HEALTH TIPS

ಈ ರೂಟಿನ್‌ ಪಾಲಿಸಿದರೆ ಸಾಕು ಮುಖದ ಸೌಂದರ್ಯ ಹೆಚ್ಚುವುದು

 ನಾವು ಯಾರನ್ನೇ ಭೇಟಿ ಆದರೂ ಮೊದಲಿಗೆ ಗಮನಿಸಿಸುವುದು ಅವರ ಮುಖವನ್ನು. ಮುಖ ಚೆನ್ನಾಗಿದ್ದರೆ ಅದೊಂದು ದೊಡ್ಡ ಆಕರ್ಷಣೆ. ಇಲ್ಲಿಂದ ಮುಂದೆ ಮಾತು ತನ್ನಿಂದ ತಾನೇ ಮುಂದುವರೆಯುತ್ತದೆ. ಇಷ್ಟೇ ಅಲ್ಲ ನಾವು ಬೆರೆಯವರ ಜೊತೆಗೂ ಇದರ ಮಾತನ್ನಾಡುತ್ತೇವೆ. ಅವರ ಮುಖ ಎಷ್ಟು ಚೆನ್ನಾಗಿದೆ ನೋಡಿದ್ದೀಯಾ ಎನ್ನುವ ಮಾತು ಸಾಮಾನ್ಯ.

ನೈಸರ್ಗಿಕ ಸೌಂದರ್ಯ ಒಂದು ಕಡೆಯಾದರೆ ನಾವು ನಮ್ಮ ತ್ವಚೆಯನ್ನು ಯಾವ ರೀತಿಯಲ್ಲಿ ನೋಡಿಕೊಳ್ಳುತ್ತೇವೆ ಎನ್ನುವುದರ ಮೇಲೂ ಮುಖದ ಆಕರ್ಷಣೆ ಬದಲಾಗುತ್ತದೆ. ಚರ್ಮದ ಆರೈಕೆ ಮುಖವನ್ನು ಆಕರ್ಷಕವಾಗಿರಿಸಲು ಬಹಳ ಅಗತ್ಯ. ಗುಲಾಬಿಯಂತಹ ಕೆನ್ನೆ ಎನ್ನುವುದನ್ನು ನಾವೆಲ್ಲರೂ ಕೇಳಿರುತ್ತೇವೆ. ಹೀಗೆ ಗುಲಾಬಿಯಂತಹ ಕೆನ್ನೆ ನಮ್ಮ ಅದೃಷ್ಟಕ್ಕೂ ಒಳ್ಳೆಯದು ಎನ್ನಲಾಗುತ್ತದೆ. ಹಾಗಾದರೆ ಇಂತಹ ಗುಲಾಬಿಯಂತಹ ಅಥವಾ ಸೇಬುಹಣ್ಣಿನಂತಹ ಕೆನ್ನೆ ಅಥವಾ ತ್ವಚೆಯನ್ನು ಹೇಗೆ ಪಡೆಯುವುದು ಇಲ್ಲಿ ನೋಡೋಣ.
ವ್ಯಾಯಾಮ:
ಆರೋಗ್ಯಕರ ದೇಹ, ಚಟುವಟಿಕೆಯುಕ್ತ ದಿನಚರಿಗಾಗಿ ವ್ಯಾಯಾಮ ಬಹಳ ಅಗತ್ಯ. ನಿಯಮಿತವಾದ ವ್ಯಾಯಾಮದಿಂದ ಹೃದಯದ ಕ್ಷಮತೆ ಹೆಚ್ಚುತ್ತದೆ, ಸ್ನಾಯುಗಳು ಬಲಶಾಲಿಯಾಗುತ್ತವೆ, ನಿದ್ದೆ ಚೆನ್ನಾಗಿ ಬರುತ್ತದೆ, ನಮ್ಮ ಮಾನಸಿಕ ನೆಮ್ಮದಿಗೂ ವ್ಯಾಯಾಮ ಸಹಕಾರಿಯಾಗುತ್ತದೆ. ಇದರ ಜೊತೆಗೆ ರಕ್ತಪರಿಚಲನೆಯನ್ನು ಹೆಚ್ಚಿಸುತ್ತದೆ. ದೇಹದ ಎಲ್ಲಾ ನರಗಳಲ್ಲೂ ಸರಿಯಾದ ರಕ್ತ ಪರಿಚಲನೆಗೆ ವ್ಯಾಯಾಮ ಅಗತ್ಯ. ಹೀಗೆ ರಕ್ತ ಪರಿಚಲನೆ ಸಮರ್ಪಕವಾಗಿ ಆದಾಗ ಸಹಜವಾಗಿಯೇ ನಮ್ಮ ಚರ್ಮ ಸುಧಾರಿಸುತ್ತದೆ. ಇದರ ಬಹಳ ಮುಖ್ಯ ಪರಿಣಾಮ ತಿಳಿಯುವುದು ಮುಖದ ಮೇಲೆ.

