ಕಾಸರಗೋಡು: ಘನತ್ಯಾಜ್ಯ ನಿರ್ವಹಣಾ ಯೋಜನೆ ಸಿದ್ಧಪಡಿಸುವ ನಿಟ್ಟಿನಲ್ಲಿ ಸಮಾಲೋಚನಾ ಸಭೆ ಕಾಞಂಗಾಡು ನಗರಸಭೆಯಲ್ಲಿ ನಡೆಯಿತು. ಬ್ಲಾಕ್ ಪಂಚಾಯಿತಿ ರಜತ ಜ್ಯುಬಿಲಿ ಸಭಾಂಗಣದಲ್ಲಿ ನಡೆದ ಸಭೆಯನ್ನು ನಗರಸಭೆ ಅಧ್ಯಕ್ಷೆ ಕೆ.ವಿ.ಸುಜಾತಾ ಉದ್ಘಾಟಿಸಿದರು. ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಕೆ.ವಿ.ಸರಸ್ವತಿ ಅಧ್ಯಕ್ಷತೆ ವಹಿಸಿದ್ದರು.
ವಿಶ್ವಬ್ಯಾಂಕ್ ಮತ್ತು ಎಐಐಬಿ ನೆರವಿನೊಂದಿಗೆ ಕೇರಳ ಸರ್ಕಾರವು ಜಾರಿಗೆ ತಂದಿರುವ ಕೇರಳ ಘನತ್ಯಾಜ್ಯ ನಿರ್ವಹಣೆ ಯೋಜನೆಯ ಮೂಲಕ ಮುಂದಿನ ಐದು ವರ್ಷಗಳಲ್ಲಿ ಮುನ್ನೂರು ಮಿಲಿಯನ್ ಯುಎಸ್ ಡಾಲರ್ ಮೌಲ್ಯದ ಯೋಜನೆಗಳನ್ನು ಜಾರಿಗೊಳಿಸುವ ಗುರಿಯಿರಿಸಲಾಗಿದೆ. ಘನತ್ಯಾಜ್ಯ ಸಮಸ್ಯೆಗಳನ್ನು ಪರಿಹರಿಸಲು ಆಧುನಿಕ ತಾಂತ್ರಿಕ ಉತ್ಕøಷ್ಟತೆಯೊಂದಿಗೆ ತ್ಯಾಜ್ಯ ನಿರ್ವಹಣೆ ಮತ್ತು ಸಂಸ್ಕರಣೆಗೆ ವೈಜ್ಞಾನಿಕ ವ್ಯವಸ್ಥೆಗಳನ್ನು ಸಿದ್ಧಪಡಿಸಲು ಸಮಾಲೋಚನಾ ಸಭೆಯ ಮೂಲಕ ಸಲಹೆಗಳು ಮತ್ತು ಎಲ್ಲಾ ವಲಯಗಳ ಭಾಗವಹಿಸುವಿಕೆ ಲಭ್ಯವಾಯಿತು.
ರಾಜ್ಯ ಸರ್ಕಾರದ ಕೇರಳ ಘನತ್ಯಾಜ್ಯ ನಿರ್ವಹಣಾ ಯೋಜನೆ (ಕೆಎಸ್‍ಡಬ್ಲೈಉಎಂಪಿ)ಯನ್ವಯ ಕಾಞಂಗಾಡ್ ಮುನ್ಸಿಪಲ್ ಕಾಪೆರ್Çರೇಶನ್12.9 ಕೋಟಿ ರೂ.ಗಳ ಯೋಜನೆಯ ಪುರೇಷೆ ತಯಾರಿಗಾಗಿ ಸಮಾಲೋಚನಾ ಸ¨ಭೆ ಆಯೋಜಿಸಲಾಗಿತ್ತು. ಈ ಸಂದರ್ಭ ಅಸ್ತಿತ್ವದಲ್ಲಿರುವ ವ್ಯವಸ್ಥೆಗಳು ಮತ್ತು ನ್ಯೂನತೆಗಳನ್ನು ಮೌಲ್ಯಮಾಪನ ಮಾಡಲಾಯಿತು. ತರಗತಿಗಳು ಮತ್ತು ಗುಂಪು ಚರ್ಚೆಗಳಿಗಾಗಿ, ಕೆಎಸ್‍ಡಬ್ಲ್ಯುಎಂಪಿ ಉಪ ಸಂಯೋಜಕ ಕೆ.ವಿ.ಮಿಥುನ್ ಕೃಷ್ಣನ್, ಸಾಮಾಜಿಕ ತಜ್ಞ ಎನ್.ಆರ್.ರಾಜೀವ್, ನಿಗಾ ತಜ್ಞ ಸಿ.ಎಂ.ಬೈಜು,ಪರಿಸರ ತಜ್ಞ ಡಾ.ಜಿ.ಮಗೇಶ್, ತಾಂತ್ರಿಕ ಸಹಾಯಕ ಸಮಾಲೋಚನಾ ಅಧಿಕಾರಿ ಅಜಯಕುಮಾರ್, ಪ್ರೇಮಲಾಲ್, ಸುಲಾಲ್ ಸ್ಯಾಮುಯೆಲ್, ರೋಹಿತ್ ರಾಜ್ ನೇತೃತ್ವ ವಹಿಸಿದ್ದರು. ನಗರಸಭೆ ಉಪಾಧ್ಯಕ್ಷ ಬಿಲ್ಟೆಕ್ ಅಬ್ದುಲ್ಲಾ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಅನೀಶನ್, ಅಶೋಕ್ ಕುಮಾರ್, ಕೆ.ಕೆ.ಜಾಫರ್ ಉಪಸ್ಥಿತರಿದ್ದರು.. ತ್ಯಾಜ್ಯ ನಿರ್ವಹಣೆ ಮತ್ತು ವಿಲೇವಾರಿ ಕುರಿತು ತರಗತಿ, ವಿವರವಾದ ಗುಂಪು ಚರ್ಚೆಗಳನ್ನು ನಡೆಸಲಾಯಿತು.
ನಗರಸಭೆ ಕಾರ್ಯದರ್ಶಿಶ್ರೀಜಿತ್ ಸ್ವಾಗತಿಸಿ, ನಗರಸಭೆ ಆರೋಗ್ಯ ಮೇಲ್ವಿಚಾರಕಿ ಪಿ.ಶೈನ್ ಜೋಸ್ ಧನ್ಯವಾದವಿತ್ತರು.