HEALTH TIPS

ಕನ್ನಡ ಭವನದ ಕನ್ನಡ ಸೇವೆ ಅನನ್ಯ : ಎಡನೀರು ಶ್ರೀ

 




              ಕಾಸರಗೋಡು: ಗಡಿನಾಡು ಕಾಸರಗೋಡಿನಲ್ಲಿ ಕನ್ನಡ ಭಾಷೆ ಮತ್ತು ಸಂಸ್ಕøತಿಯ ಮೇಲೆ ನಿರಂತರ ಪ್ರಹಾರ ಬೀಳುತ್ತಿದ್ದರೂ ಕನ್ನಡ ಭಾಷೆ, ಸಂಸ್ಕøತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯದ ಕನ್ನಡ ಸೇವೆ ಅನನ್ಯ ಎಂದು ಎಡನೀರು ಮಠಾಧೀಶರಾದ ಪರಮಪೂಜ್ಯ ಶ್ರೀ ಸಚ್ಚಿದಾನಂದ ಭಾರತೀ ಶ್ರೀ ಪಾದಂಗಳವರು ಹೇಳಿದರು. 

           ನುಳ್ಳಿಪ್ಪಾಡಿಯ ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯದ ನೇತೃತ್ವದಲ್ಲಿ ಕಥಾ ಬಿಂದು ಪ್ರಕಾಶನ, ಪಾಂಗೋಡು ಶ್ರೀ ದುರ್ಗಾಪರಮೇಶ್ವರೀ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಸಾಂಸ್ಕøತಿಕ ಘಟಕ ಮತ್ತು ಕರ್ನಾಟಕ ಇತಿಹಾಸ ಅಕಾಡೆಮಿ ಕಾಸರಗೋಡು ಜಿಲ್ಲಾ ಘಟಕದ ಸಹಯೋಗದಲ್ಲಿ ಕನ್ನಡ ಭವನದಲ್ಲಿ ಆಯೋಜಿಸಿದ ಕಾಸರಗೋಡು ಕನ್ನಡ ಭವನ ಕನ್ನಡ ಸಂಸ್ಕøತಿ ಉತ್ಸವವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಸ್ವಾಮೀಜಿಯವರು ಆಶೀರ್ವಚನ ನೀಡಿ ಮಾತನಾಡಿದರು.  

             ಕಾರ್ಯಕ್ರಮದಲ್ಲಿ ಕನ್ನಡ ಭವನದ ಸ್ಥಾಪಕಾ`À್ಯಕ್ಷ ವಾಮನ ರಾವ್ ಬೇಕಲ್ ಅಧ್ಯಕ್ಷತೆ ವಹಿಸಿದರು. ಹಿರಿಯ ಕವಿ, ಸಾಹಿತಿ, ಡಾ.ರಮಾನಂದ ಬನಾರಿ ಮಂಜೇಶ್ವರ ಅವರಿಗೆ ಗುರುನಮನ ಗೌರವಾರ್ಪಣೆ, ಶ್ರೀಕೃಷ್ಣಯ್ಯ ಅನಂತಪುರ, ಗುಣಾಜೆ ರಾಮಚಂದ್ರ ಭಟ್, ವೈ.ಸತ್ಯನಾರಾಯಣ, ಸ್ನೇಹಲತಾ ದಿವಾಕರ್, ಶ್ರೀಹರಿ ಭಟ್ ಪೆಲ್ತಾಜೆ, ಸುಂದರ ಬಾರಡ್ಕ, ಶಿವಾನಂದ ತಗಡೂರು, ರಾಜೇಶ್ ರೈ ಚಟ್ಲ, ಪಿ.ವಿ.ಪ್ರದೀಪ್ ಕುಮಾರ್ ಮಂಗಳೂರು, ದಿನಮಣಿ ರಾವ್ ಮಂಗಳೂರು ಹಾಗು ಶ್ರೀ ಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ಸಂಘ, ಗಡಿನಾಡ ಸಾಹಿತ್ಯ-ಸಾಂಸ್ಕøತಿಕ ಅಕಾಡೆಮಿಗೆ ಕನ್ನಡ ಪಯಸ್ವಿನಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ರೇಖಾ ಸುದೇಶ್ ರಾವ್, ಝಡ್ ಎ.ಕಯ್ಯಾರ್ ಅವರನ್ನು ಸಮ್ಮಾನಿಸಲಾಯಿತು. 