ಫೇಷಿಯಲ್:
ಫೇಷಿಯಲ್ ಅಂದಾಕ್ಷಣ ಎಲ್ಲೋ ಪಾರ್ಲರ್ ಗೆ ಹೋಗಿ ಮಾಡಬೇಕೆಂದಿಲ್ಲ. ಮನೆಯಲ್ಲೇ ಇರುವ ವಸ್ತುಗಳನ್ನು ಉಪಯೋಗಿಸಿ ಫೇಶಿಯಲ್ ಮಾಡಿಕೊಳ್ಳಬಹುದು. ಇದಕ್ಕೆ ಬಹಳ ಸಹಕಾರಿಯಾಗುವುದು ರೋಸ್ ವಾಟರ್. ರೋಸ್ ವಾಟರ್ ಜೊತೆಗೆ ಜೇನು, ಮೊಸರು ಇತ್ಯಾದಿ ಚರ್ಮವನ್ನು ಪೋಷಿಸುವ ಮನೆಯಲ್ಲೇ ಸಿಗುವ ಪದಾರ್ಥಗಳನ್ನು ಸೇರಿಸಿ ಮುಖದ ಮೇಲೆ ಹಚ್ಚಿ ನಿಧಾನಕ್ಕೆ ಮಸಾಜ್ ತರಹ ಮಾಡಿ ಹಾಗೆಯೇ ಸ್ವಲ್ಪ ಹೊತ್ತು ಬಿಟ್ಟರೆ ಮುಖಕ್ಕೆ ಚೆನ್ನಾಗಿರುವ ಫೇಷಿಯಲ್ ಆಗುತ್ತದೆ.

ಚರ್ಮದ ಆರೋಗ್ಯಕ್ಕೆ ನೆರವಾಗುವ ಆಹಾರ: ಉತ್ಕರ್ಷಣ ನಿರೋಧಕ ಅಥವಾ ಆಂಟಿಒಕ್ಸಿಡೆಂಟ್ ಗುಣಗಳಿರುವ ಪದಾರ್ಥಗಳು ನಮ್ಮ ಮುಖದ ಮತ್ತು ಒಟ್ಟಾರೆ ಚರ್ಮದ ಆರೋಗ್ಯಕ್ಕೆ ಬಹಳ ಒಳ್ಳೆಯದು. ಸೊಪ್ಪು ತರಕಾರಿ, ಹಣ್ಣುಗಳು, ಕೋಸುಗಡ್ಡೆ, ಪಾಲಕ್, ಕ್ಯಾರೆಟ್ ಮತ್ತು ಆಲೂಗಡ್ಡೆಯಲ್ಲಿ ಇದು ಹೆಚ್ಚಾಗಿ ಸಿಗುತ್ತದೆ. ಇದು ಮಖವನ್ನು ಆಕರ್ಷಕವನ್ನಾಗಿಸುವ ಜೊತೆಗೆ ಕೂದಲಿನ ಆರೋಗ್ಯಕ್ಕೂ ಬಹಳ ಸಹಕಾರಿ.

ಸಾಕಷ್ಟು ನೀರು ಕುಡಿಯುವುದು:
ನೀರು ನಮ್ಮ ದೇಹದ ಬಹಳಷ್ಟು ಸಮಸ್ಯೆಗಳಿಗೆ ಪರಿಹಾರ. ಒಟ್ಟಾರೆ ನಮ್ಮ ದೈಹಿಕ ಆರೋಗ್ಯಕ್ಕೆ ನೀರು ಬಹಳ ಸಹಕಾರಿ ಇದರ ಜೊತೆಗೆ ಚರ್ಮದ ಆರೋಗ್ಯವನ್ನೂ ಕಾಪಾಡುತ್ತದೆ. ನಮ್ಮ ದೇಹ ಹೈಡ್ರೇಟ್ ಇದ್ದಷ್ಟು ಚರ್ಮದ ಆರೋಗ್ಯ ಚೆನ್ನಾಗಿರುತ್ತದೆ. ಇದು ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ.

