ಕಾಸರಗೋಡು: ಬೇಡಡ್ಕ ಗ್ರಾಮ ಪಂಚಾಯಿತಿ ಹಸಿರು ಕ್ರಿಯಾ ಹಾಗೂ ಪಂಚಾಯಿತಿ ಆಡಳಿತ ಸಮಿತಿ ವತಿಯಿಂದ ತೆಕ್ಕಿಲ್-ಆಲಟ್ಟಿ ರಸ್ತೆಯನ್ನು ಕರಿಚ್ಚೇರಿಯಿಂದ ಪಳ್ಳತ್ತಿಂಗಾಲ್ ವರೆಗಿನ ಶುಚೀಕರಣ ಕಾರ್ಯ ಹಮ್ಮಿಕೊಳ್ಳಲಾಯಿತು. ಮಳೆಗಾಲಪೂರ್ವ ಶುಚೀಕರಣದ ಅಂಗವಾಗಿ ಕಾರ್ಯಕ್ರಮ ಅಯೋಜಿಸಲಾಗಿತ್ತು.
ರಸ್ತೆ ಎರಡೂ ಅಂಚಿನ ಕುರುಚಲು ಪೊದೆ ಹಾಗೂ ನೀರು ಹರಿಯುವ ಚರಂಡಿಯನ್ನು ಶುಚಿಗೊಳಿಸಲಾಯಿತು.
ಕರಿಚ್ಚೇರಿಯಲ್ಲಿ ಸರ್ವಜನಿಕ ಪರದೇಶದಲ್ಲಿ ತ್ಯಾಜ್ಯ ಎಸೆದವರನ್ನು ಪಂಚಾಯಿತಿ ಅಧ್ಯಕ್ಷೆ ಎಂ.ಧನ್ಯ ನೇತೃತ್ವದಲ್ಲಿ ಪತ್ತೆಹಚ್ಚುವ ಮೂಲಕ ತ್ಯಾಜ್ಯ ಸುರಿಯುವರಿಗೆ ಕಠಿಣ ಸಂದೇಶ ರವಾಣಿಸಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಕಸ ಸುರಿದು ಮಲಿನಗೊಳಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಧನ್ಯಾ ತಿಳಿಸಿದ್ದಾರೆ.