HEALTH TIPS

ಪತಿಗಿಂತ ಪತ್ನಿಗೇ ಹೆಚ್ಚು ಸಂಪಾದನೆ; ಜೀವನಾಂಶ ನೀಡಲಾಗದು ಎಂಬುದನ್ನು ಎತ್ತಿ ಹಿಡಿದ ಕೋರ್ಟ್

                ಮುಂಬೈ: ದಂಪತಿಯ ವಿರಸ ವಿಚ್ಛೇದನದಲ್ಲಿ ಕೊನೆಯಾಗುವುದು, ಜೀವನಾಂಶಕ್ಕೆ ಬೇಡಿಕೆ ಇಡುವುದು ಹೊಸದೇನಲ್ಲ. ಆದರೆ ಈ ಪ್ರಕರಣದಲ್ಲಿ ಪತಿಗಿಂತ ಪತ್ನಿಗೇ ಹೆಚ್ಚು ಸಂಪಾದನೆ ಇರುವುದರಿಂದ ಜೀವನಾಂಶ ನೀಡಲಾಗದು ಎಂಬ ಆದೇಶವನ್ನು ಕೋರ್ಟ್ ಎತ್ತಿಹಿಡಿದಿದೆ.

             ಮುಂಬೈನ ದಂಪತಿಯ ವಿಚ್ಛೇದನ ಪ್ರಕರಣ ಕೋರ್ಟ್ ಮೆಟ್ಟಿಲೇರಿದ್ದು, ಆಕೆ ಪತಿಯಿಂದ ಜೀವನಾಂಶ ಕೋರಿ ಅರ್ಜಿ ಸಲ್ಲಿಸಿದ್ದಳು. ಕೌಟುಂಬಿಕ ದೌರ್ಜನ್ಯ ಆರೋಪ ಹೊರಿಸಿ ಪತಿ ಮತ್ತು ಆತನ ಮನೆಯವರ ವಿರುದ್ಧ 2021ರಲ್ಲಿ ಈ ಮಹಿಳೆ ಪ್ರಕರಣ ದಾಖಲಿಸಿದ್ದಳು. ಈ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದ್ದು, ಜೀವನಾಂಶಕ್ಕೂ ಬೇಡಿಕೆ ಇರಿಸಿದ್ದಳು. ಆದರೆ ಪತ್ನಿಗೆ 4 ಲಕ್ಷ ರೂ. ಸಂಪಾದನೆ ಹಾಗೂ ಅದು ಪತಿಯ ಸಂಪಾದನೆಗಿಂತಲೂ ಅಧಿಕ ಇರುವುದರಿಂದ ಜೀವನಾಂಶ ನೀಡಲಾಗದು ಎಂಬ ಆದೇಶ ಹೊರಬಿದ್ದಿತ್ತು.

                 ಇದೇ ಪ್ರಕರಣ ಬಳಿಕ ಮುಂಬೈ ಸಿಟಿ ಸೆಷನ್ಸ್ ಕೋರ್ಟ್ ಮೆಟ್ಟಿಲೇರಿದ್ದು, ಅಲ್ಲಿನ ನ್ಯಾಯಾಧೀಶರಾದ ಸಿ.ವಿ.ಪಾಟೀಲ್ ಜೀವನಾಂಶ ನೀಡಲಾಗದು ಎಂಬ ಹಿಂದಿನ ಆದೇಶವನ್ನೇ ಎತ್ತಿ ಹಿಡಿದಿದ್ದರು. ಅದಾಗ್ಯೂ ಮಗುವಿನ ಜೀವನನಿರ್ವಹಣೆಗೆ ಮಾಸಿಕ ಹತ್ತು ಸಾವಿರ ರೂ. ನೀಡಬೇಕು ಎಂದು ನಿರ್ದೇಶನ ನೀಡಿದ್ದಾರೆ.

                ವಾಸ್ತವವಾಗಿ, ಸಂಪಾದನೆ ಮಾಡುವ ಹೆಂಡತಿಯೂ ಜೀವನಾಂಶಕ್ಕೆ ಅರ್ಹಳಾಗಿದ್ದಾಳೆ, ಆದರೆ ಅದಕ್ಕಾಗಿ ಇತರ ಸಂದರ್ಭಗಳನ್ನು ಪರಿಗಣಿಸಬೇಕಾಗಿದೆ. ಇಲ್ಲಿಯೂ ಗಂಡನು ಹೆಂಡತಿಗಿಂತ ಹೆಚ್ಚಿನ ಆದಾಯ ಹೊಂದಿದ್ದಾನೆ ಅಥವಾ ಹೆಂಡತಿ ಜೀವನಾಂಶಕ್ಕೆ ಅರ್ಹಳಾಗಿದ್ದಾಳೆಯೇ ಎಂಬುದನ್ನು ಅರ್ಹತೆಯ ಆಧಾರದ ಮೇಲೆ ಪರಿಗಣಿಸಲಾಗುತ್ತದೆ. ಆದರೆ ಈ ಹಂತದಲ್ಲಿ, ಪಕ್ಷಕಾರರ ಮೇಲ್ನೋಟದ ಆದಾಯ ಪರಿಗಣಿಸಿ, ಮ್ಯಾಜಿಸ್ಟ್ರೇಟ್ ಆದೇಶವು ಕಾನೂನುಬದ್ಧವಾಗಿದೆ ಮತ್ತು ಸೂಕ್ತವಾಗಿದೆ ಎಂದು ನ್ಯಾಯಾಧೀಶರು ಹೇಳಿದ್ದಾರೆ.

                 ತಾನು ಗರ್ಭ ಧರಿಸಿದಾಗ ತನ್ನ ಗಂಡನೊಂದಿಗೆ ಸಹಬಾಳ್ವೆ ನಡೆಸುತ್ತಿದ್ದೆ ಎಂದು ಮಹಿಳೆ ನ್ಯಾಯಾಲಯಕ್ಕೆ ತಿಳಿಸಿದ್ದಳು. ತನ್ನ ಪತಿ ಲೈಂಗಿಕ ದೌರ್ಬಲ್ಯಕ್ಕೆ ಚಿಕಿತ್ಸೆ ಪಡೆಯುತ್ತಿದ್ದು, ಅದನ್ನು ತನಗೆ ತಿಳಿಸಿರಲಿಲ್ಲ. ತಾನು ಗರ್ಭವತಿಯಾಗಿದ್ದಾಗಿನ ವಿಷಯ ತಿಳಿಸಿದಾಗ ಪತಿ ಮತ್ತು ಸಂಬಂಧಿಕರು ತನ್ನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು ಎಂದು ಆಕೆ ಕೋರ್ಟ್​ನಲ್ಲಿ ತಿಳಿಸಿದ್ದಳು. ಇನ್ನೊಂದೆಡೆ ಪತಿ ಮಗುವಿನ ತಂದೆ ತಾನಲ್ಲ ಎಂದು ವಾದಿಸಿದ್ದಾನೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries