HEALTH TIPS

ತಂದೆಯ ಸ್ನೇಹಿತನ ಜತೆ ಅನೈತಿಕ ಸಂಬಂಧ: ಹೋಟೆಲ್​​ ಮಾಲೀಕನ ಹತ್ಯೆ ಕೇಸ್​ನಲ್ಲಿ ಸ್ಫೋಟಕ ಮಾಹಿತಿ ಬಯಲು

                   ಲಪ್ಪುರಂ: ಕೇರಳದಲ್ಲಿ ನಡೆದಿದ್ದ ತ್ರಿಸ್ಸೂರು ಮೂಲದ ರೆಸ್ಟೋರೆಂಟ್​ ಮಾಲೀಕ ಸಿದ್ದಿಖ್​ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಸ್ಫೋಟಕ ಮಾಹಿತಿಗಳು ಬಹಿರಂಗವಾಗಿವೆ. ಆರೋಪಿಗಳಾದ ಶಿಬಿಲಿ ಮತ್ತು ಫರ್ಹಾನ ಎಣೆದಿದ್ದ ಹನಿಟ್ರ್ಯಾಪ್​ ಬಲೆಗೆ ಬಿದ್ದು ಸಿದ್ದಿಖ್​ ಪ್ರಾಣ ಕಳೆದುಕೊಂಡಿದ್ದಾರೆ ಎಂಬ ಸಂಗತಿ ಎಲ್ಲರಿಗು ತಿಳಿದಿದ್ದು, ಆರೋಪಿಗಳು ಜೈಲು ಶಿಕ್ಷೆ ಅನುಭಿಸುತ್ತಿದ್ದಾರೆ.

                   ಇದೀಗ ಪ್ರಕರಣದ ರೋಚಕ ಅಂಶಗಳು ಬಯಲಾಗುತ್ತಿವೆ. ಮೂಲಗಳ ಪ್ರಕಾರ ಸಿದ್ದಿಖ್​ ಮತ್ತು ಫರ್ಹಾನ ನಡುವೆ ವಿವಾಹೇತರ ಸಂಬಂಧ ಇತ್ತು. ಗಮನಾರ್ಹ ಸಂಗತಿ ಏನೆಂದರೆ, ಫರ್ಹಾನ ತಂದೆ ಮತ್ತು ಹತ್ಯೆಯಾದ ಸಿದ್ದಿಖ್​ ಇಬ್ಬರು ಸ್ನೇಹಿತರು. ಗಲ್ಫ್​ ದೇಶದಲ್ಲಿರುವಾಗ ಪರಸ್ಪರ ಪರಿಚಯವಾಗಿ ಸ್ನೇಹ ಬೆಳೆದಿತ್ತು. ಇದೇ ಸಂಬಂಧ ಸಿದ್ದಿಖ್​ ಮತ್ತು ಫರ್ಹಾನ ನಡುವೆ ಪರಿಚಯವಾಗಿ, ಪರಿಚಯ ವಿವಾಹೇತರ ಸಂಬಂಧಕ್ಕೆ ತಿರುಗಿತ್ತು.

                       ಸ್ನೇಹಿತ ಶಿಬಿಲಿಯನ್ನು ತನ್ನ ರೆಸ್ಟೋರೆಂಟ್​ನಲ್ಲಿ ಕೆಲಸಕ್ಕೆ ಸೇರಿಸಿಕೊಳ್ಳುವ ವಿಚಾರಕ್ಕೆ ಫರ್ಹಾನ ಮತ್ತು ಸಿದ್ದಿಖ್​ ನಡುವೆ ಆಗಾಗ ಜಗಳ ನಡೆಯುತ್ತಿತ್ತು ಎಂದು ತಿಳಿದುಬಂದಿದೆ. ಕೊನೆಗೂ ಫರ್ಹಾನ ಮಾತಿಗೆ ಶರಣಾಗಿ ಸಿದ್ದಿಖ್​ನನ್ನು ಶಿಬಿಲಿ ಕೆಲಸಕ್ಕೆ ಸೇರಿಸಿಕೊಂಡಿದ್ದರು. ಆತ ರೆಸ್ಟೋರೆಂಟ್​ನಲ್ಲಿ ಜ್ಯೂಸ್​ ಮಾಡುತ್ತಿದ್ದನು. ಆದರೆ, ಆತನಿಂದ ಅಪಾಯ ಇರುವುದು ಕೆಲವೇ ದಿನಗಳಲ್ಲಿ ಸಿದ್ದಿಖ್​ಗೆ ಗೊತ್ತಾಯಿತು. ಕೆಲಸಕ್ಕೆ ಸೇರಿದ 18 ದಿನಗಳಲ್ಲೇ ಆತನನ್ನು ಕೆಲಸದಿಂದ ಹೊರಹಾಕಲಾಯಿತು. ಅದೇ ದಿನ ಸಿದ್ದಿಖ್​ ಬರ್ಬರ ಹತ್ಯೆಯೂ ನಡೆಯಿತು.

