ಪೆರ್ಲ : ಎಣ್ಮಕಜೆ ಗ್ರಾಮ ಪಂಚಾಯತ್ ವತಿಯಿಂದ ಕನ್ನಟಿಕಾನದಲ್ಲಿ ನಡೆಸಲ್ಪಡುತ್ತಿದ್ದ ಎಂಡೋಸಲ್ಫನ್ ಸಂತ್ರಸ್ತ ವಿಭಿನ್ನ ಸಾಮಾರ್ಥ್ಯದ ಮಕ್ಕಳ ಸಾಂತ್ವನ ಬಡ್ಸ್ ಶಾಲೆಯನ್ನು ಕಾಸರಗೋಡು ಅಭಿವೃದ್ಧಿ ಯೋಜನೆಗೊಳಪಡಿಸಿ ಬಜಕೂಡ್ಲಿನ ಕಾನ ಎಂಬಲ್ಲಿ ನಿರ್ಮಿಸಿದ ನೂತನ ಕಟ್ಟಡಕ್ಕೆ ಸ್ಥಳಾಂತರಿಸಿ ಹೊಸ ಶೈಕ್ಷಣಿಕ ವರ್ಷದ ಪ್ರವೇಶೋತ್ಸವವನ್ನು ನಡೆಸಲಾಯಿತು. ಕಾರ್ಯಕ್ರಮವನ್ನು ಎಣ್ಮಕಜೆ ಗ್ರಾ.ಪಂ. ಅಧ್ಯಕ್ಷ ಸೋಮಶೇಖರ್ ಜೆ.ಎಸ್.ಉದ್ಘಾಟಿಸಿದರು.
ಗ್ರಾ.ಪಂ. ಕ್ಷೇಮಾಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ಸೌಧಾಭಿ ಹನೀಫ್ ಅಧ್ಯಕ್ಷತೆವಹಿಸಿದ್ದರು. ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎಸ್.ಗಾಂಭೀರ್,ಮಂಜೇಶ್ವರ ಬ್ಲೋಕ್ ಪಂ.ಸದಸ್ಯ ಕೆ.ಪಿ. ಅನಿಲ್ ಕುಮಾರ್ ಮಣಿಯಂಪಾರೆ, ಪಂ.ಸದಸ್ಯರಾದ ಶಶಿಧರ, ನರಸಿಂಹ ಪೂಜಾರಿ, ಝರೀನಾ ಮುಸ್ತಾಫ,ಇಂದಿರಾ,ಸಿಡಿಎಸ್ ಅಧ್ಯಕ್ಷೆ ಜಲಜಾಕ್ಷಿ, ಐಸಿಡಿಎಸ್ ಸೂಪರ್ ವೈಸರ್ ಪ್ರೇಮಲತಾ, ಪಂ.ಕಾರ್ಯದರ್ಶಿ ಸುನಿಲ್ ಆರ್, ಹೆಡ್ ಕ್ಲಾರ್ಕ್ ಪ್ರೇಮ್ ಚಂದ್, ಆಡಳಿತ ಸಮಿತಿ ಸದಸ್ಯ ರಾಜರಾಮ್ ಪೆರ್ಲ ಮೊದಲಾದವರು ಉಪಸ್ಥಿತರಿದ್ದರು.ಬಡ್ಸ್ ಶಾಲಾ ಪ್ರಾಂಶುಪಾಲೆ ಮರಿಯಾಂಬಿ ಸ್ವಾಗತಿಸಿ ಅಧ್ಯಾಪಕಿ ಜ್ಯೋತಿ ವಂದಿಸಿದರು.