ನಮ್ಮ ಹೆಸರಿನಲ್ಲಿ ಬೇರೆಯವರು ಮೊಬೈಲ್ ಪೋನ್ ಕನೆಕ್ಷನ್ ತೆಗೆದುಕೊಂಡಿರಬಹುದೇ ಎಂಬ ಆತಂಕ ಎಲ್ಲರಲ್ಲೂ ಮೂಡದಿರದು. ಇಂತಹ ಹಲವು ಪ್ರಕರಣಗಳು ವರದಿಯಾಗುತ್ತಿವೆ ಕೂಡಾ.
ಅಪರಾಧ ಮತ್ತು ವಂಚನೆ ಮಾಡಲು ಬೇರೆಯವರ ಹೆಸರಿನಲ್ಲಿ ಸಿಮ್ ತೆಗೆದುಕೊಳ್ಳುವ ಸುದ್ದಿಗಳನ್ನು ನಾವು ಪ್ರತಿದಿನ ಓದುತ್ತೇವೆ. ನಮ್ಮ ಹೆಸರಿನಲ್ಲಿ ಯಾರಾದರೂ ಪೋನ್ ಕನೆಕ್ಷನ್ ತೆಗೆದುಕೊಂಡಿದ್ದರೆ ತಿಳಿಯುವುದು ಹೇಗೆ?. ಹಲವರಿಗೆ ಸಂಶಯವಿದೆ. ಇದು ನಾವೇ ಪತ್ತೆಮಾಡಬಹುದಾದ ಸಾಮಾನ್ಯ ವಿಷಯವೂ ಹೌದು!. ಇದಕ್ಕೆ ಕೇವಲ ಮೊಬೈಲ್ ಅಪ್ಲಿಕೇಶನ್ ಅಗತ್ಯವಿದೆ.
ಕೇಂದ್ರ ಟೆಲಿಕಾಂ ಇಲಾಖೆಯ ಹೊಸ ಪೋರ್ಟಲ್ 'ಸಂಚಾರ ಸತಿ' ನಮ್ಮ ಹೆಸರಿನಲ್ಲಿ ಬೇರೆಯವರು ಮೊಬೈಲ್ ಪೋನ್ ಸಂಪರ್ಕ ಪಡೆದಿದ್ದಾರೆಯೇ ಎಂಬುದನ್ನು ಪತ್ತೆ ಹಚ್ಚಲು ನೆರವಾಗಲಿದೆ. ಅಂತಹ ಸಂಪರ್ಕವನ್ನು ವಿಚ್ಚೇದಿಸಲೂ ಅವಕಾಶವಿದೆ. sಚಿಟಿಛಿhಚಿಡಿsಚಿಚಿಣhi.gov.iಟಿ ನಲ್ಲಿ 'ನಿಮ್ಮ ಮೊಬೈಲ್ ಸಂಪರ್ಕಗಳನ್ನು ತಿಳಿಯಿರಿ' ಮೇಲೆ ಕ್ಲಿಕ್ ಮಾಡಿ.
ಮೊಬೈಲ್ ಸಂಖ್ಯೆ ಮತ್ತು ಒಟಿಪಿ ನೀಡಿದ ನಂತರ, ಅದೇ ಕೆವೈಸಿ ದಾಖಲೆಗಳನ್ನು ಬಳಸಿ ಮಾಡಿದ ಇತರ ಸಂಪರ್ಕಗಳಿದ್ದರೆ, ಅವುಗಳನ್ನು ತೋರಿಸಲಾಗುತ್ತದೆ. ನಮ್ಮ ಬಳಿ ಬಳಕೆಯಾಗದ ಸಂಖ್ಯೆ ಇದ್ದರೆ, ‘ನಾಟ್ ಮೈ ನಂಬರ್’ ನೀಡಿದ ತಕ್ಷಣ ಟೆಲಿಕಾಂ ಕಂಪನಿಗಳು ಸಿಮ್ ಕಾರ್ಡ್ ಅನ್ನು ಕೂಲಂಕಷವಾಗಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳುತ್ತವೆ. ನೀವೊಮ್ಮೆ ಪ್ರಯತ್ನಿಸಬಾರದೇಕೆ?