ಬದಿಯಡ್ಕ: ಕಾಸರಗೋಡಲ್ಲಿ ಶನಿವಾರ ನಡೆದ ಸಚಿವ ಪಿ.ಎ.ಮೊಹಮ್ಮದ್ ರಿಯಾಝ್ ಅವರನ್ನು ಭೇಟಿಯಾದ ಕುಂಬ್ಡಾಜೆ ಗ್ರಾ.ಪಂ.ನ ಅಭಿವೃದ್ಧಿ ವ್ಯವಹಾರಗಳ ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ಎಂ.ಅಬ್ದುರಝಾಕ್ ಅವರು 10ನೇ ವಾರ್ಡಿನ ಮಣ್ಣಾಪಿನಲ್ಲಿ ಚೆಕ್ ಡ್ಯಾಂ ಮತ್ತು ಟ್ರಾಕ್ಟರ್ ವೇ ನಿರ್ಮಾಣಕ್ಕೆ ಮನವಿ ನೀಡಿದರು.
ಸಚಿವ ಪಿ.ಎ.ಮುಹಮ್ಮದ್ ರಿಯಾಝ್ ದೂರನ್ನು ಕೂಲಂಕಷವಾಗಿ ಆಲಿಸಿದ ಬಳಿಕ ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ವಿಶೇಷ ಅಧಿಕಾರಿಯಿಂದ ಮಾಹಿತಿ ಕೇಳಿದರು. ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ವಿಶೇμÁಧಿಕಾರಿ ಇ.ಪಿ.ರಾಜಮೋಹನ್ ಅವರು ಅದಾಲಮ್‍ಗೆ ತಲುಪಿದ ಈ ವಿಷಯಕ್ಕೆ ತುರ್ತು ಪ್ರಾಮುಖ್ಯತೆ ನೀಡಿ ನಿರ್ಮಾಣ ಕಾಮಗಾರಿಯನ್ನು ತಕ್ಷಣವೇ ಆರಂಭಿಸಲಾಗುವುದು ಎಂದು ತಿಳಿಸಿದರು. ಜನಪ್ರತಿನಿಧಿಯೂ ಆದ ಅಬ್ದುರ್ ರಝಾಕ್ ತಮ್ಮ ವಾರ್ಡ್ ಆಗಿರುವ ಈ ಕ್ಷೇತ್ರದ ಬಹುಕಾಲದ ಬೇಡಿಕೆ ಈಡೇರಲಿದೆ ಎಂದು ಸಂತಸದಿಂದ ಹಿಂತಿರುಗಿದರು.