ಅಮೃತಸರ: ಮಾದಕವಸ್ತು ಹೊತ್ತು ತರುತ್ತಿದ್ದ ಪಾಕಿಸ್ತಾನಿ ಡ್ರೋನ್ ಅನ್ನು ಗಡಿ ಭದ್ರತಾ ಪಡೆಯು ಪಂಜಾಬ್‌ನ ಅಮೃತಸರ ಬಳಿಯ ಅಂತರರಾಷ್ಟ್ರೀಯ ಗಡಿ ಬಳಿ ಸೋಮವಾರ ಹೊಡೆದುರುಳಿಸಿದೆ.
ಅಮೃತಸರ: ಮಾದಕವಸ್ತು ಹೊತ್ತು ತರುತ್ತಿದ್ದ ಪಾಕಿಸ್ತಾನಿ ಡ್ರೋನ್ ಅನ್ನು ಗಡಿ ಭದ್ರತಾ ಪಡೆಯು ಪಂಜಾಬ್‌ನ ಅಮೃತಸರ ಬಳಿಯ ಅಂತರರಾಷ್ಟ್ರೀಯ ಗಡಿ ಬಳಿ ಸೋಮವಾರ ಹೊಡೆದುರುಳಿಸಿದೆ.
ಶೋಧ ಕಾರ್ಯ ವೇಳೆ ಎರಡು ಪೊಟ್ಟಣ ಶಂಕಿತ ಹೆರಾಯಿನ್ ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
'ಪಂಜಾಬ್‌ನ ಅಮೃತಸರದ ಅಂತರರಾಷ್ಟ್ರೀಯ ಗಡಿ ಬಳಿ ಡ್ರಗ್ಸ್ ಸಾಗಿಸುತ್ತಿದ್ದ ಪಾಕಿಸ್ತಾನಿ ಡ್ರೋನ್ ಅನ್ನು ಬಿಎಸ್‌ಎಫ್ ಹೊಡೆದುರುಳಿಸಿದೆ. ಡ್ರೋನ್ ಹೊಡೆದುರಳಿಸಿದ ಬಿಒಪಿ ರಜತಲ್ ಪ್ರದೇಶದಲ್ಲಿ ಬಿಎಸ್‌ಎಫ್ ಶೋಧ ಕಾರ್ಯಾಚರಣೆ ನಡೆಸಿದೆ. 2 ಪ್ಯಾಕೆಟ್ ಶಂಕಿತ ಹೆರಾಯಿನ್ ಅನ್ನು ವಶಪಡಿಸಿಕೊಳ್ಳಲಾಗಿದೆ' ಎಂದು ಅಮೃತಸರದ ಬಿಎಸ್‌ಎಫ್ ಕಮಾಂಡೆಂಟ್ ಅಜಯ್ ಕುಮಾರ್ ಮಿಶ್ರಾ ಹೇಳಿದ್ದಾರೆ.
ಭಾನುವಾರ ಕೂಡ ಗಡಿ ಬಳಿಕ ಪಾಕಿಸ್ತಾನದ ಡ್ರೋನ್ ಅನ್ನು ಬಿಎಸ್‌ಎಫ್ ಹೊಡೆದುರುಳಿಸಿತ್ತು.