                       ಫರ್ಹಾನಗಳ ಪ್ರಭಾವದಿಂದ ಸಿದ್ದಿಖ್​ ಕೊಯಿಕ್ಕೋಡ್​ನಲ್ಲಿ ಎರಡು ಹೋಟೆಲ್​ ರೂಮ್​ ಬುಕ್​ ಮಾಡಿದರು. ಅದೇ ದಿನ ಸಿದ್ದಿಖ್​ ಪತ್ನಿ ಪತಿಯನ್ನು ಮನೆಗೆ ಕರೆದಳು. ಆದರೆ, ಕೆಲಸದ ಮೇಲೆ ವಡಕರದಕ್ಕೆ ಹೋಗುತ್ತಿರುವುದಾಗಿ ತಿಳಿಸಿದನು. ಇದಾದ ಕೆಲವೇ ಗಂಟೆಗಳಲ್ಲಿ ಗಂಡನಿಂದ ಯಾವುದೇ ಪ್ರತ್ಯುತ್ತರ ಮತ್ತು ಪ್ರತಿಕ್ರಿಯೆ ಬಾರದಿದ್ದಾಗ ಸಿದ್ದಿಖ್​ ಕುಟುಂಬ ಗಂಡ ನಾಪತ್ತೆಯಾಗಿದ್ದಾನೆ ಎಂದು ದೂರು ದಾಖಲಿಸಿತ್ತು. ಬಳಿಕ ಸಿದ್ದಿಖ್​ ಕೊಲೆ ಪ್ರಕರಣ ಬಯಲಾಯಿತು.

               ಭಾರೀ ಹಣ ಸಂಪಾದನೆ ಮಾಡುವ ಬಯಕೆಯಿಂದ ಶಿಬಿಲಿ ಮತ್ತು ಫರ್ಹಾನ ಅಡ್ಡದಾರಿ ಹಿಡಿರುವುದಾಗಿ ಪೊಲೀಸರ ಬಳಿ ತಪ್ಪೊಪ್ಪಿಕೊಂಡಿದ್ದಾರೆ ಎಂದು ಮಲಪ್ಪುರಂ ಎಸ್​ಪಿ ಸುಜಿತ್​ ಹೇಳಿದ್ದಾರೆ. ಕೆಲಸದಿಂದ ತೆಗೆದ ಬಳಿಕ ಶಿಬಿಲಿ, ಫರ್ಹಾನ ಜತೆ ಸೇರಿ ಹನಿಟ್ರ್ಯಾಪ್​ ಯೋಜನೆ ರೂಪಿಸಿದನು. ಸಿದ್ದಿಖ್​ನನ್ನು ಹೋಟೆಲ್​ಗೆ ಕರೆಸಿಕೊಂಡನು. ಬಳಿಕ ಬೆತ್ತಲೆಯಾಗುವಂತೆ ಸಿದ್ದಿಖ್​ನನ್ನು ಫರ್ಹಾನ ಕೇಳಿದಳು. ಆತನನ್ನು ಬೆತ್ತಲೆ ಮಾಡಿ ಫೋಟೋಶೂಟ್​ ಮಾಡಿ ಬೆದರಿಕೆ ಹಾಕುವುದು ಅವರ ದುರುದ್ದೇಶವಾಗಿತ್ತು. ಆದರೆ, ಸಿದ್ದಿಖ್​ ನಿರಾಕರಿಸಿದನು. ಇದಾದ ನಂತರ ಶಿಬಿಲಿ, ಸಿದ್ದಿಖ್​ ತಲೆ ಮತ್ತು ಎದೆಯ ಮೇಲೆ ಸುತ್ತಿಗೆಯಿಂದ ಹೊಡೆದನು. ಈ ವೇಳೆ ಶಿಬಿಲಿಗೆ ಸುತ್ತಿಗೆ ನೀಡಿದ್ದೇ ಫರ್ಹಾನ. ಇವರಿಬ್ಬರ ಕಾಮನ್ ಫ್ರೆಂಡ್ ಆಶಿಕ್, ಸಿದ್ದಿಕ್ ಎದೆಯನ್ನು ತುಳಿದು ಸಾವನ್ನು ಖಚಿತಪಡಿಸಿಕೊಂಡನು.

                         ಅಸ್ಸಾಂಗೆ ಪಲಾಯನ ಮಾಡಲು ಪ್ರಯತ್ನ

                   ಬಳಿಕ ಮೂವರು ದೇಹದ ಭಾಗಗಳನ್ನು ತುಂಡರಿಸಿ, ಟ್ರಾಲಿಯಲ್ಲಿ ಪ್ಯಾಕ್ ಮಾಡಲು ಯೋಜಿಸಿದ್ದರು. ನಂತರ ಒಂದು ಕಟ್ಟರ್ ಮತ್ತು ಟ್ರಾಲಿಯನ್ನು ಖರೀದಿಸಿದರು. ದೇಹವನ್ನು ಹಲವಾರು ಭಾಗಗಳಾಗಿ ಕತ್ತರಿಸಲಾಯಿತು. ಆಶಿಕ್, ಅಟ್ಟಪಾಡಿಯ ಯಾವುದೋ ನಿರ್ಜನ ಪ್ರದೇಶದಲ್ಲಿ ಟ್ರಾಲಿಯನ್ನು ಹಾಕಲು ಐಡಿಯಾ ತಂದ. ನಂತರ ಮೂವರು ಚೆನ್ನೈ ಮೂಲಕ ಅಸ್ಸಾಂಗೆ ಪಲಾಯನ ಮಾಡಲು ಪ್ರಯತ್ನಿಸಿದರು. ಆದರೆ, ಪ್ರಯತ್ನ ಫಲಿಸದೇ ಮೂವರು ಸಿಕ್ಕಿಬಿದ್ದರು.

                                           ಹಣ ಪಡೆದ ಸಂದೇಶ

                  ಸಿದ್ದಿಕ್‌ನ ಎಟಿಎಂ ಕಾರ್ಡ್‌ನ ಪಿನ್ ನಂಬರ್​ ಅನ್ನು ಫರ್ಹಾನ ಪಡೆದುಕೊಂಡಿದ್ದಳು. ಸಾವಿನ ನಂತರ ಆತನ ಖಾತೆಯಿಂದ 2 ಲಕ್ಷ ರೂಪಾಯಿ ಪಡೆದುಕೊಂಡರು. ಹಣ ಪಡೆದ ಸಂದೇಶ ನೇರವಾಗಿ ಸಿದ್ದಿಕ್ ಅವರ ಮಗನ ಮೊಬೈಲ್ ಫೋನ್‌ಗೆ ಹೋಗಿದೆ. ಇದರಿಂದ ಆತಂಕಗೊಂಡ ಕುಟುಂಬಸ್ಥರು ತಂದೆಗೆ ಕರೆ ಮಾಡಿದ್ದಾರೆ ಆದರೆ, ಆತನಿಂದ ಯಾವುದೇ ಉತ್ತರ ಬರದಿದ್ದಾಗ ಆತನಿಗಾಗಿ ಹುಡುಕಾಡಿದ್ದಾರೆ. ಪತ್ತೆಯಾಗದಿದ್ದಾಗ ನಾಪತ್ತೆ ದೂರು ದಾಖಲಿಸಿದ್ದರು. ಕೊನೆಗೆ ಶವವಾಗಿ ಸಿದ್ದಿಖ್​ ಪತ್ತೆಯಾಗಿದ್ದು, ಮೂವರು ಆರೋಪಿಗಳು ಬಂಧಿಸಿ, ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries