ಕೊಚ್ಚಿ: ಸಿಬಿಲ್ ಸ್ಕೋರ್ ಕಡಿಮೆ ಎಂಬ ಕಾರಣಕ್ಕೆ ಶಿಕ್ಷಣ ಸಾಲವನ್ನು ನಿರಾಕರಿಸಬಾರದು ಎಂದು ಕೇರಳ ಹೈಕೋರ್ಟ್ ಹೇಳಿದೆ.
ವಿದ್ಯಾರ್ಥಿಗಳು ಈ ದೇಶವನ್ನು ಮುನ್ನಡೆಸಬೇಕು. ಶಿಕ್ಷಣ ಸಾಲ ನೀಡುವಲ್ಲಿ ಬ್ಯಾಂಕ್ ಗಳು ಮಾನವೀಯ ಧೋರಣೆ ಅನುಸರಿಸಬೇಕು ಎಂದು ನ್ಯಾಯಮೂರ್ತಿ ಪಿ.ವಿ. ಕುಂಞÂ ಕೃಷ್ಣನ್ ಸ್ಪಷ್ಟಪಡಿಸಿದ್ದಾರೆ.
ಭೋಪಾಲ್‍ನಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿರುವ ಆಲುವಾ ಮೂಲದ ನೋಯೆಲ್ ಪಾಲ್ ಪ್ರೆಡ್ರಿಕ್ ಅವರು ತಮ್ಮ ತಂದೆಯ ಸಿಬಿಲ್ ಸ್ಕೋರ್ ಕಡಿಮೆ ಎಂಬ ಕಾರಣಕ್ಕೆ ಬ್ಯಾಂಕ್ ಅಧಿಕಾರಿಗಳು ಶಿಕ್ಷಣ ಸಾಲವನ್ನು ನಿರಾಕರಿಸಿದ್ದನ್ನು ಪ್ರಶ್ನಿಸಿ ನ್ಯಾಯಾಲಯ ಸಂಪರ್ಕಿಸಿದ್ದರು.
ತಂದೆಯ ಹೆಸರಿನಲ್ಲಿದ್ದ ಎರಡರಲ್ಲಿ ಒಂದು ಸಾಲ ಮನ್ನಾ ಆಗಿದ್ದು, ಮತ್ತೊಂದರಲ್ಲಿ 16,667 ರೂಪಾಯಿ ಬಾಕಿ ಇದ್ದು, ಶಿಕ್ಷಣ ಸಾಲವನ್ನು ಬ್ಯಾಂಕ್ ನಿರಾಕರಿಸಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ನಂತರ ಶಿಕ್ಷಣ ಸಾಲವಾಗಿ ಅರ್ಜಿದಾರರಿಗೆ 4.07 ಲಕ್ಷ ರೂ.ಗಳನ್ನು ಪಾವತಿಸುವಂತೆ ಎಸ್‍ಬಿಐಗೆ ನ್ಯಾಯಾಲಯ ಸೂಚಿಸಿದೆ.