ಪೆರ್ಲ : ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಕಾಸರಗೋಡು ಜಿಲ್ಲೆ ಹಾಗೂ ಹೊಸದುರ್ಗ ಮಂಜೇಶ್ವರ ತಾಲೂಕು ಸಮಿತಿಗಳ ನೇತೃತ್ವದಲ್ಲಿ ನಡೆಯುತ್ತಿರುವ ಭಜನೆ ಅಭಿಮಾನ ಅಭಿಯಾನ ತಿಂಗಳ ಸರಣಿ ಕಾರ್ಯಕ್ರಮ ಕಾಟುಕುಕ್ಕೆ ಶ್ರೀಸುಬ್ರಾಯ ಕ್ಷೇತ್ರದ ಸಭಾಂಗಣದಲ್ಲಿ ನಡೆಯಿತು.
ಶ್ರೀಪುರಂದರದಾಸ ಆರಾಧನೋತ್ಸವ ಸಮಿತಿ ಕಾಟುಕುಕ್ಕೆ ಮತ್ತು ಎಣ್ಮಕಜೆ ವಲಯ ಭಜನಾ ಮಂಡಳಿಗಳ ಸಹಕಾರದಲ್ಲಿ ನಡೆದ ಕಾರ್ಯಕ್ರಮವನ್ನು ಕಾಟುಕುಕ್ಕೆ ಶ್ರೀ ಸುಬ್ರಾಯ ದೇವಸ್ಥಾನದ ಅರ್ಚಕರಾದ ರಾಮಚಂದ್ರ ಭಟ್ ದೀಪ ಪ್ರಜ್ವಲನೆಗೊಳಿಸಿ ಚಾಲನೆ ನೀಡಿದರು.ಕ್ಷೇತ್ರದ ಆಡಳಿತ ಮೋಕ್ತೆಸರ ತಾರನಾಥ ರೈ ಪಡ್ಡಂಬೈಲುಗುತ್ತು ಅಧ್ಯಕ್ಷತೆವಹಿಸಿದ್ದರು. ಧ.ಮಂ. ಭ.ಪರಿಷತ್ತು ಕಾಸರಗೋಡು ಇದರ ಅಧ್ಯಕ್ಷ,ಧಾರ್ಮಿಕ ಮುಂದಾಳು ಕೆ.ಎನ್. ವೆಂಕಟ್ರಮಣ ಹೊಳ್ಳ ಕಾಸರಗೋಡು, ಎಣ್ಮಕಜೆ ಗ್ರಾ.ಪಂ.ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎಸ್.ಗಾಂಭೀರ್,ಧ.ಮಂ.ಭ.ಪ.ಕಾರ್ಯದರ್ಶಿ ರಾಮಕೃಷ್ಣ ಸಂತಡ್ಕ, ಕುಣಿತ ಭಜನಾ ತರಬೇತುದಾರ ದೀಕ್ಷಿತ್ ಧರ್ಮತ್ತಡ್ಕ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಕ್ಷೇತ್ರ ಆಡಳಿತ ಸಮಿತಿಯ ರಿತೇಶ್ ಕಿರಣ್ ಕಾಟುಕುಕ್ಕೆ, ಶಿವಪ್ರಸಾದ್ ರಾವ್ ,ಪ್ರಹ್ಲಾದ್ ಪೆರ್ಲ, ಹರಿಪ್ರಸಾದ್ ಶೆಟ್ಟಿ, ಲೋಕನಾಥ್ ಶೆಟ್ಟಿ, ಹರ್ಷಲ್ ಮೊದಲಾದವರು ಉಪಸ್ಥಿತರಿದ್ದರು.ಶ್ರೀ ಪುರಂದರ ದಾಸ ಆರಾಧನೋತ್ಸವ ಸಮಿತಿ ಕಾಟುಕುಕ್ಕೆ ಅಧ್ಯಕ್ಷ ರಾಮಕೃಷ್ಣ ಕಾಟುಕುಕ್ಕೆ ಪ್ರಸ್ತಾವನೆಗೈದರು. ರಾಮಚಂದ್ರ ಮಣಿಯಾಣಿ ಸ್ವಾಗತಿಸಿ ನಿರೂಪಣೆಗೈದರು. ಕಿಶೋರ್ ಪೆರ್ಲ ವಂದಿಸಿದರು. ಶ್ರೀ ಸುಬ್ರಹ್ಮಣ್ಯೇಶ್ವರ ಮಹಿಳಾ ಹಾಗೂ ವನಿತಾ ಭಜನಾ ಮಂಡಳಿ ಕಾಟುಕುಕ್ಕೆ, ಶ್ರೀ ದುರ್ಗಾ ಬಂಟ್ಸ್ ಭಜನಾ ಮಂಡಳಿ ಪೆರ್ಲ, ಶ್ರೀ ಅಯ್ಯಪ್ಪ ಮಕ್ಕಳ ಕುಣಿತ ಭಜನ ಮಂಡಳಿ ಪೆರ್ಲ,ಶ್ರೀ ಜಠಾಧಾರಿ ಮಕ್ಕಳ ಕುಣಿತ ಭಜನಾ ಮಂಡಳಿ ಪಡ್ರೆ ಸ್ವರ್ಗ, ಶ್ರೀ ರಾಮ ಮಕ್ಕಳ ಕುಣಿತ ಭಜನಾ ಮಂಡಳಿ. ಅಡ್ಕಸ್ಥಳ,ಶ್ರೀ ಸುಬ್ರಹ್ಮಣ್ಯೇಶ್ವರ ಪ್ರಸಾದಿತ ಭಜನಾ ಸಂಘ ಕಾಟುಕುಕ್ಕೆ ಇವರಿಂದ ಭಜನಾ ಸೇವೆ ನಡೆಯಿತು.