ಪಾಲಕ್ಕಾಡ್: ಪಾಪ್ಯುಲರ್ ಫ್ರಂಟ್ ಕಾರ್ಯಕರ್ತರ ಪತ್ತೆಗೆ ಬಹುಮಾನ ಘೋಷಿಸಿ ಎನ್‍ಐಎ ಪೋಸ್ಟರ್ ಪ್ರಕಟಿಸಿದೆ.
ವಲ್ಲಪುಳ ಪಂಚಾಯತ್ ನಲ್ಲಿ ಎನ್ ಐಎ ಪೋಸ್ಟರ್ ಹಾಕಲಾಗಿದೆ. ಎನ್‍ಐಎ 3ರಿಂದ 4 ಲಕ್ಷ ಬಹುಮಾನ ಘೋಷಿಸಿದೆ.
ಪಾಪ್ಯುಲರ್ ಫ್ರಂಟ್ ಕಾರ್ಯಕರ್ತರಾದ ಶಾಹುಲ್ ಹಮೀದ್, ಅಬಿದುಲ್ ರಶೀದ್, ಮುಹಮ್ಮದ್ ಮನ್ಸೂರ್, ಮುಹಮ್ಮದಲಿ ಮತ್ತು ಅಬ್ದುಲ್ ವಹಾಬ್ ಅವರ ಪತ್ತೆಗೆ ಎನ್‍ಐಎ ಬಹುಮಾನ ಘೋಷಿಸಿದೆ. ಐದು ದಿನಗಳ ಹಿಂದೆ ಪಂಚಾಯಿತಿ ಕಚೇರಿಯಲ್ಲಿ ಪೋಸ್ಟರ್ ಹಾಕಲಾಗಿತ್ತು.
ದೇಶದ ವಿವಿಧೆಡೆ ದಾಳಿ ನಡೆಸಲು ಮುಂದಾಗಿದ್ದ ಮೂವರನ್ನು ಬಂಧಿಸಿರುವುದಾಗಿ ಎನ್ ಐಎ ಪ್ರಕಟಿಸಿದೆ. ಐಎಸ್‍ಗೆ ಸಂಬಂಧಿಸಿದ ಮೂವರನ್ನು ಬಂಧಿಸಲಾಗಿದೆ ಎಂದು ಎನ್‍ಐಎ ಹೇಳಿದೆ.