HEALTH TIPS

ಗರ್ಭವತಿಯರ ಪತ್ತೆಗಾಗಿ ಶಾಲಾ ಮಕ್ಕಳಿಗೂ ಋತುಮತಿ ಕಾರ್ಡ್!

               ಗುವಾಹಟಿ: ಗರ್ಭವತಿಯರಾಗುವ ವಿದ್ಯಾರ್ಥಿನಿಯರನ್ನು ಪತ್ತೆ ಹಚ್ಚಿ ಸೂಕ್ತ ಮುನ್ನೆಚ್ಚರಿಕೆ ತೆಗೆದುಕೊಳ್ಳುವ ಸಲುವಾಗಿ ಇಲ್ಲೊಂದು ಕಡೆ ಸರ್ಕಾರವೇ ಶಾಲಾ ಮಕ್ಕಳಿಗೆ ಋತುಮತಿ ಕಾರ್ಡ್​ ನೀಡಲಾರಂಭಿಸಿದೆ. ಅದರಲ್ಲೂ 8 ಮತ್ತು 9ನೇ ತರಗತಿಯ ವಿದ್ಯಾರ್ಥಿನಿಯರಿಗೆ ಈ ಮುಟ್ಟಿನ ಚೀಟಿ ನೀಡಲಾಗುತ್ತಿದೆ.

              ಹೀಗೆ ನೀಡಲಾಗುತ್ತಿರುವ ಋತುಮತಿ ಕಾರ್ಡ್ ಮೂಲಕ ವಿದ್ಯಾರ್ಥಿನಿಯರ ದೈಹಿಕ ಏರುಪೇರುಗಳನ್ನು ಗಮನಿಸಿ, ಗರ್ಭವತಿ ಆಗಿದ್ದರೆ ಅದನ್ನು ಗುರುತಿಸುವ ಕಾರ್ಯವನ್ನು ಮಾಡಲಾಗುತ್ತಿದೆ. ಅಸ್ಸಾಂ ಸರ್ಕಾರ ಇಂಥದ್ದೊಂದು ಯೋಜನೆ ಜಾರಿಗೆ ತಂದಿದೆ.

                   ಸದ್ಯ 8 ಮತ್ತು 9ನೇ ತರಗತಿಯ ವಿದ್ಯಾರ್ಥಿನಿಯರಿಗೆ ಮಾತ್ರ ಈ ಕಾರ್ಡ್ ನೀಡಲಾಗುತ್ತಿದೆ. ಒಂದುವೇಳೆ 8ಕ್ಕಿಂತ ಕಡಿಮೆ ತರಗತಿಯ ವಿದ್ಯಾರ್ಥಿನಿ ಋತುಮತಿ ಆಗಿದ್ದರೂ ಈ ಕಾರ್ಡ್ ನೀಡುವುದಿಲ್ಲ. ಹಾಗೇ ಹತ್ತು ಹಾಗೂ ಅದಕ್ಕೂ ಹೆಚ್ಚಿನ ತರಗತಿಯ ವಿದ್ಯಾರ್ಥಿನಿಯರಿಗೂ ಈ ಕಾರ್ಡ್ ನೀಡಲಾಗುವುದಿಲ್ಲ. ಆದರೆ 8 ಮತ್ತು 9ನೇ ತರಗತಿ ವಿದ್ಯಾರ್ಥಿನಿಯರಿಗೆ ಮಾತ್ರ ನೀಡಲಾಗುತ್ತಿದ್ದು, ಇಲ್ಲಿನ 31 ಜಿಲ್ಲೆಗಳಲ್ಲಿ ಈಗಾಗಲೇ 1 ಕೋಟಿ ಕಾರ್ಡ್ ವಿತರಣೆ ಮಾಡಲಾಗಿದೆಯಂತೆ.

              ಅಸ್ಸಾಂ ರಾಜ್ಯದಲ್ಲಿ ತಾಯಿ-ಮಗುವಿನ ಸಾವಿನ ಪ್ರಮಾಣ ಅಧಿಕವಾಗಿದ್ದು, ಇದಕ್ಕೆ ಬಾಲ್ಯವಿವಾಹವೇ ಕಾರಣ ಎಂಬುದು ಕಂಡುಬಂದಿದೆ. ಮತ್ತೊಂದೆಡೆ ಅಧಿಕ ಪ್ರಮಾಣದಲ್ಲಿ ಬಾಲ್ಯವಿವಾಹ ಆಗುತ್ತಿರುವುದು ಕೂಡ ಪೊಲೀಸರ ಗಮನಕ್ಕೆ ಬಂದಿದೆ. ಹೀಗಾಗಿ ಬಾಲ್ಯವಿವಾಹ ಹಾಗೂ ಆ ಮೂಲಕ ಉಂಟಾಗಬಹುದಾದ ತಾಯಿ-ಮಗುವಿನ ಸಾವನ್ನು ತಡೆಯುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ವಿದ್ಯಾರ್ಥಿನಿಯ ದೈಹಿಕ ಪರಿಸ್ಥಿತಿಯಲ್ಲಿ ವ್ಯತ್ಯಾಸ ಕಂಡುಬಂದಾಗ ಹತ್ತಿರದ ವೈದ್ಯಕೀಯ ಕೇಂದ್ರಕ್ಕೆ ಕಳಿಸುವ ವ್ಯವಸ್ಥೆ ಮಾಡಲಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries