ಭೋಪಾಲ್: ಎರಡು ಗಂಡು ಚೀತಾಗಳೊಡನೆ ನಡೆದ ಕಾದಾಟದಲ್ಲಿ ದಕ್ಷಿಣ ಆಫ್ರಿಕಾದಿಂದ ತರಲಾಗಿದ್ದ ದಕ್ಷಾ ಎಂಬ ಹೆಣ್ಣು ಚೀತಾ ಮೃತಪಟ್ಟಿರುವ ಘಟನೆ ಮಧ್ಯಪ್ರದೇಶದ ಶಿಯೋಪುರ್ ಜಿಲ್ಲೆಯ ಕುನೊ ರಾಷ್ಟ್ರೀಯ ಉದ್ಯಾನದಲ್ಲಿ ಮಂಗಳವಾರ ನಡೆದಿದೆ.
ಭೋಪಾಲ್: ಎರಡು ಗಂಡು ಚೀತಾಗಳೊಡನೆ ನಡೆದ ಕಾದಾಟದಲ್ಲಿ ದಕ್ಷಿಣ ಆಫ್ರಿಕಾದಿಂದ ತರಲಾಗಿದ್ದ ದಕ್ಷಾ ಎಂಬ ಹೆಣ್ಣು ಚೀತಾ ಮೃತಪಟ್ಟಿರುವ ಘಟನೆ ಮಧ್ಯಪ್ರದೇಶದ ಶಿಯೋಪುರ್ ಜಿಲ್ಲೆಯ ಕುನೊ ರಾಷ್ಟ್ರೀಯ ಉದ್ಯಾನದಲ್ಲಿ ಮಂಗಳವಾರ ನಡೆದಿದೆ.
ಈ ಮೂಲಕ 20 ಚೀತಾಗಳಲ್ಲಿ ಒಟ್ಟು ಮೂರು ಚೀತಾಗಳು ಮೃತಪಟ್ಟವು.
ಅಗ್ನಿ, ವಾಯು ಎಂಬ ಎರಡು ಗಂಡು ಚೀತಾಗಳೊಡನೆಯ ಕಾದಾಟದಲ್ಲಿ ಇಂದು ಹೆಣ್ಣು ಚೀತಾ ದಕ್ಷಾ ಮೃತಪಟ್ಟಿರುವುದನ್ನು ತಿಳಿಸಲು ವಿಷಾಧಿಸುತ್ತೇವೆ ಎಂದು ಚೀತಾ ಯೋಜನಾ ನಿರ್ದೇಶಕರು ಹೇಳಿದ್ದಾರೆ.
ಗಂಡು ಚೀತಾಗಳು ಹೆಣ್ಣು ಚೀತಾಗಳೊಂದಿಗೆ ಆಕ್ರಮಣಕ್ಕೆ ಇಳಿಯುವುದು ಅಸಾಮಾನ್ಯವೇನಲ್ಲ ಎಂದು ಅವರು ಹೇಳಿದ್ದಾರೆ.
ಆಫ್ರಿಕಾದಲ್ಲಿ ಒಟ್ಟು ಚೀತಾಗಳ ಸಾವಿನಲ್ಲಿ ಶೇ 8 ರಷ್ಟು ಚೀತಾಗಳ ಸಾವು ಪರಸ್ಪರ ಕಾದಾಟದಿಂದ ಸಂಭವಿಸುತ್ತವೆ ಎಂದು ಅವರು ಹೇಳಿದ್ದಾರೆ.
ಕಳೆದ ವರ್ಷ ನಮೀಬಿಯಾ, ದಕ್ಷಿಣ ಆಫ್ರಿಕಾದಿಂದ 'ಪ್ರಾಜೆಕ್ಟ್ ಚೀತಾ' ಅಡಿಯಲ್ಲಿ ಒಟ್ಟು 20 ಚೀತಾಗಳನ್ನು ಕುನೊ ಉದ್ಯಾನಕ್ಕೆ ಕರೆತರಲಾಗಿತ್ತು. ಎರಡು ತಂಡಗಳಲ್ಲಿ ನಮೀಬಿಯಾ (8) ಹಾಗೂ ದಕ್ಷಿಣ ಆಫ್ರಿಕಾದಿಂದ (12) ಚೀತಾಗಳನ್ನು ಕರೆತರಲಾಗಿತ್ತು. ಪ್ರಧಾನಿ ಮೋದಿ ಅವರ ಹುಟ್ಟುಹಬ್ಬದ (ಸೆ.17) ದಿನದಂದು ಮೊದಲ ತಂಡದಲ್ಲಿ ಚೀತಾಗಳು ಭಾರತಕ್ಕೆ ಬಂದಿದ್ದವು.
ಇತ್ತೀಚೆಗೆ ಕುನೊ ಉದ್ಯಾನದಲ್ಲಿರುವ ಚೀತಾಗಳನ್ನು ಬೇರೆಡೆಗೆ ಸ್ಥಳಾಂತರಿಸುವಂತೆ ಕೋರಿ ಮಧ್ಯ ಪ್ರದೇಶದ ಅರಣ್ಯ ಇಲಾಖೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿತ್ತು.