ನವದೆಹಲಿ: ಬೆಂಗಳೂರಿನಲ್ಲಿ ಈ ತಿಂಗಳು ಆಸ್ಟ್ರೇಲಿಯಾ ನೂತನ ಕಾನ್ಸುಲೇಟ್ ಕಚೇರಿ ತೆರೆಯಲಿದ್ದು, ಇದಕ್ಕೆ ಪ್ರತಿಯಾಗಿ ಭಾರತವೂ ಶೀಘ್ರವೇ ಬ್ರಿಸ್ಬೇನ್‌ನಲ್ಲಿ ಕಾನ್ಸುಲೇಟ್ ಕಚೇರಿ ಆರಂಭಿಸಲಿದೆ.
ಭಾರತ ಪ್ರಧಾನಿ ನರೇಂದ್ರ ಮೋದಿ ಮತ್ತು ಆಸ್ಟ್ರೇಲಿಯಾ ಪ್ರಧಾನಿ ಆಯಂಟನಿ ಅಲ್ಬೆನೀಸ್ ಅವರು ಸಿಡ್ನಿಯಲ್ಲಿ ಪತ್ರಕರ್ತರಿಗೆ ಈ ವಿಷಯ ತಿಳಿಸಿದರು.
'ನಿರಂತರ ವೃದ್ಧಿಸುತ್ತಿರುವ ನಮ್ಮ ಬಾಂಧವ್ಯ ಗಾಢವಾಗಿಸಲು ಆಸ್ಟ್ರೇಲಿಯಾವು ಬೆಂಗಳೂರಿನಲ್ಲಿ ಹೊಸ ಕಾನ್ಸುಲೇಟ್ ಕಚೇರಿ ತೆರೆಯುತ್ತಿರುವ ಬೆನ್ನಲ್ಲೇ ಬ್ರಿಸ್ಬೇನ್‌ನಲ್ಲಿ ಭಾರತವೂ ಹೊಸ ಕಾನ್ಸುಲೇಟ್ ಕಚೇರಿಯನ್ನು ಶೀಘ್ರದಲ್ಲೇ ತೆರೆಯಲಿದೆ' ಎಂದೂ ಮೋದಿ ಹೇಳಿದರು.
ದೆಹಲಿ, ಮುಂಬೈ, ಚೆನ್ನೈ ಮತ್ತು ಕೋಲ್ಕತ್ತದಲ್ಲಿ ಈಗಾಗಲೇ ಆಸ್ಟ್ರೇಲಿಯಾದ ಕಾನ್ಸುಲೇಟ್ ಕಚೇರಿಗಳಿವೆ. ಇದು 5ನೇ ಕಚೇರಿ ಎನಿಸಲಿದೆ. ಕ್ಯಾನ್‌ಬೆರಾದಲ್ಲಿ ಭಾರತದ ಹೈಕಮಿಷನ್ ಕಚೇರಿ ಜತೆಗೆ ಪರ್ತ್, ಮೆಲ್ಬರ್ನ್ ಮತ್ತು ಸಿಡ್ನಿಯಲ್ಲಿ ರಾಯಭಾರ ಕಚೇರಿಗಳಿವೆ. ಬ್ರಿಸ್ಬೇನ್‌ನಲ್ಲಿ ಭಾರತೀಯ ಕಾನ್ಸುಲೇಟ್ ಕಚೇರಿ ತೆರೆಯುವುದನ್ನು ಸ್ವಾಗತಿಸಿರುವ ಅಲ್ಬೆನೀಸ್, 'ಹೊಸ ಕಾನ್ಸುಲೇಟ್ ಕಚೇರಿಯು, ಭಾರತದಲ್ಲಿ ಪ್ರವರ್ಧಮಾನಕ್ಕೆ ಬರುತ್ತಿರುವ ಡಿಜಿಟಲ್ ಆರ್ಥಿಕತೆ ಮತ್ತು ಪರಿಸರ ವ್ಯವಸ್ಥೆಗೆ ಪೂರಕವಾದ ಆವಿಷ್ಕಾರದ ಜೊತೆ ಆಸ್ಟ್ರೇಲಿಯಾದ ವಾಣಿಜ್ಯ ವ್ಯವಹಾರಗಳನ್ನು ಬೆಸೆಯಲು ಅನುಕೂಲವಾಗಲಿದೆ' ಎಂದರು.
ಮನವಿ:
ಸನ್ಮನಸ್ಸಿನ ಓದುಗರೇ, ಸಮರಸ ಸುದ್ದಿ ದಿನನಿತ್ಯ ಓದುಗರಿಗೆ ಬಹುತೇಕ ಸಕಾಲಿಕ ಮತ್ತು ಖಚಿತ ವರದಿಗಳಿಂದ ಇಂದಿನ ಆಧುನಿಕ ಸುದ್ದಿ ಮಾಧ್ಯಮ ಕ್ಷೇತ್ರದಲ್ಲಿ ಹೆಮ್ಮೆಯಿಂದ ಪ್ರಕಟಗೊಳ್ಳುತ್ತಿದೆ. ಪ್ರಸ್ತುತ ಸಮಸರಸ ಸುದ್ದಿಯ ಸಮಗ್ರ ತಾಂತ್ರಿಕ ನವೀಕರಣಕ್ಕಾಗಿ ಆರ್ಥಿಕ ಅಡಚಣೆಯಿಂದ ಸಹೃದಯ ಓದುಗರು, ಅಭಿಮಾನಿಗಳು ಕನಿಷ್ಠ 100/- ವಿನಂತಾದರೂ ಹೆಗಲು ನೀಡಿದರೆ ಸಹಕಾರಿಯಾಗುವುದೆಂದು ನಂಬಿದ್ದೇವೆ. ಮೇ.29 ಸೋಮವಾರ ಸಂಜೆ 5ರ ಮೊದಲು ಈ ಸಹಾಯ ನಿಮ್ಮಿಂದ ಲಭ್ಯವಾದಲ್ಲಿ ನಾವು ಅಭಾರಿ.
ಸಲ್ಲಿಕೆಯಾಗಬೇಕಾದ ಖಾತೆ ಮಾಹಿತಿ:
ಗೂಗಲ್ ಪೇ: 7907952070
ಬ್ಯಾಂಕ್ ವಿವರ:
ಸಲ್ಲಿಕೆಯ ನಂತರ ನಮಗೆ(ಮೇಲಿನ ಮೊಬೈಲ್ ಸಂಖ್ಯೆಗೆ) ಮಾಹಿತಿ ನೀಡಿ.