ಕಾಸರಗೋಡು: ಮೇ ದಿನಾಚರಣೆ ಅಂಗವಾಗಿ ಸಿಐಟಿಯು ವತಿಯಿಂದ ಆಕರ್ಷಕ ಮೆರವಣಿಗೆ ಕಾಸರಗೋಡಿನಲ್ಲಿ ನಡೆಯಿತು. ನಂತರ ನಡೆದ ಸಾರ್ವಜನಿಕ ಸಭೆಗಳಲ್ಲಿ ನೂರಾರು ಸಿಐಟಿಯು ಅಖಿಲ ಭಾರತ ಕಾರ್ಯದರ್ಶಿ ಕೆ.ಕೆ.ದಿವಾಕರನ್ ಉದ್ಘಾಟಿಸಿದರು.
ಕಾರ್ಮಿಕ ವಲಯ ಎದುರಿಸುತ್ತಿರುವ ಸಮಸ್ಯೆ ದಿನಕಳೆದಂತೆ ಎಹಚ್ಚಾಗುತ್ತಿದ್ದು, ಶಾಶ್ವತ ಪರಿಹಾರಕ್ಕೆ ಸರ್ಕಾರ ಮುಂದಾಗಬೇಕು. ವಿವಿಧ ವಲಯಗಳಲ್ಲಿ ಕಾಯಂ ನೇಮಕಾತಿ ಕೈಬಿಟ್ಟು ಗುತ್ತಿಗೆ ಆಧಾರದ ನೇಮಕಾತಿ ಕಾರ್ಮಿಕ ವರ್ಗವನ್ನು ಅತಂತ್ರರನ್ನಾಗಿಸಿರುವುದಾಗಿ ತಿಳಿಸಿದರು.
ಒಕ್ಕೂಟದ ಜಿಲ್ಲಾಧ್ಯಕ್ಷೆ ವಿ.ಶೋಭಾ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಸಿ.ಎಚ್.ಕುಞಂಬು, ಕೆಎಸ್‍ಟಿಎ ರಾಜ್ಯ ಕಾರ್ಯದರ್ಶಿ ಕೆ.ರಾಘವನ್, ಸಿ.ಎಂ.ಜಲೀಲ್, ಎ.ನಾರಾಯಣನ್, ಕೆ.ಭಾಸ್ಕರನ್, ಸಿ.ವಿ.ಕೃಷ್ಣನ್, ಗಿರಿ ಕೃಷ್ಣನ್, ಅಬ್ದುಲ್ ರಹಮಾನ್ ಧನ್ಯವಾದ್, ಕೆ.ರಾಘವನ್, ಎಂ.ಸುಮತಿ ಉಪಸ್ಥಿತರಿದ್ದರು.. ಪಿ.ವಿ.ಕುಞಂಬು ಸ್ವಾಗತಿಸಿದರು.