ಕಾಸರಗೋಡು: ಸಿಬಿಎಸ್‍ಇ ಹತ್ತ ಹಾಗೂ 12ನೇ ತರಗತಿ ಪರೀಕ್ಷೆಯಲ್ಲಿ ಕಾಸರಗೋಡಿನ ಜವಾಹರ್ ನವೋದಯ ವಿದ್ಯಾಲಯವು ಉತ್ತಮ ಫಲಿತಾಂಶ ದಾಖಲಿಸಿಕೊಂಡಿದೆ. ಅಖಿಲ್ ನಂಬಿಯಾರ್ ಶೇ 97.6 ಅಂಕಗಳೊಂದಿಗೆ ಪ್ರಥಮ, ಶೇ 96 ಅಂಕಗಳೊಂದಿಗೆ ಎಂ.ಎಸ್.ಜ್ಯೋತ್ಸ್ನಾ ದ್ವಿತೀಯ ಸ್ಥಾನ ಪಡೆದರು. ಫಾತಿಮಾ ಸಫಾ ಮತ್ತು ಜೆಸ್ಬಿನ್ ಜಾರ್ಜ್ ತಲಾ ಶೇ.95.8 ಅಂಕ ಪಡೆದು ತೃತೀಯ ಸ್ಥಾನ ಪಡೆದರು.
ಎಲ್ಲಾ ವಿದ್ಯಾರ್ಥಿಗಳು ವಿಜ್ಞಾನ ಮತ್ತು ವಾಣಿಜ್ಯ ವಿಭಾಗಗಳಲ್ಲಿ ಪ್ಲಸ್ ಟು ಉತ್ತೀರ್ಣರಾಘುವುದರೊಂದಿಗೆ ಶಾಲೆಯು ಶೇ. ನೂರರ ಫಲಿತಾಂಶ ದಾಖಲಿಸಿಕೊಮಡಿದೆ. ಕೆ. ಫಂಚಮಿ ವಾಣಿಜ್ಯ ವಿಭಾಗದಲ್ಲಿ ಶೇ.97.4 ಅಂಕಗಳೊಂದಿಗೆ ಅಗ್ರಸ್ಥಾನ ಪಡೆದುಕೊಮಡಿದ್ದರೆ, ಎಂ.ಎ ಶಿವರೂಪ್ ಶೇ 93.6 ಅಂಕಗಳೊಂದಿಗೆ ದ್ವಿತೀಯ, ಕೆ. ವಿನಯ ಕೃಷ್ಣನ್ ಶೇ.92.4 ಅಂಕ ಪಡೆದು ಈ ವಿಭಾಗದಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ಸುಧೀಪ್ ಧನಂಜಯನ್ ಶೇ.93.5 ಅಂಕಗಳೊಂದಿಗೆ ಪ್ರಥಮ, ಹೃದಯಾ ಸುರೇಶ್ ಶೇ.92.2 ಅಂಕಗಳೊಂದಿಗೆ ದ್ವಿತೀಯ ಹಾಗೂ ಎನ್.ಕೆ.ನಂದಿತಾ ಶೇ.91.6 ಅಂಕಗಳೊಂದಿಗೆ ತೃತೀಯ ಸ್ಥಾನ ಪಡೆದುಕೊಮಡಿದ್ದಾರೆ.