ಅಮೃತಸರ (PTI): 'ಇಲ್ಲಿನ ಸ್ವರ್ಣಮಂದಿರ ಬಳಿಯ ಪಾರಂಪರಿಕ ಬೀದಿಯಲ್ಲಿ ಸಂಭವಿಸಿದ ಸ್ಫೋಟದಿಂದಾಗಿ ಒಬ್ಬ ವ್ಯಕ್ತಿ ಗಾಯಗೊಂಡಿದ್ದು, ಕೆಲವು ಕಟ್ಟಡಗಳ ಗಾಜುಗಳಿಗೆ ಹಾನಿಯಾಗಿದೆ' ಎಂದು ಪೊಲೀಸರು ಭಾನುವಾರ ಹೇಳಿದರು.
ಅಮೃತಸರ (PTI): 'ಇಲ್ಲಿನ ಸ್ವರ್ಣಮಂದಿರ ಬಳಿಯ ಪಾರಂಪರಿಕ ಬೀದಿಯಲ್ಲಿ ಸಂಭವಿಸಿದ ಸ್ಫೋಟದಿಂದಾಗಿ ಒಬ್ಬ ವ್ಯಕ್ತಿ ಗಾಯಗೊಂಡಿದ್ದು, ಕೆಲವು ಕಟ್ಟಡಗಳ ಗಾಜುಗಳಿಗೆ ಹಾನಿಯಾಗಿದೆ' ಎಂದು ಪೊಲೀಸರು ಭಾನುವಾರ ಹೇಳಿದರು.
'ಶನಿವಾರ ರಾತ್ರಿ ತಿನಿಸಿನ ಅಂಗಡಿಯೊಂದರ ಬಳಿ ಈ ಸ್ಫೋಟ ಸಂಭವಿಸಿದೆ.
'ಸ್ವರ್ಣ ಮಂದಿರಕ್ಕೆ ಪ್ರಾರ್ಥನೆ ಸಲ್ಲಿಸಲು ಬಂದಿದ್ದ ಹರಿಯಾಣದ ಪಂಚಕುಲ ಜಿಲ್ಲೆಯಿಂದ ಬಂದಿದ್ದ ಮೂವರು ಯುವತಿಯರು ಆಟೊ ರಿಕ್ಷಾದಲ್ಲಿ ತೆರಳುತ್ತಿದ್ದಾಗಲೇ ಸ್ಫೋಟ ಸಂಭವಿಸಿತು. ಅವರಿಗೆ ಚಿಕ್ಕಪುಟ್ಟ ಗಾಯಗಳಾಗಿವೆ' ಎಂದು ಪ್ರತ್ಯಕ್ಷದರ್ಶಿ ಕರಣ್‌ದೀಪ್ ಸಿಂಗ್ ಎಂಬುವವರು ಹೇಳಿದರು.
'ಸ್ಫೋಟಕ್ಕೆ ಸಂಬಂಧಿಸಿದ ಸುದ್ದಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಎಲ್ಲ ಸುದ್ದಿಗಳ ವಾಸ್ತವಾಂಶಗಳನ್ನು ತಿಳಿದುಕೊಂಡು, ಮಾಹಿತಿಯನ್ನು ಹಂಚಿಕೊಳ್ಳಬೇಕು ಹಾಗೂ ನಗರದಲ್ಲಿ ಶಾಂತಿ, ಸಾಮರಸ್ಯ ಕಾಪಾಡಬೇಕೆಂದು ನಾಗರಿಕರನ್ನು ಕೇಳಿಕೊಳ್ಳಲಾಗಿದೆ. ಪ್ರಸ್ತುತ ಪರಿಸ್ಥಿತಿ ನಿಯಂತ್ರಣದಲ್ಲಿದೆ. ತನಿಖೆಯನ್ನೂ ಪ್ರಾರಂಭಿಸಲಾಗಿದೆ. ಜನರು ಭಯಪಡುವ ಅಗತ್ಯವಿಲ್ಲ' ಎಂದು ಅಮೃತಸರ ಪೊಲೀಸರು ಮಾಹಿತಿ ನೀಡಿದರು.