ಮಂಜೇಶ್ವರ: ತುರ್ತು ಅಗತ್ಯತೆಗಳನ್ನು ಪೂರೈಸಲು ಮಧ್ಯಪ್ರವೇಶಿಸಿದ ಕಾರಣ ರಾಜ್ಯದಲ್ಲಿ ಸಾರ್ವಜನಿಕ ಶಿಕ್ಷಣ ಸಂಸ್ಥತೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದೆ. ಭಾರತದಲ್ಲಿ ಕೇರಳವು ಅತ್ಯುತ್ತಮ ಶಿಕ್ಷಣ ಕ್ಷೇತ್ರವನ್ನು ಹೊಂದಿದೆ ಎಂದು ಎನ್.ಐ.ಟಿ.ಐ ಆಯೋಗ್ ಉಲ್ಲೇಖಿಸಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದರು.
ರಾಜ್ಯ ಸರ್ಕಾರದ ಎರಡನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ನವಕೇರಳ ಕ್ರಿಯಾ ಯೋಜನೆ ವಿದ್ಯಾಕಿರಣ ಮಿಷನ್‍ನ ಅಂಗವಾಗಿ ಜಿಎಚ್‍ಎಸ್ ಕಡಂಬಾರ್ ನೂತನವಾಗಿ ನಿರ್ಮಿಸಿದ ಕಟ್ಟಡವನ್ನು ಮಂಗಳವಾರ ಆನ್ ಲೈನ್ ಮೂಲಕ ಉದ್ಘಾಟಿಸಿ ಮುಖ್ಯಮಂತ್ರಿಗಳು ಮಾತನಾಡುತ್ತಿದ್ದರು.
ನಶಿಸಿಹೋಗುತ್ತಿದೆ ಎಂಬ ಭೀತಿಯಲ್ಲಿದ್ದ ಸಾರ್ವಜನಿಕ ಶಿಕ್ಷಣ ಸಂಸ್ಥೆಗಳೆಲ್ಲ ಈಗ ತೀರಾ ವಿಭಿನ್ನವಾಗಿ ಬದಲಾಗಿದೆ. ಶಾಲೆಗಳನ್ನು ಕಾಲಕ್ಕನುಸರಿಸಿ ನವೀಕರಿಸಲಾಯಿತು. ಹೊಸ ಶಾಲಾ ಕಟ್ಟಡಗಳು ಬಂದವು. ಸುಮಾರು 5 ಲಕ್ಷ ಮಕ್ಕಳು ಶಾಲೆ ಬಿಟ್ಟ ಸಾರ್ವಜನಿಕ ಶಾಲೆಗಳಿಗೆ ಸುಮಾರು 10 ಲಕ್ಷ ಹೊಸ ವಿದ್ಯಾರ್ಥಿಗಳು ಪ್ರವೇಶಿಸಿದ್ದಾರೆ ಎಂದು ಮುಖ್ಯಮಂತ್ರಿ ಹೇಳಿದರು, ಇದು ಕ್ಷೇತ್ರದ ಬದಲಾವಣೆಯನ್ನು ಸೂಚಿಸುತ್ತದೆ. ಕೆಐಎಫ್‍ಬಿ, ಯೋಜನಾ ನಿಧಿ ಮತ್ತಿತರ ಹಣ ಬಳಸಿ ಶಾಲಾ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಜಿಎಚ್‍ಎಸ್ ಕಡಂಬಾರ್ ಹೊರತುಪಡಿಸಿ, ರಾಜ್ಯದ ವಿವಿಧ ಭಾಗಗಳಲ್ಲಿ 96 ಶಾಲಾ ಕಟ್ಟಡಗಳು, ಮೂರು ಟಿಂಕರಿಂಗ್ ಲ್ಯಾಬ್‍ಗಳು ಮತ್ತು 12 ಹೊಸ ಶಾಲಾ ಕಟ್ಟಡಗಳನ್ನು ಮುಖ್ಯಮಂತ್ರಿ ಉದ್ಘಾಟಿಸಿದರು.
ಮಂಜೇಶ್ವರ ಶಾಸಕ ಎ.ಕೆ.ಎಂ.ಅಶ್ರಫ್ ಫಲಕ ಅನಾವರಣಗೊಳಿಸಿದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪಿ.ಬೇಬಿ ಬಾಲಕೃಷ್ಣನ್ ಅಧ್ಯಕ್ಷತೆ ವಹಿಸಿದ್ದರು. ಮಂಜೇಶ್ವರ ಬ್ಲಾಕ್ ಪಂಚಾಯತಿ ಅಧ್ಯಕ್ಷೆ ಶೆಮೀನಾ ಟೀಚರ್, ಮೀಂಜ ಗ್ರಾಮ ಪಂಚಾಯತಿ ಅಧ್ಯಕ್ಷೆ ಸುಂದರಿ ಆರ್ ಶೆಟ್ಟಿ, ಜಿಲ್ಲಾ ಪಂಚಾಯತಿ ಸದಸ್ಯೆ ಕೆ.ಕಮಲಾಕ್ಷಿ, ಸರ್ವಶಿಕ್ಷಾ ಅಭಿಯಾನ್(ಎಸ್ ಎಸ್ ಎ) ಕಾಸರಗೋಡು ಜಿಲ್ಲಾ ಕಾರ್ಯಕ್ರಮ ಸಂಯೋಜಕ ನಾರಾಯಣ ದೇಲಂಪಾಡಿ, ಮಂಜೇಶ್ವರ ಬ್ಲಾಕ್ ಪಂಚಾಯತಿ ಸದಸ್ಯೆ ಅಶ್ವಿನಿ, ಮೀಂಜ ಗ್ರಾಮ ಪಂಚಾಯತಿ ಸದಸ್ಯ ವಿನೋದ್, ಮಂಜೇಶ್ವರ ಎ.ಇ.ಓ ವಿ.ದಿನೇಶ, ಉಪಜಿಲ್ಲಾ ನಿರೂಪಣಾಧಿಕಾರಿ ವಿಜಯಕುಮಾರ್, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ಜಯರಾಮ ಬಲ್ಲಂಗುಡೇಲು, ಹರ್ಷಾದ್ ವರ್ಕಾಡಿ, ತಾಜುದ್ದೀನ್, ಶಂಕರನಾರಾಯಣ ಭಟ್, ರಾಮಚಂದ್ರ ರಾವ್, ಮುಸ್ತಫಾ ಕಡಂಬಾರ್, ಎ.ವಿಜಯಕುಮಾರ್, ಡಿ.ಮೂಸಕುಂಞÂ, ಕೆ.ಎಂ.ಕನಕಂ, ಪಿಟಿಎ ಅಧ್ಯಕ್ಷ ಅಬ್ದುಲ್ ಲತೀಫ್, ಎಂಪಿಟಿಎ ಅಧ್ಯಕ್ಷೆ ಸುಹರಾ ಕಡಂಬಾರ್ ಮತ್ತಿತರರು ಮಾತನಾಡಿದರು. ಜಿಎಚ್‍ಎಸ್ ಕಡಂಬಾರ್ ಮುಖ್ಯೋಪಾಧ್ಯಾಯಿನಿ ಕೆ.ಬಿ.ಸುನಿತಾ ಸ್ವಾಗತಿಸಿ, ಕಾರ್ಯಕ್ರಮ ಸಮಿತಿ ಸಂಚಾಲಕ ಎಂ.ಇಸ್ಮಾಯಿಲ್ ವಂದಿಸಿದರು.