈವದ ಪೀಠ ಪ್ರತಿಷ್ಠೆ ಹಾಗೂ ಕಲಶಾಭಿμÉೀಕ, ತಂಬಿಲ ಜರಗಲಿದೆ. ಬಳಿಕ 11 ರಿಂದ ಜರಗುವ ಸಭಾ ಕಾರ್ಯಕ್ರಮದಲ್ಲಿ ಎಡನೀರು ಮಠಾಧೀಶ ಶ್ರೀಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಆಶೀರ್ವಚನ ನೀಡುವರು. ಬಳಿಕ ವಿವಿಧ ಧಾರ್ಮಿಕ ಸಾಂಸ್ಕøತಿಕ ಕಾರ್ಯಕ್ರಮಗಳು ಜರಗಲಿದೆ. ಮೇ 26ಕ್ಕೆ ಬೆಳಗ್ಗೆ 10.30ರಿಂದ ಶ್ರೀಪಿಲಡ್ಕತ್ತಾಯ ದೈವದ ನೇಮೋತ್ಸವ ಬಳಿಕ ಗುಳಿಗ ಕೋಲ ನಡೆಯಲಿದೆ.