           ಪುಟ್ಟಪ್ಪ ಶಂಕ್ರಪ್ಪ ತಂಬೂರಿ ವಿಜಯನಗರ, ನಾಗರಾಜಪ್ಪ ಆದಾಪುರ ದಾವಣಗೆರೆ, ರೇಣುಕಾ ಹ.ಬಡಕಣ್ಣನವರ ಹಾವೇರಿ, ಕೃಷ್ಣಪ್ಪ ವಾಸದ್ದ ಸೊಪ್ಪಿನ ವಿಜಯನಗರ, ನಿಂಗಪ್ಪ ಅಡಿವೆಪ್ಪನವರ ಹಾವೇರಿ, ಫಕೀರೇಶ್ ಎಂ.ಕಟ್ಟಿಮನಿ ಹಾವೇರಿ, ಶಿವಪ್ರಸಾದ್ ಕೊಕ್ಕಡ ಮಂಗಳೂರು, ರಶ್ಮಿ ಸನಲ್, ಶಾಂತಾ ಪುತ್ತೂರು, ಜಯಾನಂದ ಪೆರಾಜೆ, ವಾಮನ ರಾವ್ ಬೇಕಲ್-ಸಂಧ್ಯಾರಾಣಿ ದಂಪತಿ, ವಸಂತ ಕೆರೆಮನೆ, ಆಶಾ ರಾಧಾಕೃಷ್ಣ ಅಣಂಗೂರು, ಉಷಾ ಕಿರಣ್ ಅಣಂಗೂರು ಅವರಿಗೆ ಕಥಾ ಬಿಂದು ಕನ್ನಡ ಶ್ರೀ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇದೇ ಸಂದ`ರ್Àದಲ್ಲಿ ಸಿ.ವಾಯ್.ಮೆಣಸಿನಕಾಯಿ ಅವರ ಕರುಣೆಯ ತೋಟ(ಕವನ ಸಂಕಲನ), ಚಾರವಾಣಿ(ಕಥಾ ಸಂಕಲನ) ಬಿಡುಗಡೆಗೊಂಡಿತು. 

          ಎ.ಆರ್.ಸುಬ್ಬಯ್ಯಕಟ್ಟೆ, ರಾಧಾಕೃಷ್ಣ ಕೆ.ಉಳಿಯತ್ತಡ್ಕ, ಪಿ.ವಿ.ಪ್ರದೀಪ್ ಕುಮಾರ್, ವಿಶಾಲಾಕ್ಷ ಪುತ್ರಕಳ, ರಾಜೇಶ್ಚಂದ್ರ ಮಾಸ್ಟರ್ ಅತಿಥಿಯಾಗಿ `Áಗವಹಿಸಿದರು. ಕೆ.ಎನ್.ವೆಂಕಟ್ರಮಣ ಹೊಳ್ಳ, ಕಾರ್ತಿಕ್ ಬೇಕಲ್ ಉಪಸ್ಥಿತರಿದ್ದರು. ಪೆÇ.ಎ.ಶ್ರೀನಾಥ್, ರೇಖಾ ಸುದೇಶ್ ರಾವ್ ಕಾರ್ಯಕ್ರಮ ನಿರೂಪಿಸಿದರು. ಸಂಕೀರ್ತನಾ ಸಾಮ್ರಾಟ್ ಹರಿದಾಸ ಜಯಾನಂದ ಕುಮಾರ್ ಹೊಸದುರ್ಗ ಅವರು ಸಾಂಸ್ಕøತಿಕ ವೈಭವ ಉದ್ಘಾಟಿಸಿದರು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries