ತಿರುವನಂತಪುರಂ: ಈ ಬಾರಿಯ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಫಲಿತಾಂಶದ ಜತೆಗೆ ಅಂಕಪಟ್ಟಿ ಬಿಡುಗಡೆ ಮಾಡಲು ಶಿಕ್ಷಣ ಇಲಾಖೆ ಮುಂದಾಗಿದೆ.
ಪರೀಕ್ಷಾ ಫಲಿತಾಂಶದ ಜತೆಗೆ ಅಂಕಗಳನ್ನು ಪ್ರಕಟಿಸುವಂತೆ ಕೋಝಿಕೋಡ್ ನಿವಾಸಿ ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಕಾರ್ಯದರ್ಶಿಗೆ ಹೈಕೋರ್ಟ್ ಸೂಚಿಸಿತ್ತು. ಕಳೆದ ವರ್ಷದವರೆಗೆ ಎಸ್‍ಎಸ್‍ಎಲ್‍ಸಿ ಫಲಿತಾಂಶದ ಜತೆಗೆ ಅಂಕ ಪಟ್ಟಿ ನೀಡಿರಲಿಲ್ಲ.
ಸಾಮಾನ್ಯವಾಗಿ ವಿದ್ಯಾರ್ಥಿಗಳಿಗೆ ಅಂಕಪಟ್ಟಿ ಬಹಳ ತಡವಾಗಿ ಬಿಡುಗಡೆಯಾಗುತ್ತದೆ. ಪರೀಕ್ಷೆಯಲ್ಲಿ 'ಎ' ಪ್ಲಸ್ ಗ್ರೇಡ್ ಪಡೆದವರಿಗೆ 90 ಅಂಕಗಳನ್ನು ಲೆಕ್ಕ ಹಾಕಿ ಪ್ಲಸ್ ಒನ್ ಪ್ರವೇಶಕ್ಕೆ ರ್ಯಾಂಕ್ ಪಟ್ಟಿ ತಯಾರಿಸಲಾಗುತ್ತದೆ. ಶೈಕ್ಷಣಿಕೇತರ ಚಟುವಟಿಕೆಗಳಿಗೂ ಗ್ರೇಸ್ ಅಂಕಗಳನ್ನು ಲೆಕ್ಕ ಹಾಕಿರುವುದರಿಂದ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಿಗಿಂತ ಈ ವಿದ್ಯಾರ್ಥಿಗಳು ಹಿಂದುಳಿದಿದ್ದಾರೆ ಎಂದು ಕೋಝಿಕ್ಕೋಡ್‍ನ ನಿವಾಸಿಯೊಬ್ಬರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಎಸ್‍ಎಸ್‍ಎಲ್‍ಸಿ ಪರೀಕ್ಷಾ ಫಲಿತಾಂಶ ಘೋಷಣೆಗೆ ಅಡ್ಡಿಯಾಗದ ರೀತಿಯಲ್ಲಿ ಅರ್ಜಿಯನ್ನು ಪರಿಗಣಿಸಬೇಕು ಎಂಬುದು ನ್ಯಾಯಾಲಯದ ನಿರ್ದೇಶನವಾಗಿದೆ.
ಸಿಬಿಎಸ್‍ಇ ಪ್ಲಸ್ ಟು ಫಲಿತಾಂಶ ಶುಕ್ರವಾರ ಪ್ರಕಟವಾಗಿದೆ. 87.33ರಷ್ಟು ಉತ್ತೀರ್ಣರಾಗಿದ್ದಾರೆ. ತಿರುವನಂತಪುರಂ ಪ್ರದೇಶವು ಅತ್ಯಧಿಕ ಉತ್ತೀರ್ಣತೆಯೊಂದಿಗೆ ಮೊದಲ ಸ್ಥಾನದಲ್ಲಿದೆ. ತಿರುವನಂತಪುರಂನ ಉತ್ತೀರ್ಣ ಪ್ರಮಾಣ ಶೇಕಡಾ 99.91 ರಷ್ಟಿದೆ.
90.68 ರಷ್ಟು ಬಾಲಕಿಯರು ತೇರ್ಗಡೆಯಾಗಿದ್ದಾರೆ. ಬಾಲಕರು ಶೇ.84.67ರಷ್ಟು ಉತ್ತೀರ್ಣರಾಗಿದ್ದಾರೆ. ವಿದ್ಯಾರ್ಥಿಗಳು ಛಿbse.gov.iಟಿ, ಛಿbseಡಿesuಟಣs.ಟಿiಛಿ.iಟಿ ಮತ್ತು ಡಿesuಟಣs.ಟಿiಛಿ.iಟಿ ವೆಬ್‍ಸೈಟ್‍ಗಳ ಮೂಲಕ ಪರೀಕ್ಷೆಯ ಫಲಿತಾಂಶವನ್ನು ಪರಿಶೀಲಿಸಬಹುದು. ಪರೀಕ್ಷೆ ಫೆಬ್ರವರಿ 15 ರಿಂದ ಏಪ್ರಿಲ್ ವರೆಗೆ ನಡೆಯಿತು. ಸುಮಾರು 16 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಈ ಬಾರಿ ಉತ್ತೀರ್ಣತೆ ಪ್ರಮಾಣದಲ್ಲಿ ಇಳಿಕೆಯಾಗಿದೆ.