ಕಾಸರಗೋಡು: ಅವ್ಯವಸ್ಥೆಯ ಆಗರವಾಗಿರುವ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಶವಾಗಾರದ ಶೀತಲೀಕರಣ ಘಟಕ ಹಾಳಾಗಿರುವುದರಿಂದ ಮೃತದೇಹಗಳನ್ನಿರಿಸಲು ಖಾಸಗಿ ಆಸ್ಪತ್ರೆ ಮೊರೆಹೋಗಬೇಕಾಗಿದೆ.
ಜನರಲ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ತರಲಾಗುವ ಮೃತದೇಹವನ್ನು ಶೀತಲೀಕರಣ ಘಟಕದಲ್ಲಿರಿ ನಂತರ ಶವಮಹಜರು ನಡೆಸಬೇಕಾಗಿದೆ. ಮಂಗಳವಾರ ಆಸ್ಪತ್ರೆಗೆ ತರಲಾದ ಎರಡು ಮೃತದೇಹಗಳನ್ನೂ ಖಾಸಗಿ ಆಸ್ಪತ್ರೆಗೆ ರವಾಣಿಸಬೆಕಾಗಿ ಬಂದಿತ್ತು. ಖಾಸಗಿ ಆಸ್ಪತ್ರೆಗಳ ಶವಾಗಾರದಲ್ಲಿ ಮೃತದೇಹಗಳನ್ನಿರಿಸಬೇಕಾದರೆ, ಇದಕ್ಕೆ ನಿಗದಿ ಬಾಡಿಗೆ ನೀಡಬೇಕಾಗುತ್ತಿದೆ. ಇದನ್ನು ವೃತದೇಹದ ವಾರಸುದಾರರಿಂದಲೇ ವಸೂಲಿಮಾಡಬೇಕಾಗುತ್ತಿದೆ. ಬಡ ಜನತೆಗೆ ಇದು ಮತ್ತಷ್ಟು ಹೊರೆಯಾಗುತ್ತಿದೆ. ಈಗಾಗಲೇ ಆಸ್ಪತ್ರೆಯ ಲಿಫ್ಟ್ ಹಾಗೂ ಎಕ್ಸ್‍ರೇ ಘಟಕ ಘಟಕ ಹಾಳಾಗಿ ರೋಗಿಗಳು ಪರದಡುವ ಮಧ್ಯೆ ಫ್ರೀಸರ್ ಕೈಕೊಟ್ಟಿರುವುದು ಮತ್ತಷ್ಟು ಸಮಸ್ಯೆಗೆ ಕಾರಣವಾಗಿದೆ.