ರಜೌರಿ: ಜಮ್ಮು ಮತ್ತು ಕಾಶ್ಮೀರದ ಗಡಿ ಜಿಲ್ಲೆಗಳಾದ ರಜೌರಿ ಹಾಗೂ ಪೂಂಚ್‌ಗೆ ಶನಿವಾರ ಭೇಟಿ ನೀಡಿದ ರಕ್ಷಣಾ ಸಚಿವ ರಾಜನಾಥ ಸಿಂಗ್, ಭದ್ರತೆ ಸ್ಥಿತಿಗತಿಯನ್ನು ಪರಿಶೀಲಿಸಿದರು.
ರಜೌರಿ: ಜಮ್ಮು ಮತ್ತು ಕಾಶ್ಮೀರದ ಗಡಿ ಜಿಲ್ಲೆಗಳಾದ ರಜೌರಿ ಹಾಗೂ ಪೂಂಚ್‌ಗೆ ಶನಿವಾರ ಭೇಟಿ ನೀಡಿದ ರಕ್ಷಣಾ ಸಚಿವ ರಾಜನಾಥ ಸಿಂಗ್, ಭದ್ರತೆ ಸ್ಥಿತಿಗತಿಯನ್ನು ಪರಿಶೀಲಿಸಿದರು.
ರಜೌರಿ ಜಿಲ್ಲೆಯ ಕಂಡಿ ಅರಣ್ಯ ಪ್ರದೇಶದಲ್ಲಿ ಉಗ್ರರು ಶುಕ್ರವಾರ ನಡೆಸಿದ ಸ್ಫೋಟದಲ್ಲಿ ಐವರು ಯೋಧರು ಹುತಾತ್ಮರಾಗಿದ್ದಾರೆ. ರಕ್ಷಣಾ ಸಚಿವರ ಭೇಟಿ ವೇಳೆ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ, ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಇದ್ದರು.
ಉಗ್ರರ ವಿರುದ್ಧ ಕಾರ್ಯಾಚರಣೆ ಕುರಿತು ಸೈನಿಕರಿಂದಲೂ ರಕ್ಷಣಾ ಸಚಿವರೂ ಮಾಹಿತಿ ಪಡೆದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಂಡಿ ಅರಣ್ಯ ಪ್ರದೇಶದಲ್ಲಿ 'ಆಪರೇಷನ್ ತ್ರಿನೇತ್ರಾ' ಕಾರ್ಯಾಚರಣೆಯ ವೇಳೆ ಐವರು ಯೋಧರು ಹುತಾತ್ಮರಾಗಿದ್ದು, ಸೇನೆಯ ಮೇಜರ್ ಗಾಯಗೊಂಡಿದ್ದರು.
2021 ಅಕ್ಟೋಬರ್‌ನಿಂದ ಭಯೋತ್ಪಾದಕರು ನಡೆಸಿದ ಎಂಟು ದಾಳಿಗಳಲ್ಲಿ 26 ಯೋಧರು ಸೇರಿದಂತೆ 35 ಮಂದಿ ಮೃತಪಟ್ಟಿದ್ದಾರೆ.