ನವದೆಹಲಿ : ವಿಮಾನದಿಂದ ಸಮುದ್ರಕ್ಕೆ ಇಳಿಸಬಹುದಾದ ಕಂಟೇನರ್‌ನ (ಏರ್ ಡ್ರಾಪೆಬಲ್) ಯಶಸ್ವಿ ಪ್ರಯೋಗವನ್ನು ಗೋವಾ ಕಡಲ ತೀರದಲ್ಲಿ ಕಳೆದ ಏಪ್ರಿಲ್ 27ರಂದು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಘಟನೆ (ಡಿಆರ್‌ಡಿಒ) ಮತ್ತು ಭಾರತೀಯ ನೌಕಾಪಡೆಗಳು ನಡೆಸಿವೆ.

150 ಕೆ.ಜಿ. ಸರಕು ಒಳಗೊಂಡ ಈ ಕಂಟೇನರ್ ಅನ್ನು ಐಎಲ್ 38 ಎಸ್‌ಡಿ ವಿಮಾನದಿಂದ ಸಮುದ್ರಕ್ಕೆ ಇಳಿಸಲಾಯಿತು ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.
'ಕಡಲ ತೀರದಿಂದ 2 ಸಾವಿರ ಕಿ.ಮೀ.ಗಿಂತಲೂ ದೂರದಲ್ಲಿ ಕಾರ್ಯಾಚರಣೆಯಲ್ಲಿ ತೊಡಗಿರುವ ಯುದ್ಧ ನೌಕೆಗಳಿಗೆ ಬಿಡಿಭಾಗಗಳು, ಆಹಾರ ಸಾಮಗ್ರಿ ಸಹಿತ ಇತರ ಅಗತ್ಯದ ವಸ್ತುಗಳನ್ನು ತ್ವರಿತವಾಗಿ ಸಾಗಿಸುವ ಸಲುವಾಗಿ ಈ ಕಂಟೇನರ್ ಅನ್ನು ಅಭಿವೃದ್ಧಿಪಡಿಸಲಾಗಿದೆ' ಎಂದು ಸಚಿವಾಲಯದ ಪ್ರಕಟಣೆ ತಿಳಿಸಿದೆ.