ಹಬೆ ತೆಗೆದುಕೊಳ್ಳುವುದು:
ನೀರಿನ ಹಬೆ ತೆಗೆದುಕೊಳ್ಳುವುದು ನಮಗೆ ನೆಗಡಿ ಆದಾಗ ಸಾಮಾನ್ಯವಾಗಿ ಮಾಡುತ್ತೇವೆ. ಆದರೆ ಇದರಿಂದ ನಮ್ಮ ಚರ್ಮದ ಆರೋಗ್ಯವೂ ವೃಧ್ದಿಸುತ್ತದೆ. ನೀರಿನ ಹಬೆ ತೆಗೆದುಕೊಂಡಾಗ ಚರ್ಮದಲ್ಲಿನ ರಂಧ್ರಗಳು ತೆರೆದುಕೊಳ್ಳುತ್ತವೆ. ಇದು ರಕ್ತ ಪರಿಚಲನೆಯನ್ನು ಹೆಚ್ಚಿಸಲು ಸಹಕಾರಿ. ಇದರಿಂದ ಕೆನ್ನೆಗಳು ಆಕರ್ಷಕವಾಗಿ ಕಾಣಿಸುತ್ತವೆ.

ಸನ್ ಸ್ಕ್ರೀನ್ ಬಳಕೆ:
ಸೂರ್ಯನ ಕಿರಣಗಳು ನಮ್ಮ ದೇಹಕ್ಕೆ ವಿಟಮಿನ್ ಡಿ. ನೀಡಿ ಸಹಕರಿಸುತ್ತವಾದರೂ ಮುಖದ ಚರ್ಮವನ್ನು ಬಾಡಿದಂತೆ ಮಾಡುತ್ತವೆ. ಸೂರ್ಯನ ಕಿರಣಗಳಲ್ಲಿರುವ ಕೆಲವು ಹಾನಿಕಾರಕ ಕಿರಣಗಳಿಂದ ನಮ್ಮ ಮುಖವನ್ನು ರಕ್ಷಿಸಿಕೊಳ್ಳಬೇಕಾದರೆ ಸನ್ ಸ್ಕ್ರೀನ್ ಸಹಾಯ ಮಾಡುತ್ತದೆ.

ಮಸಾಜ್:
ರಕ್ತದ ಪರಿಚನಲನೆಯನ್ನು ಇನ್ನೂ ಉತ್ತಮಗೊಳಿಸಲು ಇರುವ ಇನ್ನೊಂದು ಸುಲಭೋಪಾಯ ಎಂದರೆ ಮಸಾಜ್. ಕೈಬೆರಳುಗಳ ತುದಿಯಿಂದ ನಮ್ಮ ಮುಖವನ್ನು ನಿಧಾನವಾಗಿ ಮಸಾಜ್ ಮಾಡುವುದರಿಂದ ಕೆನ್ನೆಗಳಲ್ಲಿ ರಕ್ತ ಪರಿಚಲನೆ ಸರಾಗವಾಗಿ ಆಗಿ ಕೆನ್ನೆಗಳು ಕೆಂಪಾಗಿ ಆಕರ್ಷಕವಾಗುತ್ತವೆ.

ಈ ರೀತಿಯಾಗಿ ನೀವು ಸುಲಭವಾಗಿ ಮನೆಯಲ್ಲಿಯೇ ತ್ವಚೆಯ ಆರೋಗ್ಯ ಕಾಪಾಡಿಕೊಳ್ಳಬಹುದು. ಸರಿಯಾದ ಲೈಫ್ ಸ್ಟೈಲ್, ಉತ್ತಮ ಆಹಾರ ಒತ್ತಡ ಮುಕ್ತ ಬದುಕು ನಮ್ಮ ದೀರ್ಘಾಯುಷ್ಯಕ್ಕೂ ಕಾರಣವಾಗುತ್ತವೆ.




Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries