ಕೂದಲು ತುಂಬಾ ಉದುರುತ್ತಿದೆ, ಇದಕ್ಕೆ ಯಾವ ಮನೆಮದ್ದು ಒಳ್ಳೆಯದು ಎಂದು ನೀವು ಹುಡುಕುತ್ತಿದ್ದರೆ ಕೆಂಪು ಈರುಳ್ಳಿಯನ್ನು ಮನೆಮದ್ದಾಗಿ ಏಕೆ ಟ್ರೈ ಮಾಡಬಾರದು. ಈರುಳ್ಳಿ ಕೂದಲಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು, ಅಲ್ಲದೆ ಕೂದಲು ಉದುರುವುದನ್ನು ತಡೆಗಟ್ಟುವಲ್ಲಿ ಕೂಡ ಸಹಕಾರಿ, ಹೇಗೆ ನೋಡೋಣ ಬನ್ನಿ:
ಯಾರಿಗೆ ಕೆಂಪು ಈರುಳ್ಳಿ ರಸ ತುಂಬಾ ಒಳ್ಳೆಯದು?
* alopecia ಚಿಕಿತ್ಸೆ ಪಡೆಯುತ್ತಿದ್ದರೆ
* ತಲೆಬುಡದಲ್ಲಿ ಉರಿ, ತುರಿಕೆ ಕಂಡು ಬರುತ್ತಿದ್ದರೆ
* ಕೂದಲು ತುಂಬಾ ಉದುರುತ್ತಿದ್ದರೆ
* ಹೊಟ್ಟೆ
* ಕೂದಲು ತುಂಬಾ ತೆಳುವಾಗುವುದು
* ಕೂದಲಿನ ಬುಡ ಕವಲೊಡೆಯುತ್ತಿದ್ದರೆ'
* ಅಕಾಲಿಕ ನೆರೆ
* ತಲೆಬುಡದಲ್ಲಿ ಸೋಂಕು ಉಂಟಾಗಿದ್ದರೆ
ಈರುಳ್ಳಿ ರಸ ಈ ಸಮಸ್ಯೆಗೆ ಪರಿಣಾಮಕಾರಿಯೇ?
ಹೌದು, ನೀವು ರಸ ಬಳಸಿದರೆ ನಿಮ್ಮ ಈ ಸಮಸ್ಯೆಗೆ ಉತ್ತಮ ಪರಿಹಾರ ಸಿಗಲಿದೆ. ಕೂದಲಿನ ಬುಡ ಬಲವಾಗಿಸುವುದು, ಅಲ್ಲದೆ ಕೂದಲು ಉದುರುವುದನ್ನು ತಡೆಗಟ್ಟುವಲ್ಲಿ ಸಹಕಾರಿಯಾಗಿದೆ. ಅಲ್ಲದೆ ಇದು ಕೊಲೆಜಿನ್ ಉತ್ಪತ್ತಿ ಹೆಚ್ಚಿಸುವುದರಿಂದ ನಿಮ್ಮ ತ್ವಚೆಯ ಆರೋಗ್ಯಕ್ಕೂ ಒಳ್ಳೆಯದು. ಈರುಳ್ಳಿ ರಸ ಕೂದಲಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂಬುವುದು ವೈಜ್ಞಾನಿಕವಾಗಿ ಕೂಡ ಸಾಬೀತಾಗಿದೆ. ಹಾಗಂತ ಈರುಳ್ಳಿ ರಸದಿಂದ ಬಕ್ಕತಲೆ ಸಮಸ್ಯೆ ಉಂಟಾಗಿದ್ದರೆ ಕೂದಲು ಬರಿಸಲು ಸಾಧ್ಯವಿಲ್ಲ, ಆದರೆ ನೀವು ಕೂದಲು ಉದುರುತ್ತಿದ್ದಾಗಲೇ ಈರುಳ್ಳಿ ರಸ ಬಳಿಸಿದರೆ ಕೂದಲು ಉದುರುವುದನ್ನು ತಡೆಗಟ್ಟಬಹುದು.
ಈರುಳ್ಳಿ ರಸ ಬಳಸುವ ಮುನ್ನ ಈ ಅಂಶಗಳು ತಿಳಿದಿರಲಿ
* ನಿಮಗೆ ಈರುಳ್ಳಿ ಅಲರ್ಜಿ ಇದ್ದರೆ ಬಳಸಬೇಡಿ
* ಈರುಳ್ಳಿ ವಾಸನೆ ಇಷ್ಟವಾಗದಿದ್ದರೆ ಬಳಸಬೇಡಿ, ಇದರ ಕಟು ವಾಸನೆ ನಿಮಗೆ ತುಂಬಾ ಕಿರಿಕಿರಿ ಅನಿಸಬಹುದು.
ಈರುಳ್ಳಿ ರಸ ಹೇಗೆ ಬಳಸಬಹುದು
ಈರುಳ್ಳಿ ರಸವನ್ನು ನೀವು ತೆಂಗಿನೆಣ್ಣೆ ಅಥವಾ ಲೋಳೆಸರ ಅಥವಾ ಈ ಮೂರನ್ನು ಮಿಕ್ಸ್ ಮಾಡಿ ಬಳಸಿ, ಅರ್ಧ ಗಂಟೆಯ ಬಳಿಕ ಮೈಲ್ಡ್ ಶ್ಯಾಂಪೂ ಹಚ್ಚಿ ತೊಳೆಯಿರಿ. ಈ ರೀತಿ ವಾರದಲ್ಲಿ ಎರಡು ಬಾರಿ ಮಾಡುತ್ತಾ ಬಂದರೆ 2-3 ತಿಂಗಳ ಒಳಗಡೆ ಒಳ್ಳೆಯ ಫಲಿತಾಂಶ ಕಾಣಬಹುದು.