ಕಾಸರಗೋಡು: ಮೂಲಸೌಕರ್ಯ ಅಭಿವೃದ್ಧಿಯ ಮೂಲಕ ಆರೋಗ್ಯ ಸೇವೆಗಳನ್ನು ಮತ್ತಷ್ಟು ಸುಧಾರಿಸುವುದರ ಜತೆಗೆ ಆದ್ರ್ರಮ್ ಮಿಷನ್ ಮೂಲಕ ಜಿಲ್ಲೆಯ 25 ಕುಟುಂಬ ಕಲ್ಯಾಣ ಕೇಂದ್ರಗಳನ್ನು ಸಾರ್ವಜನಿಕ ಆರೋಗ್ಯ ಕೇಂದ್ರಗಳಾಗಿ (ಆರೋಗ್ಯ ಮತ್ತು ಕಲ್ಯಾಣ ಕೇಂದ್ರಗಳು)ಮೇಲ್ದರ್ಜೆಗೇರಿಸಲಾಗುವುದು. ಶಾಂತಿಮಲೆ, ಕೋಳಿಯಡ್ಕ, ಮಾಙËಡ್, ಬಲ್ಲ, ಪಾಕಂ, ಮೇಲ್ಪರಂಬ, ಕೊಲವಯಲ್, ಮಾವುಂಗಾಲ್, ಮಡಿಕೈ, ಚಾಮುಂಡಿಕುನ್ನು, ಪಡಿಮಾರುತ್, ಚೆಯ್ಯಂಕೋಟ್, ಬಳಾಲ್, ಬಾನಂ, ಪನತ್ತಡಿ, ಪ್ರಾಂತರ್‍ಕಾವ್, ಮುಕೋಡೆ, ಬೀರಿಕುಲಂ, ಎರಿಯಾಲ್, ನೆಟ್ಟಿಣಿಗೆ, ಏತಡ್ಕ, ಕಮರ್ಂತೋಡಿ, ಧರ್ಮತ್ತಡ್ಕ, ಭೀಮಾನಡಿ ಮತ್ತು ನೀಲೇಶ್ವರಂ ಸಾರ್ವಜನಿಕ ಆರೋಗ್ಯ ಕೇಂದ್ರಗಳು ಸಾರ್ವಜನಿಕರಿಗೆ ವಿವಿಧ ಆರೋಗ್ಯ ಸೇವೆಗಳನ್ನು ಒದಗಿಸಲಿವೆ. ಜಿಲ್ಲೆಯಲ್ಲಿ ಒಟ್ಟು 250 ಉಪಕೇಂದ್ರಗಳಿದ್ದು, ಮೊದಲ ಹಂತದಲ್ಲಿ 25 ಸಾರ್ವಜನಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಲಾಗುವುದು. ರಾಷ್ಟ್ರೀಯ ಆರೋಗ್ಯ ಮಿಷನ್‍ನಿಂದ ಮಂಜೂರಾದ 7 ಕೋಟಿ ರೂ.ಗಳ ಸಹಾಯದಿಂದ ಮೂಲಸೌಕರ್ಯ ಅಭಿವೃದ್ಧಿಯನ್ನು ಕೈಗೊಳ್ಳಲಾಗುತ್ತಿದೆ. ಸಾಮಾನ್ಯ ಒಪಿಗಳು, ಪಾಲಿಯೇಟಿವ್ ಒಪಿಗಳು, ಮಹಿಳೆಯರಿಗೆ ವಿಶೇಷ ಒಪಿಗಳು ಮತ್ತು ಆರೋಗ್ಯ ಸೌಲಭ್ಯಗಳಿಂದ ವಿತರಿಸಲಾದ ಔಷಧಿಗಳ ಪ್ರವೇಶವು ಸಾರ್ವಜನಿಕ ಆರೋಗ್ಯ ಕೇಂದ್ರಗಳ ಮೂಲಕ ವಾರದಲ್ಲಿ ಆರು ದಿನಗಳು ಸಾರ್ವಜನಿಕರಿಗೆ ಲಭ್ಯವಿರುತ್ತದೆ.
ನಾಳೆ ಸಿ.ಎಂ ಉದ್ಘಾಟನೆ:
ಜಿಲ್ಲೆಯಲ್ಲಿ 25 ಸಾರ್ವಜನಿಕ ಆರೋಗ್ಯ ಕೇಂದ್ರಗಳನ್ನು ಮೇ 18 ರಂದು ಬೆಳಗ್ಗೆ 11ಕ್ಕೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಉದ್ಘಾಟಿಸಲಿದ್ದಾರೆ. ಆರೋಗ್ಯ ಸಚಿವೆ ವೀಣಾ ಜಾರ್ಜ್ ಅಧ್ಯಕ್ಷತೆ ವಹಿಸುವರು. ಆಯಾ ಕೇಂದ್ರದ ಮೂಲಕ ನಡೆಯಲಿರುವ ಉದ್ಘಾಟನಾ ಸಮಾರಂಭದಲ್ಲಿ ಶಾಸಕರು ಭಾಗವಹಿಸಲಿದ್ದಾರೆ. ಮಂಜೇಶ್ವರ, ಧರ್ಮತ್ತಡ್ಕ, ಕಾಸರಗೋಡು ಪ್ರದೇಶ, ಉದುಮ ಮಾಙËಡ್, ಕಾಞಂಗಾಡ್ ಕೊಳವಯಲ್ ಮತ್ತು ತ್ರಿಕರಿಪುರ ನೀಲೇಶ್ವರಂನಲ್ಲಿ ಉದ್ಘಾಟನಾ ಕಾರ್ಯಕ್ರಮ ನಿಗದಿಪಡಿಸಲಾಗಿದೆ.