ಕುಂಬಳೆ: ಬಂಬ್ರಾಣ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಿವಿಧ ತಾತ್ಕಾಲಿಕ ಹುದ್ದೆಗಳಿಗೆ ಮೇ.31 ರಂದು ಬೆಳಿಗ್ಗೆ 9.30 ರಿಂದ ಶಾಲಾ ಕಾರ್ಯಾಲಯದಲ್ಲಿ ಸಂದರ್ಶನ ನಡೆಯಲಿದೆ. ಎಲ್.ಪಿ.ಎಸ್.ಟಿ. ಕನ್ನಡ-1, ಎಲ್.ಪಿ.ಎಸ್.ಟಿ.ಮಲೆಯಾಳಂ-1, ಜ್ಯೂನಿಯರ್ ಅರೆಬಿಕ್ 1 ಹುದ್ದೆಗೆ ತಾತ್ಕಾಲಿಕ ನೇಮಕಾತಿ ನಡೆಯಲಿದೆ. ಆಸಕ್ತ ಅಭ್ಯರ್ಥಿಗಳು ಮೂಲ ದಾಖಲೆ ಪತ್ರಗಳೊಂದಿಗೆ ಸಂದರ್ಶನದಲ್ಲಿ ಹಾಜರಾಗಲು ಶಾಲಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
……………………………………………………………………………………………………………
ಮಧೂರು ಶಾಲೆಯಲ್ಲಿ ಸಂದರ್ಶನ
ಮಧೂರು: ಮಧೂರು ಜಿ.ಜೆ.ಬಿ.ಎಸ್.ಶಾಲೆಯಲ್ಲಿ ಎಲ್.ಪಿ.ಎಸ್.ಟಿ ಕನ್ನಡ 1 ಹಾಗೂ ಅರೆಕಾಲಿಕ ಅರೆಬಿ 1 ಹುದ್ದೆಗೆ ತಾತಾಲಿಕ ನೇಮಕಾತಿಗೆ ಮೇ.31 ರಂದು ಬೆಳಿಗ್ಗೆ 10.30 ಕ್ಕೆ ಸಂದರ್ಶನ ನಡೆಯಲಿದೆ. ಆಸಕ್ತರು ಸಂದರ್ಶನದಲ್ಲಿ ಮೂಲ ದಾಖಲೆಪತ್ರಗಳೊಂದಿಗೆ ಭಾಗವಹಿಸಬಹುದೆಮದು ಶಾಲಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
……………………………………………………………………………………………………………
ಪಡ್ರೆ ವಾಣೀನಗರ ಶಿಕ್ಷಕರ ಹುದ್ದೆಗೆ ಸಂದರ್ಶನ
ಪೆರ್ಲ: ಪಡ್ರೆ ವಾಣೀನಗರ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ಹೈಯರ್ ಸೆಕೆಂಡರಿ ವಿಭಾಗದಲ್ಲಿ ಪ್ರಸಕ್ತ ತೆರವಾಗಿರುವ ಎಚ್‍ಎಸ್‍ಸ್‍ಟಿ ಸೋಶಿಯೋಲಜಿ ಮತ್ತು ಎಚ್ ಎಸ್‍ಎಸ್‍ಟಿ ಪೆÇಲಿಟಿಕಲ್ ಸಯನ್ಸ್‍ನ ತಲಾ ಒಂದು ಹುದ್ದೆಗೆ ದಿನ ವೇತನ ಆಧಾರದ ಮೇಲೆ ಶಿಕ್ಷಕರ ನೇಮಕಾತಿ ಜೂ.5ರಂದು ಬೆಳಗ್ಗೆ 10.30ಕ್ಕೆ ಶಾಲಾ ಕಚೇರಿಯಲ್ಲಿ ನಡೆಯಲಿರುವುದು. ಅಭ್ಯರ್ಥಿಗಳು ಅಸಲಿ ಪ್ರಮಾಣಪತ್ರದೊಂದಿಗೆ ಸಂದರ್ಶನದಲ್ಲಿ ಭಾಗವಹಿಸುವಂತೆ ಶಾಲಾ ಪ್ರಾಂಶುಪಾಲರ ಪ್ರಕಟಣೆ ತಿಳಿಸಿದೆ.